ETV Bharat / state

ಬೆಂಗಳೂರು ಟೆಕ್​ ಸಮಾವೇಶ.. 20 ನೂತನ ಸ್ಟಾರ್ಟಪ್‌ ಉತ್ಪನ್ನಗಳ ಬಿಡುಗಡೆ - ಈಟಿವಿ ಭಾರತ ಕನ್ನಡ

ಬೆಂಗಳೂರು ಟೆಕ್​ ಸಮಾವೇಶದ ಎರಡನೇ ದಿನ ಐಟಿ ಮತ್ತು ಬಿಟಿ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಪಡಿಸಿರುವ 20 ನೂತನ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು.

bengaluru-tech-summit-launch-of-20-new-startup-products
ಬೆಂಗಳೂರು ಟೆಕ್​ ಸಮಾವೇಶ : 20 ನೂತನ ಸ್ಟಾರ್ಟಪ್‌ ಉತ್ಪನ್ನಗಳ ಬಿಡುಗಡೆ
author img

By

Published : Nov 17, 2022, 9:02 PM IST

ಬೆಂಗಳೂರು : ಬೆಂಗಳೂರು ಟೆಕ್​ ಸಮಾವೇಶದ ಎರಡನೆಯ ದಿನವಾದ ಗುರುವಾರದಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಅಗ್ರಿಟೆಕ್‌, ಮೆಡ್‌ಟೆಕ್‌, ಎಜುಟೆಕ್‌ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿವಿಧ ಸ್ಟಾರ್ಟಪ್‌ಗಳು ಅಭಿವೃದ್ಧಿಪಡಿಸಿರುವ 20 ನೂತನ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, "2025ರ ಒಳಗೆ ಬೆಂಗಳೂರಿನಲ್ಲಿ 20 ಸಾವಿರ ನವೋದ್ಯಮಗಳನ್ನು ಹೊಂದುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ಈಗಾಗಲೇ ನಮ್ಮಲ್ಲಿ 22 ಸಾವಿರಕ್ಕೂ ಹೆಚ್ಚು ಸ್ಟಾರ್ಟಪ್‌ಗಳಿವೆ. ಬೆಂಗಳೂರಿನಲ್ಲಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯ ಪರಿಸರವೇ ಇದಕ್ಕೆ ಕಾರಣ. ವೆಂಚರ್ ಕ್ಯಾಪಿಟಲ್‌ ಕ್ಷೇತ್ರದಲ್ಲಿ ನಮ್ಮ ನಗರವು ಇಡೀ ಜಗತ್ತಿನಲ್ಲೇ 5ನೇ ಸ್ಥಾನದಲ್ಲಿದೆ" ಎಂದು ಹೇಳಿದರು.

ನೂತನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿರುವ ಸ್ಟಾರ್ಟಪ್‌ಗಳಲ್ಲಿ ಹೆಚ್ಚಿನವು ಸರ್ಕಾರದ ನಾನಾ ಇನ್‌ಕ್ಯುಬೇಷನ್‌ ಕೇಂದ್ರಗಳ ಮಾರ್ಗದರ್ಶನ ಮತ್ತು ನೆರವು ಪಡೆದುಕೊಂಡಿದ್ದವು. ಈ ನಿಟ್ಟಿನಲ್ಲಿ ನಮ್ಮ ಕೆ-ಟೆಕ್‌ ನಾವೀನ್ಯತಾ ಹಬ್‌ಗಳು, ಉತ್ಕೃಷ್ಟತಾ ಕೇಂದ್ರಗಳು, ಟೆಕ್ನಾಲಜಿ ಬಿಜಿನೆಸ್‌ ಪರಿಪೋಷಣಾ ಕೇಂದ್ರಗಳು, ಸಿ-ಕ್ಯಾಂಪ್‌, ಭಾರತೀಯ ವಿಜ್ಞಾನ ಸಂಸ್ಥೆ, ನಾಸ್ಕಾಂ ಮತ್ತು ಐಎಎಂಎಐ ತರಹದ ಸಂಸ್ಥೆಗಳು ಮಹತ್ವದ ಪಾತ್ರ ವಹಿಸಿರುವುದು ಶ್ಲಾಘನೀಯ ಎಂದರು.

20 ನೂತನ ಉತ್ಪನ್ನಗಳ ಬಿಡುಗಡೆ : ಇನ್ನು ಕೆಲವು ಕಂಪನಿಗಳಿಗೆ ಸರ್ಕಾರದ ಐಡಿಯಾ2 ಪಿಓಸಿ ಮತ್ತು ಎಲಿವೇಟ್‌ ಉಪಕ್ರಮಗಳ ಮೂಲಕ ಬೀಜನಿಧಿಯನ್ನೂ ಕೊಡಲಾಗಿತ್ತು. ಇಂದು ನೂತನ ಉತ್ಪನ್ನಗಳನ್ನು ಸಿದ್ಧಪಡಿಸಿರುವ 20 ನವೋದ್ಯಮಗಳ ಪೈಕಿ ಮೂರು ಕಂಪನಿಗಳನ್ನು ಮಹಿಳೆಯರೇ ಮುನ್ನಡೆಸುತ್ತಿರುವುದು ಉತ್ತಮ ಸಂಗತಿ ಎಂದು ಅಭಿಪ್ರಾಯಪಟ್ಟರು.

ಬಿಡುಗಡೆಯಾಗಿರುವ ಉತ್ಪನ್ನಗಳಲ್ಲಿ ಕ್ಲೀನ್‌ಟೆಕ್‌, ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌, ಐಓಟಿ, ಬ್ಲಾಕ್‌ಚೈನ್‌, ಸೈಬರ್ ಸೆಕ್ಯುರಿಟಿ, ವಿದ್ಯುತ್‌ ಚಾಲಿತ ವಾಹನ ಮತ್ತು ಇಎಸ್‌ಡಿಎಂ ವಲಯಗಳಿಗೆ ಸೇರಿದ ಉತ್ಪನ್ನಗಳಿವೆ ಎಂದು ಸಚಿವರು ಇದೇ ವೇಳೆ ಮಾಹಿತಿ ನೀಡಿದರು.

ಇದನ್ನೂ ಓದಿ : 25ನೇ ಬೆಂಗಳೂರು ತಂತ್ರಜ್ಞಾನ ಸಮಾವೇಶ: ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತಾ ನೀತಿ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.