ETV Bharat / state

ಅಸಲಿ ಪಾಸ್ ಪೋರ್ಟ್ ಬಳಸಿಯೇ ವಿದೇಶಕ್ಕೆ ಪರಾರಿಯಾಗಿದ್ದಾನೆ ಶಂಕಿತ ಉಗ್ರ ಜುನೈದ್! - ತಲೆಮರೆಸಿಕೊಂಡಿರುವ ಶಂಕಿತ ಉಗ್ರ ಮೊಹಮ್ಮದ್ ಜುನೈದ್

ಅಸಲಿ ಪಾಸ್ ಪೋರ್ಟ್ ಬಳಸಿಯೇ ಶಂಕಿತ ಉಗ್ರ ಜುನೈದ್ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂಬ ಸತ್ಯ ತನಿಖೆ ವೇಳೆ ಬಹಿರಂಗಗೊಂಡಿದೆ.

Suspected terrorist Junaid escaped  Suspected terrorist Junaid escaped abroad  Junaid escaped abroad using a valid passport  ಅಸಲಿ ಪಾಸ್ ಪೋರ್ಟ್ ಬಳಸಿಯೇ ವಿದೇಶಕ್ಕೆ ಪರಾರಿ  ವಿದೇಶಕ್ಕೆ ಪರಾರಿಯಾಗಿದ್ದಾನೆ ಶಂಕಿತ ಉಗ್ರ ಜುನೈದ್  ಶಂಕಿತ ಉಗ್ರ ಜುನೈದ್ ವಿದೇಶಕ್ಕೆ ಪರಾರಿ  ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯವೆಸಲು ಸಂಚು  ತಲೆಮರೆಸಿಕೊಂಡಿರುವ ಶಂಕಿತ ಉಗ್ರ ಮೊಹಮ್ಮದ್ ಜುನೈದ್  ಜುನೈದ್ ಪತ್ತೆಗೆ ಈಗಾಗಲೇ ಲುಕ್ ಔಟ್ ನೊಟೀಸ್ ಜಾರಿ
ಅಸಲಿ ಪಾಸ್ ಪೋರ್ಟ್ ಬಳಸಿಯೇ ವಿದೇಶಕ್ಕೆ ಪರಾರಿಯಾಗಿದ್ದಾನೆ ಶಂಕಿತ ಉಗ್ರ ಜುನೈದ್!
author img

By

Published : Jul 24, 2023, 8:48 PM IST

Updated : Jul 24, 2023, 9:40 PM IST

ಬೆಂಗಳೂರು: ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಶಂಕಿತ ಉಗ್ರ ಮೊಹಮ್ಮದ್ ಜುನೈದ್ ಪತ್ತೆಗೆ ಈಗಾಗಲೇ ಲುಕ್ ಔಟ್ ನೊಟೀಸ್ ಜಾರಿಯಾಗಿದೆ. ಈ ಲುಕ್​ ಔಟ್​ ನೋಟಿಸ್​ ಜಾರಿ ಮಾಡಿರುವ ಬೆಂಗಳೂರು ಕೇಂದ್ರಿಯ ಅಪರಾಧ ವಿಭಾಗ (ಸಿಸಿಬಿ) ಶಂಕಿತನ ಹಿನ್ನೆಲೆ ಬಗ್ಗೆ ಮಾಹಿತಿ ಕಲೆ ಹಾಕಿದೆ.

2021ರಲ್ಲಿ ರಕ್ತಚಂದನ ಸಾಗಾಟ ಪ್ರಕರಣದಡಿ ಜೈಲಿಗೆ ಹೋಗಿ ಬಂದಿದ್ದ ಜುನೈದ್, ಬೆಂಗಳೂರು ಬಿಟ್ಟು ವಿದೇಶದಲ್ಲಿ ಅಡಗಿಕೊಂಡಿದ್ದಾನೆ. ಕೊಲ್ಲಿ ರಾಷ್ಟ್ರವಾಗಿರುವ ಅಜೆರ್ಭೈಜಾನ್ ದೇಶದ ಬಾಕು ಹಾಗೂ ಅಫ್ಘಾನಿಸ್ತಾನದಲ್ಲಿ ನೆಲೆಯೂರಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಇಂಟರ್​ಪೋಲ್ ಮೂಲಕ ಪತ್ತೆಗೆ ಸಿಸಿಬಿ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ ಅಪರಾಧ ಪ್ರಕರಣ ದಾಖಲಾಗುವ ಮುನ್ನ ಆತನ ವರ್ತನೆ ಹೇಗಿತ್ತು. ಹೆಚ್ಚು ಒಡನಾಟದಲ್ಲಿ ಇರುವ ವ್ಯಕ್ತಿಗಳ ಬಗ್ಗೆ ಸಿಸಿಬಿ ಮಾಹಿತಿ ಕಲೆ ಹಾಕಿದೆ. ಶಂಕಿತನಿಗೆ ಗರ್ಲ್ ಫ್ರೆಂಡ್ ಇದ್ದು, ಆದರೆ 2017ರಲ್ಲಿ ಕೊಲೆ ಪ್ರಕರಣದಡಿ ಜೈಲಿಗೆ ಹೋದ ನಂತರ ಪರಸ್ಪರ ಸಂಪರ್ಕ ಕಡಿತಗೊಂಡಿರುವುದು ಗೊತ್ತಾಗಿದೆ. ಯುವತಿಯನ್ನ ಸಂಪರ್ಕಿಸಿರುವ ಸಿಸಿಬಿ ಆತನ ನಡವಳಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಕುರಿ ವ್ಯಾಪಾರಿಯಾಗಿದ್ದ ಜುನೈದ್ ಕ್ರಿಮಿನಲ್ ಕೃತ್ಯ ಭಾಗಿಯಾಗುವ ಮುನ್ನವೇ ಪಾಸ್ ಪೋರ್ಟ್ ಹಾಗೂ ವೀಸಾ ರೆಡಿ ಮಾಡಿಕೊಂಡಿದ್ದ. ಒರಿಜಿನಲ್ ಪಾಸ್ ಪೋರ್ಟ್ ಬಳಸಿಯೇ ಹೋಗಿರುವುದು ದೃಢಪಡಿಸಿಕೊಂಡಿರುವ ಸಿಸಿಬಿ ಅಪರಾಧ ಹಿನ್ನೆಲೆ ಇಲ್ಲದಿರುವುದರ ಸಂಬಂಧ ಅಧಿಕಾರಿಗಳು ಪಾಸ್ ಪೋರ್ಟ್ ಸೀಜ್ ಮಾಡಿರಲಿಲ್ಲ. ಈತನ ಬಂಧನಕ್ಕಾಗಿ ಇಂಟರ್​ಪೋಲ್​ನೊಂದಿಗೆ ಪೊಲೀಸರು ನಿರಂತರ ಸಂಪರ್ಕದಲ್ಲಿದ್ಧಾರೆ.

ಓದಿ: ಬೆಂಗಳೂರಿನಲ್ಲಿ ಸೆರೆಯಾದ ಶಂಕಿತ ಉಗ್ರರ ಹಿಂದಿರುವ ಮಾಸ್ಟರ್‌ಮೈಂಡ್ ಯಾರು ಗೊತ್ತಾ?

ಐವರು ಉಗ್ರರು ಬಂಧನ: ರಾಜ್ಯ ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸುತ್ತಿದ್ದ ಗಂಭೀರ ಆರೋಪದಡಿ ಐವರು ಶಂಕಿತ ಉಗ್ರರನ್ನು ನಗರ ಪೊಲೀಸರು ಜುಲೈ 19ರಂದು ಬಂಧಿಸಿದ್ದರು. ಬಸ್ ನಿಲ್ದಾಣ ಸೇರಿದಂತೆ ನಗರದ ಜನಸಂದಣಿ ಪ್ರದೇಶಗಳಲ್ಲಿ ಬಾಂಬ್ ಸ್ಫೋಟಿಸಲು ಹೊಂಚು ಹಾಕುತ್ತಿದ್ದ ಆರೋಪದಡಿ ಸುಹೇಲ್, ಉಮರ್, ಜಾಹಿದ್, ಮುದಾಸಿರ್ ಹಾಗೂ ಫೈಜರ್ ಎಂಬವರನ್ನು ಬಂಧಿಸಲಾಗಿದೆ. ಇವರಿಂದ 7 ಕಂಟ್ರಿಮೇಡ್ ಪಿಸ್ತೂಲ್​ಗಳು, 45 ಜೀವಂತ ಗುಂಡುಗಳು, ವಾಕಿಟಾಕಿ ಸೆಟ್ಸ್, ಒಂದು ಡ್ರ್ಯಾಗರ್ ಹಾಗೂ 12 ಮೊಬೈಲ್ ಫೋನ್​ಗಳನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು.

ಪ್ರಕರಣದಲ್ಲಿ ಶಾಮೀಲಾಗಿರುವ 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಶಂಕಿತ ಉಗ್ರ ಟಿ. ನಜೀರ್ ಸದ್ಯ ಆತ ನ್ಯಾಯಾಂಗ ಬಂಧನಲ್ಲಿದ್ದಾನೆ. ಎರಡನೇ ಆರೋಪಿ ಜುನೈದ್ ಸದ್ಯ ತಲೆಮರೆಸಿಕೊಂಡಿದ್ದಾನೆ‌. ಹೆಚ್ಚಿನ ವಿಚಾರಣೆಗಾಗಿ ಬಂಧಿತ ಐವರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್​ ಬಂಧನದ ಬಳಿಕ ಮಾಹಿತಿ ನೀಡಿದ್ದರು.

Last Updated : Jul 24, 2023, 9:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.