ETV Bharat / state

​ತಪ್ಪಿಸಿಕೊಳ್ಳಲು ಫುಟ್‌ಬಾಲ್‌ ಸ್ಟೇಡಿಯಂನೊಳಗೆ ನುಗ್ಗಿದ್ರೂ ಬಿಡದೆ ರೌಡಿಶೀಟರ್ ಹತ್ಯೆ: ಸಿಸಿಟಿವಿ ದೃಶ್ಯ - rowdy sheeter murdered in football stadium

ಭಾನುವಾರ ಬೆಂಗಳೂರಿನ ಅಶೋಕನಗರದ ಸ್ಟೇಟ್ ಫುಟ್‌ಬಾಲ್‌ ಅಸೋಸಿಯೇಷನ್ ಆವರಣದಲ್ಲೇ ಬರ್ಬರವಾಗಿ ಹತ್ಯೆಯಾದ ರೌಡಿಶೀಟರ್​​ ಅರವಿಂದ್​ ಕೊಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

bengaluru rowdy sheeter murder scene captured in cctv
ಕೊಲೆಯಾದ ರೌಡಿ ಶೀಟರ್​ ಅರವಿಂದ
author img

By

Published : Sep 13, 2021, 8:31 PM IST

ಬೆಂಗಳೂರು: ಫುಟ್ಬಾಲ್ ಸ್ಟೇಡಿಯಂ ಬಳಿ ಭಾನುವಾರ ಸಂಜೆ 4.30ಕ್ಕೆ ಹತ್ಯೆಯಾದ ರೌಡಿಶೀಟರ್ ಅರವಿಂದ್ (30)ನನ್ನು ದುಷ್ಕರ್ಮಿಗಳ ಗುಂಪು ಕೊಚ್ಚಿ ಕೊಲೆಗೈದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

bengaluru rowdy sheeter murder scene captured in cctv
ಸಿಸಿಟಿವಿ ದೃಶ್ಯ

ಪುಲಿಕೇಶಿ ನಗರದ ರೌಡಿ ಶೀಟರ್ ಅರವಿಂದ್ ಅಲಿಯಾಸ್ ಲೀ ಎಂಬಾತನನ್ನು ಕೆಲವು ದಿನಗಳ ಹಿಂದೆ ಗೂಂಡಾ ಕಾಯ್ದೆಯಡಿ ಭಾರತಿನಗರ ಪೊಲೀಸರು ಜೈಲಿಗಟ್ಟಿದ್ದರು. ಜಾಮೀನಿನ ಮೇಲೆ ಇತ್ತೀಚೆಗೆ ಹೊರಬಂದಿದ್ದ ಈತನನ್ನು ದುಷ್ಕರ್ಮಿಗಳು ಕೊಲೆಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಂಗತಿ ಹೊರಬಿದ್ದಿದೆ.ಕೊಲೆ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಐವರಿಂದ ದಾಳಿ​​ ನಡೆದಿರುವುದು ಕೂಡ ಬೆಳಕಿಗೆ ಬಂದಿದೆ.

ಅಟ್ಟಾಡಿಸಿಕೊಂಡು ಓಡಿದ ದುಷ್ಕರ್ಮಿಗಳು

ಇದನ್ನೂ ಓದಿ:ಬೆಂಗಳೂರಿನಲ್ಲಿ ರೌಡಿಶೀಟರ್​ನನ್ನು ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು!

ಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದ ಅರವಿಂದ್​ ವಿರುದ್ಧ ರೌಡಿ ಪಟ್ಟಿ ತೆರೆಯಲಾಗಿತ್ತು. ಇತ್ತೀಚೆಗೆ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ಅರವಿಂದ್​, ಫುಟ್​ಬಾಲ್​ ತಂಡವೊಂದರ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ.

ಕೊಲೆಯಾದ ರೌಡಿ ಶೀಟರ್​ ಅರವಿಂದ್​

ಭಾನುವಾರ ಎಂದಿನಂತೆ ಆಟವಾಡಲು ಸ್ನೇಹಿತರ ಜೊತೆ ಕೆಎಸ್​ಎಫ್​ಎ ಮುಂಭಾಗದ ಬಿಬಿಎಂಪಿ ಮೈದಾನಕ್ಕೆ ಬಂದಿದ್ದಾನೆ. ಆಟವಾಡಿದ ಮೇಲೆ ಪಕ್ಕದಲ್ಲಿದ್ದ ಅಂಗಡಿಯಲ್ಲಿ ಜ್ಯೂಸ್​ ಕುಡಿಯುತ್ತಿದ್ದ. ಈ ವೇಳೆ ಆತನ ಮೇಲೆ ದಾಳಿ ನಡೆಸಲಾಗಿದೆ. ಆದರೆ ಅಲ್ಲಿಂದ ತಪ್ಪಿಸಿಕೊಂಡು ಅರವಿಂದ್ ಸ್ಟೇಡಿಯಂ ಕಾಂಪೌಂಡ್ ಒಳಗೆ ನುಗ್ಗಿದ್ದ. ದುಷ್ಕರ್ಮಿಗಳ ಅಬ್ಬರಕ್ಕೆ ಅರವಿಂದ್​ ಅಲ್ಲೇ ಅಡಗಿ ಕೂತಿದ್ದಾನೆ. ತಪ್ಪಿಸಿಕೊಳ್ಳಲು ರೆಫ್ರಿ ಕೊಠಡಿಯೊಳಗೆ ಓಡಿಹೋಗಿ ಬಾಗಿಲು ಹಾಕಿಕೊಂಡರೂ ಬಿಡದ ದುಷ್ಕರ್ಮಿಗಳು ಕೊನೆಗೂ ಬಚ್ಚಿಟ್ಟುಕೊಂಡವನನ್ನು ಎಳೆತಂದು ಮಾರಕಾಸ್ತ್ರಗಳಿಂದ ನೇರಾನೇರ ಮುಖ, ತಲೆಗೆ ಹೊಡೆದು ಕೊಂದು ಹಾಕಿದ್ದಾರೆ.

ಈ ಘಟನೆ ಅಶೋಕನಗರದ ಸ್ಟೇಟ್ ಫುಟ್‌ಬಾಲ್‌ ಅಸೋಸಿಯೇಷನ್ ಆವರಣದಲ್ಲೇ ನಡೆದಿದ್ದು, ಅಸೋಸಿಯೇಷನ್ ಮುಖ್ಯ ದ್ವಾರದ ಸಿಸಿಟಿವಿಯಲ್ಲಿ ಆರೋಪಿಗಳ ಭೀಕರ ಕೃತ್ಯ ಸೆರೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.