ETV Bharat / state

ಸಿಸಿಬಿ ಕೈಗೆ ಮೊಬೈಲ್ ಕೊಟ್ಟ ಕಾರ್ಪೊರೇಟರ್​: ಜಾಕೀರ್​ಗೆ ಉರುಳಾಗುತ್ತಾ ವಾಟ್ಸ್ ಆ್ಯಪ್​ ಸಂದೇಶ? - ಬೆಂಗಳೂರು ಡಿ. ಜೆ ಹಳ್ಳಿ ಗಲಭೆ

ಡಿ.ಜೆ ಹಳ್ಳಿ, ಕೆ.ಜಿ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರ್ಪೊರೇಟರ್​ ಜಾಕಿರ್​ ಹುಸೇನ್​ರನ್ನು ವಿಚಾರಣೆಗೆ ಕರೆದಿದ್ದ ಪೊಲೀಸರು ಅವರ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ರೀಡ್​ ಮಾಡದೆ ಬಾಕಿ ಉಳಿದಿರುವ ಕೆಲ ಸಂದೇಶಗಳು ಜಾಕಿರ್​ಗೆ ಉರುಳಾಗುವ ಲಕ್ಷಣಗಳಿವೆ ಎನ್ನಲಾಗ್ತಿದೆ.

Bengaluru riot update
ಕಾರ್ಪೋರೇಟರ್​ ಜಾಕಿರ್​ ಮೊಬೈಲ್ ವಶ
author img

By

Published : Aug 21, 2020, 11:29 AM IST

ಬೆಂಗಳೂರು: ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಮೇಯರ್ ಸಂಪತ್ತ್ ರಾಜ್ ಜೊತೆ ಬಿಬಿಎಂಪಿ ಸದಸ್ಯ ಜಾಕೀರ್ ಹುಸೇನ್ ಕೈ ಜೋಡಿಸಿದ್ದಾರೆಂಬ ಆರೋಪದ ಮೇರೆಗೆ ಸಿಸಿಬಿ ಪೊಲೀಸರು ಪ್ರಾಥಮಿಕ ತನಿಖೆಗೆ ಕರೆದಿದ್ದರು. ಜಾಕೀರ್ ಹುಸೇನ್​ನಿಂದ ಸುಮಾರು 16 ಪುಟಗಳ ಹೇಳಿಕೆ ದಾಖಲಿಸಿಕೊಂಡಿದ್ದರು. ಸಿಸಿಬಿ ಪೊಲೀಸರು ಕೇವಲ ವಿಚಾರಣೆಗೆ ಕರೆದಿದ್ರು ಎಂದು ಜಾಕೀರ್ ಹುಸೇನ್ ಅನ್ಕೊಂಡಿದ್ರು. ಆದರೆ, ಅಧಿಕಾರಿಗಳು ಜಾಕೀರ್​ ಮೊಬೈಲ್​ನ್ನು ರಿಟ್ರೀವರ್ ಮಾಡಲು ಮೊಬೈಲ್ ಜಪ್ತಿ ಮಾಡಿದ್ದರು.

ಮೂರು ದಿನದ ಹಿಂದೆ ನೋಟಿಸ್: ಘಟನೆ ನಡೆದು‌ ಮೂರು ದಿನಗಳ ಬಳಿಕ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಜಾಕೀರ್​ಗೆ ನೋಟಿಸ್ ಜಾರಿ ಮಾಡಿದ್ದರು. ಬಳಿಕ ಕರೆ ಮಾಡಿ ತಿಳಿಸಲು ಪ್ರಯತ್ನಿಸಿದ್ದರು. ಸಿಸಿಬಿಯಿಂದ ಕರೆ ಮಾಡುತ್ತಿರುವುದು ಎಂದು ತಿಳಿದ ಜಾಕೀರ್​ ಕಾಲ್ ಕಟ್​ ಮಾಡಿದ್ದರು. ಬಳಿಕ ಸಹೋದರನ ಮೂಲಕ ಸಂಪರ್ಕಿಸಿದ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಪೊಲೀಸರ ಕರೆಯಿಂದ ಗಲಿಬಿಲಿಗೊಂಡ ಜಾಕೀರ್​, ಮೊಬೈಲ್ ಮೆಸ್ಸೇಜ್​ಗಳನ್ನು​ ಡಿಲೀಟ್​ ಮಾಡದೆ ವಿಚಾರಣೆಗೆ ಹಾಜರಾಗಿದ್ದರು ಎನ್ನಲಾಗ್ತಿದೆ.

ನನಗೇನು ಗೊತ್ತಿಲ್ಲವೆಂದ ಜಾಕೀರ್​: ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದ ಜಾಕೀರ್ ಹುಸೇನ್​​, ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ವಾರ್ಡ್​ ಪ್ರೇಜರ್​ ಟೌನ್​, ನನ್ನ ಕ್ಷೇತ್ರದಲ್ಲಿ ಏನೂ ಆಗಿಲ್ಲ. ನಾನು ಅಖಂಡ ಶ್ರೀನಿವಾಸ್​ ಮೂರ್ತಿ ಜೊತೆ ಬಹಳ ಆತ್ಮೀಯನಾಗಿದ್ದೇನೆ. ಅವರು ಸಾವಿರಾರು ಮತಗಳ ಅಂತರದಿಂದ ಗೆದ್ದವರು, ನಾನು ಅವರ ಜೊತೆ ಯಾಕೆ ದ್ವೇಷ ಇಟ್ಟುಕೊಳ್ಳಲಿ ಎಂದಿದ್ದರು.

999 ಮೆಸ್ಸೇಜ್ ರೀಡ್​ ಮಾಡದೆ ಪೆಂಡಿಂಗ್: ಜಾಕೀರ್​ ವಿಚಾರಣೆಗೆ ಬಂದಾಗ ಮೊಬೈಲ್ ವಶಕ್ಕೆ ಪಡೆದ ಪೊಲೀಸರು, ಅದರಲ್ಲಿ ರೀಡ್​ ಆಗದ 999 ಮೆಸ್ಸೇಜ್​ಗಳ​ ಬಗ್ಗೆ ವಿಚಾರಿಸಿದ್ದಾರೆ. ಘಟನೆ ನಡೆದಾಗ ಮೊಬೈಲ್ ಸ್ವಿಚ್​ ಆಫ್​ ಆಗಿತ್ತು. ಹಾಗಾಗಿ ನಾನು ವಾಟ್ಸ್ ಆ್ಯಪ್​ ಓಪನ್ ಮಾಡಿರಲಿಲ್ಲ ಎಂದು ಜಾಕೀರ್​ ಉತ್ತರ ಕೊಟ್ಟಿದ್ದರು. ಪೊಲೀಸರು ರೀಡ್​ ಆಗದ ಆ 999 ಮೆಸ್ಸೇಜ್​ಗಳ ಪರಿಶೀಲಿಸಿದಾಗ, ಗಲಭೆ ನಡೆದ ದೃಶ್ಯ, ಕೆಲವರ ವಾಟ್ಸ್​ ಆ್ಯಪ್​ ಕರೆಗಳು ಕಂಡು ಬಂದಿವೆ. ಹೀಗಾಗಿ ರಿಟ್ರೀವರ್​ ಮಾಡಲು ಪೊಲೀಸರು ಮೊಬೈಲ್ಅನ್ನು ತಮ್ಮ ವಶದಲ್ಲಿರಿಸಿಕೊಂಡಿದ್ದಾರೆ. ಹೀಗಾಗಿ, ಕಾರ್ಪೊರೇಟರ್​ ಜಾಕೀರ್​ಗೆ ವಾಟ್ಸ್​ ಆ್ಯಪ್​ ಸಂದೇಶಗಳು ಉರುಳಾಗುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.