ETV Bharat / state

ಬೆಂಗಳೂರು ಗಲಭೆ ಪ್ರಕರಣ: ಪೊಲೀಸರಿಗೆ ಸಿಕ್ಕಿದೆ ಪ್ರಮುಖ ಸಾಕ್ಷ್ಯ!?

author img

By

Published : Aug 14, 2020, 12:23 PM IST

Updated : Aug 14, 2020, 12:34 PM IST

ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತ ಎಸ್​​ಡಿಪಿಐ ಮುಖಂಡ ಮುಜಾಮಿಲ್​ ಪಾಷಾನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಗಲಭೆಯಲ್ಲಿ ಮುಜಾಮಿಲ್​ ಪಾತ್ರವನ್ನು ಪುಷ್ಠೀಕರಿಸುವ ಮಹತ್ವದ ಸಾಕ್ಷ್ಯ ದೊರೆತಿದೆ ಎನ್ನಲಾಗಿದೆ.

Bengaluru riot
ಬೆಂಗಳೂರು ಗಲಭೆ

ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಗಲಭೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರಿಗೆ ಪ್ರಮುಖ ಸಾಕ್ಷ್ಯ ಸಿಕ್ಕಿದೆ‌. ಗಲಭೆ ನಡೆಯುವ ಕೆಲ ಗಂಟೆಗಳ ಮುನ್ನ ಗಲಭೆಕೋರರು ರಚಿಸಿಕೊಂಡಿದ್ದ ವಾಟ್ಸ್​ಆ್ಯಪ್​ ಗ್ರೂಪ್​ಗಳಲ್ಲಿ "ಆಲ್ ಗ್ಯಾದರ್ ಇನ್ ಡಿ.ಜೆ‌‌.ಹಳ್ಳಿ ಪೊಲೀಸ್ ಸ್ಟೇಷನ್" ಎಂಬ ಸಂದೇಶ ರವಾನೆಯಾಗಿದೆ ಎನ್ನಲಾಗಿದೆ.

ವಾಟ್ಸ್​ಆ್ಯಪ್​ ಗ್ರೂಪ್ ಆಡ್ಮಿನ್ ಆಗಿರುವ ಬಿಬಿಎಂಪಿ ಸದಸ್ಯೆಯ ಪತಿ ಹಾಗೂ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್​ಡಿಪಿಐ) ಮುಖಂಡ ಮುಜಾಮಿಲ್ ಪಾಷಾ ಈ ಸಂದೇಶ ಕಳುಹಿಸಿದ್ದಾನೆ‌‌‌‌‌‌. ಒಂದೇ ಮೊಬೈಲ್​ನಿಂದ ಏಳು ಗ್ರೂಪ್​ಗಳಿಗೆ ಸಂದೇಶ ರವಾನೆಯಾಗಿದ್ದು, ಗ್ರೂಪ್ ಸದಸ್ಯರು ಒಕೆ ಎಂದು ಹೇಳಿ, ಕೆಲವೇ ಕ್ಷಣಗಳಲ್ಲಿ ಡಿ.ಜಿ.ಹಳ್ಳಿ ಪೊಲೀಸ್ ಠಾಣೆ ಬಳಿ ಜಮಾಯಿಸಿದ್ದಾರೆ ಎಂದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.‌

ಮೆಸೇಜ್ ಹೋದ ಹತ್ತೇ ನಿಮಿಷದಲ್ಲಿ ಜನ ಸೇರಿದ್ರು: ವಾಟ್ಸ್​ಆ್ಯಪ್​ ಗ್ರೂಪ್​ಗಳಲ್ಲಿ ಎಲ್ಲರೂ ಡಿ.ಜೆ.ಹಳ್ಳಿ ಠಾಣೆ ಬಳಿ ಬನ್ನಿ ಎಂಬ ಸಂದೇಶ ರವಾನೆಯಾಗುತ್ತಿದ್ದಂತೆ ಕೇವಲ ಹತ್ತೇ ನಿಮಿಷದಲ್ಲಿ ಠಾಣೆ ಬಳಿ ಜನ ಜಮಾಯಿಸಿದ್ದಾರೆ. ಪೂರ್ವನಿಯೋಜಿತದಂತೆ ಎಲ್ಲರೂ ಬಂದಿರುವುದನ್ನು ಖಾತ್ರಿಪಡಿಸಿಕೊಂಡು‌ ಒಂದು ಗಂಟೆ ಬಳಿಕ ಪೊಲೀಸ್ ಠಾಣೆ ಹಾಗೂ ವಾಹನಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ.

ಸಿಸಿಬಿ ಪೊಲೀಸರಿಗೆ ಸಿಕ್ಕಿದೆ ಪ್ರಮುಖ ಸಾಕ್ಷಿ: ಗಲಭೆ ಸಂಬಂಧ ಮುಜಾಮಿಲ್ ಪಾಷಾ ಸೇರಿದಂತೆ 15 ಆರೋಪಿಗಳನ್ನು ಬಂಧಿಸಿ ಅವರ ಮೊಬೈಲ್​ಗಳನ್ನು ವಶಪಡಿಸಿಕೊಂಡಾಗ ವಾಟ್ಸ್​ಆ್ಯಪ್​ ಗ್ರೂಪ್ ರಚಿಸಿರುವುದು ಮತ್ತು ಗಲಭೆಕೋರರು ಸಂದೇಶ ರವಾನಿಸಿರುವುದು ಬಹಿರಂಗವಾಗಿದೆ. ಮುಜಾಮಿಲ್ ರಚಿಸಿದ ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಸುಮಾರು 250 ಸದಸ್ಯರಿದ್ದಾರೆ. ಗ್ರೂಪ್​​​ನ ಇತರ ಸದಸ್ಯರ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಗಲಭೆ ಬಳಿಕ ಯಾವೊಬ್ಬ ಎಸ್​ಡಿಪಿಐ ಕಾರ್ಯಕರ್ತನೂ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದಾರೆ. ಮೊದಲ ಹಂತದಲ್ಲಿ ಪೊಲೀಸರು ಬಂಧಿಸಿದ್ದ 150 ಆರೋಪಿಗಳ ಪೈಕಿ ಯಾವೊಬ್ಬ ಎಸ್​ಡಿಪಿಐ ಕಾರ್ಯಕರ್ತನೂ ಇರಲಿಲ್ಲ ಎನ್ನಲಾಗಿದೆ. ಮುಜಾಮಿಲ್ ಪಾಷನನ್ನು ಬಂಧಿಸಿದ ಬಳಿಕವಷ್ಟೇ 10ಕ್ಕೂ ಹೆಚ್ಚು ಸದಸ್ಯರನ್ನು ಸೆರೆ ಹಿಡಿಯಲಾಗಿದೆ. ಸದ್ಯ ಬಂಧನವಾಗಿರುವ ಎಲ್ಲರ ಮೊಬೈಲ್​​ಗಳಲ್ಲಿ ಅಡಕವಾಗಿರಬಹುದಾದ ಮಾಹಿತಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.

ಗಲಭೆಗೂ ಎಸ್​​ಡಿಪಿಐಗೂ ಸಂಬಂಧವಿಲ್ಲ: ಪಾಷಾ

ಗಲಭೆ ಬೆನ್ನಲ್ಲೇ ಪೊಲೀಸರಿಗೆ ಹೆದರಿ ಪ್ರಮುಖ ಆರೋಪಿ ಮುಜಾಮಿಲ್ ಪಾಷಾ ಹೊರತುಪಡಿಸಿ ಇತರರು ತಮ್ಮ ಮೊಬೈಲ್​ಗೆ ಬಂದಿದ್ದ ಸಂದೇಶಗಳನ್ನು ಡಿಲೀಟ್ ಮಾಡಿದ್ದಾರೆ.‌‌ ಸಂದೇಶದ ಬಗ್ಗೆ ತನಿಖಾಧಿಕಾರಿಗಳು ಪ್ರಶ್ನಿಸಿದರೆ, ಗಲಭೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಅನ್ಯಾಯ ಆಗಿದೆ ಅಂದಿದ್ದಕ್ಕೆ ನಾವೆಲ್ಲ ಹೋಗಿದ್ದೆವು ಎನ್ನುತ್ತಿದ್ದಾರೆ. ಘಟನೆಗೂ ಎಸ್​ಡಿಪಿಐಗೂ ಯಾವುದೇ ಸಂಬಂಧವಿಲ್ಲ ಎಂದು ಮುಜಾಮಿಲ್ ಹೇಳಿದ್ದಾನೆ ಎನ್ನಲಾಗಿದೆ. ಬಂಧಿತರಿಂದ ವಶಪಡಿಸಿಕೊಂಡ ಮೊಬೈಲ್​ಗಳನ್ನು ಎಫ್​ಎಸ್ಎಲ್‌ ಪರಿಶೀಲನೆಗೆ ಕಳುಹಿಸಲು ಸಿಸಿಬಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಮುಜಾಮಿಲ್‌ ಪಾಷಾ ಸೇರಿ‌ 15 ಜನರನ್ನು ಕಸ್ಟಡಿಗೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Last Updated : Aug 14, 2020, 12:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.