ETV Bharat / state

ಬೆಂಗಳೂರು ಗಲಭೆಯ ಪ್ರಮುಖ ಆರೋಪಿಗೆ ಸಖತ್​ ಡ್ರಿಲ್: ATC ತನಿಖೆ ಚುರುಕು - ಆರೋಪಿ ಸಮಿಯುದ್ದೀನ್ ವಿಚಾರಣೆ

ಬೆಂಗಳೂರು ಗಲಭೆಯ ಪ್ರಮುಖ ಆರೋಪಿ ಎನ್ನಲಾದ ಸಮಿಯುದ್ದೀನ್ ಡಿ.ಜೆ ಹಳ್ಳಿ ನಿವಾಸಿಯಾಗಿದ್ದು, ಈತ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್​​​ ಸಿರಿಯಾದ ಐಸಿಸ್ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿರುವ ಸಾಕ್ಷ್ಯಗಳು ಈಗ ತನಿಖಾ ತಂಡಕ್ಕೆ ಲಭ್ಯವಾಗಿವೆ.

Bengaluru Riot Case
ಬೆಂಗಳೂರು ಗಲಭೆ ಪ್ರಕರಣ: ATC ಯಿಂದ ತನಿಖೆ ಚುರುಕು
author img

By

Published : Aug 18, 2020, 8:00 AM IST

ಬೆಂಗಳೂರು: ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ‌ಗಲಭೆ ಪ್ರಕರಣಕ್ಕೆ ಉಗ್ರರ ಕರಿಛಾಯೆ ಇರುವ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಈ ಕಾರಣದಿಂದ ಸದ್ಯ ಸಿಸಿಬಿ ಭಯೋತ್ಪಾದನಾ ನಿಗ್ರಹ ದಳ (ATC) ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನಲಾದ ಸಮಿಯುದ್ದೀನ್ ಎಂಬಾತನನ್ನು ತೀವ್ರವಾಗಿ ತನಿಖೆಗೆ ಒಳಪಡಿಸಿದೆ.

Bengaluru Riot Case
ಬೆಂಗಳೂರು ಗಲಭೆ ಪ್ರಕರಣ: ATC ಯಿಂದ ತನಿಖೆ ಚುರುಕು

ಸಮಿಯುದ್ದೀನ್ ಡಿ.ಜೆ ಹಳ್ಳಿ ನಿವಾಸಿಯಾಗಿದ್ದು, ಈತ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್​ ಸಿರಿಯಾ ಐಸಿಸ್ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿರುವ ಸಾಕ್ಷ್ಯಗಳು ಲಭ್ಯವಾಗಿವೆ. ಸದ್ಯ ಈತನನ್ನು ಬಹಳ ಭದ್ರತೆಯ ಸ್ಥಳದಲ್ಲಿ ಇಟ್ಟು ಎಸಿಪಿ ವೇಣುಗೋಪಾಲ್​ ಅವರ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ‌‌. ಈತ ಡಿಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಬೆಂಕಿ‌ ಹಚ್ಚುವಂತೆ ಕುಮ್ಮಕ್ಕು ನೀಡುವ ಹಾಗೂ ಕೈಯಲ್ಲಿ‌ ಸನ್ನೆ ಮಾಡುವ ದೃಶ್ಯ ಸಿಸಿಟಿವಿ ಹಾಗೂ ವಿಡಿಯೋದಲ್ಲಿ ಸೆರೆಯಾಗಿದೆ‌‌.

ತನಿಖೆಯಲ್ಲಿ ಮಹತ್ತರ ವಿಚಾರ ಬಯಲು: ಸಮಿಯುದ್ದೀನ್ ಡಿ.ಜೆ ಹಳ್ಳಿ ಹಾಗೂ ‌ಕೆ.ಜಿ‌ ಹಳ್ಳಿ ಘಟನೆ ಸಂಬಂಧಿಸಿದಂತೆ ಘಟನೆ ನಡೆಯುವ ಮುಂಚೆ ವಾಟ್ಸ್​​​ಆ್ಯಪ್​​ ಗ್ರೂಪ್ ಮಾಡಿ ಅದರಲ್ಲಿ ನೂರಾರು ಯುವಕರಿಗೆ ಕರೆ ಹಾಗೂ ಮೆಸೇಜ್ ಮಾಡಿದ್ದ. ಈ ಸಂದೇಶಗಳ ಮೇರೆಗೆ ಸಮಿಯುದ್ದೀನ್​ ಅಣತಿಯಂತೆ ಸ್ಥಳವನ್ನ ಸುಟ್ಟು ಕರಕಲು ಮಾಡಿದ್ದರು. ಮೊದಲೇ ಸಿಲಿಕಾನ್ ಸಿಟಿಯಲ್ಲಿ ದುಷ್ಕ್ರತ್ಯ ಮಾಡಬೇಕು ಎಂದು ಫ್ಲಾನ್ ಮಾಡಿದ್ಧ ಈತ ಈ ಗಲಭೆಯನ್ನ ಬಂಡವಾಳ ಮಾಡಿಕೊಂಡಿದ್ದ. ಸದ್ಯ ಈತನ ನೂರಕ್ಕೂ ಹೆಚ್ಚು ಕರೆಗಳನ್ನ ಪರಿಶೀಲನೆ ಮಾಡಿದಾಗ ಈತ ಉಗ್ರ ಹಾಗೂ ಭಯೋತ್ಪಾದಕ ಚಟುವಟಿಕೆಗಳಲ್ಲಿ ಇರುವವರ ಜೊತೆ ಸಂಪರ್ಕ ಹೊಂದಿರುವ ವಿಚಾರ ಬಯಲಿಗೆ ಬಂದಿದೆ.

ಸದ್ಯ ತನಿಖಾಧಿಕಾರಿಗಳು ಈತನ ಹಿನ್ನೆಲೆ, ಈತನ ಸಂಪರ್ಕದಲ್ಲಿರುವವರ ಮಾಹಿತಿ, ಈತನ ಹಿಂದೆ ಯಾರಿದ್ದಾರೆ ಎನ್ನುವುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈತ ದಕ್ಷಿಣ ಭಾರತದಲ್ಲಿ ಐಸಿಸ್ ಉಗ್ರ ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಬಂಧಿತನಾದ ತಮಿಳುನಾಡು ಮೂಲದ ಖ್ವಾಜಾ ಮೊಯಿದ್ದೀನ್ ಜೊತೆ ಸಂಪರ್ಕದಲ್ಲಿದ್ದ ಎಂಬ ವಿಚಾರವೂ ಇದೇ ವೇಳೆ ಬಯಲಾಗಿದೆ. ಈತನ‌ ಹಿಂದೆ ದೊಡ್ಡ ಕೈವಾಡ ಇರುವ ಗುಮಾನಿ‌ ಮೇರೆಗೆ ತೀವ್ರವಾದ ತನಿಖೆ ನಡೆಸಲಾಗುತ್ತಿದೆ.

ಸಿಲಿಕಾನ್ ಸಿಟಿಯಲ್ಲಿ ನಡೆದ 2016ರ ಆರ್​​ಎಸ್​ಎಸ್​​ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣ, ಹಿಂದೂ ‌ಮುಖಂಡರ ಹತ್ಯೆ, ಶಂಕಿತ ಉಗ್ರರಿಗೆ 2001ರಲ್ಲಿ ಮೆಹಾಬೂಬ್ ಪಾಷಾ ಮನೆಯಲ್ಲಿ ಟ್ರೈನಿಂಗ್ ಕೊಟ್ಟವರ ಜೊತೆ ಸಮೀಯುದ್ದೀನ್ ಲಿಂಕ್ ಹೊಂದಿರುವುದು ಗೊತ್ತಾಗಿದೆ. ಈ ಎಲ್ಲ ಕಾರಣಗಳಿಂದ ಸದ್ಯ ತನಿಖೆ ಬೇರೆ ಬೇರೆ ಆಯಾಮದತ್ತ ಸಾಗ್ತಿದೆ. ನವೀನ್ ಹಾಕಿದ ಫೇಸ್​​​​ಬುಕ್ ಪೋಸ್ಟ್ ನೆಪ ಮಾತ್ರವೇ ಅನ್ನೋ ತನಿಖೆಯನ್ನೂ ಪೊಲೀಸರು ಮಾಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.