ಬೆಂಗಳೂರು: ಸ್ನೇಹಿತೆ ಮನೆಗೆ ಹೋಗಲು ಖಾಸಗಿ ಕಂಪನಿಯೊಂದರ ಬೈಕ್ ಬುಕ್ ಮಾಡಿದ್ದ ಪಾನಮತ್ತ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಒಟ್ಟು ಮೂವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಬಿಹಾರ ಮೂಲದ ಶಹಬುದ್ದೀನ್, ಹುಳಿಮಾವು ನಿವಾಸಿ ಅರಾಫರ್ ಶರೀಪ್ ಹಾಗೂ ಯುವತಿ ಸೇರಿ ಮೂವರನ್ನು ಬಂಧಿಸಲಾಗಿದೆ. ಇದೇ ತಿಂಗಳು 25ರ ರಾತ್ರಿ ಕೇರಳ ಮೂಲದ ಯುವತಿ ಬಿಟಿಎಂ ಲೇಔಟ್ನಿಂದ ಎಲೆಕ್ಟ್ರಾನಿಕ್ ಸಿಟಿ ನಿಲಾದ್ರಿ ನಗರದ ಸ್ನೇಹಿತೆಯ ಮನೆಗೆ ಹೋಗಲು ಈ ಬೈಕ್ ಬುಕ್ ಮಾಡಿದ್ದಳು.
ಪಾನಮತ್ತರಾಗಿದ್ದ ಯುವತಿಯನ್ನು ಪಿಕಪ್ ಪಾಯಿಂಟ್ನಿಂದ ಬೈಕ್ ಸವಾರ ಶಹಬುದ್ದೀನ್ ಪಿಕಪ್ ಮಾಡಿದ್ದ. ಅರೆ ಪ್ರಜ್ಞಾವ್ಯವಸ್ಥೆಯಲ್ಲಿದ್ದ ಯುವತಿಯನ್ನು ಕಂಡು ಸ್ನೇಹಿತನಿಗೆ ಕರೆ ಮಾಡಿ ತಮ್ಮ ರೂಮಿಗೆ ಕರೆದೊಯ್ದಿದ್ದಾರೆ. ಬಳಿಕ ಯುವತಿ ಮೇಲೆ ಆತ್ಯಾಚಾರವೆಸಗಿದ್ದಾರೆ. ಕೃತ್ಯ ನಡೆದ ಜಾಗದಲ್ಲಿ ಶಹಬುದ್ದೀನ್ ಸ್ನೇಹಿತೆ ಸಾಥ್ ನೀಡಿದ್ದಳು ಎಂದು ಆಯುಕ್ತರು ತಿಳಿಸಿದ್ದಾರೆ.
ಈ ರೀತಿ ಖಾಸಗಿ ವಾಹನ ಸೇವೆ ನೀಡುವ ಸಂಸ್ಥೆಗಳ ಜೊತೆ ಭದ್ರತಾ ವಿಚಾರವಾಗಿ ಸಭೆ ಕರೆದು ಮಾತುಕತೆ ನಡೆಸಲಾಗುವುದು ಎಂದು ಇದೇ ವೇಳೆ ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೇರಳ ಮೂಲದ ಯುವತಿ ಮೇಲೆ ಬೆಂಗಳೂರಲ್ಲಿ ಗ್ಯಾಂಗ್ ರೇಪ್: ಕೃತ್ಯಕ್ಕೆ ಆರೋಪಿಗಳ ಗೆಳತಿಯಿಂದಲೂ ಸಾಥ್