ETV Bharat / state

ಬಿಕೋ ಎನ್ನುತ್ತಿವೆ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ರೈಲ್ವೆ ನಿಲ್ದಾಣಗಳು

author img

By

Published : Apr 26, 2020, 7:46 AM IST

ಭಾರತೀಯ ರೈಲ್ವೆ ಜಗತ್ತಿನಲ್ಲೇ ದೊಡ್ಡದಾದ 1.15 ಲಕ್ಷ ಕಿ.ಮೀ ದೂರದ 65 ಸಾವಿರ ರೈಲು ಮಾರ್ಗಗಳು ಹಾಗು 13 ಲಕ್ಷ ನೌಕರರನ್ನು ಹೊಂದಿದೆ. ಪ್ರಸ್ತುತ ಕೊರೊನಾ ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ರೈಲು ಸಂಚಾರ ರದ್ದುಗೊಳಿಸಿದೆ. ಪರಿಣಾಮ, ದಿನದ ಇಪ್ಪತ್ನಾಲ್ಕು ಗಂಟೆಯೂ ಗಿಜಿಗುಡುತ್ತಿದ್ದ ರೈಲ್ವೆ ನಿಲ್ದಾಣಗಳಲ್ಲಿ ಈಗ ನೀರವ ಮೌನ ಕವಿದಿದೆ.

Bengaluru railway station empty without people

ಬೆಂಗಳೂರು : ಒಂದೂವರೆ ಶತಮಾನಕ್ಕೂ ಹೆಚ್ಚು ಕಾಲ ಭಾರತೀಯರನ್ನು ಅಗ್ಗದ ದರದಲ್ಲಿ ದೇಶವ್ಯಾಪಿ ಸುತ್ತಾಡಿಸಿದ ಹೆಗ್ಗಳಿಕೆ ಭಾರತೀಯ ರೈಲ್ವೆಯದ್ದು. ಆದರೆ, ಕೊರೊನಾ ಎಂಬ ಮಹಾಮಾರಿ ದೇಶಕ್ಕೆ ಕಾಲಿಟ್ಟ ಬಳಿಕ ಇದೇ ಮೊದಲ ಬಾರಿಗೆ ತನ್ನ ಕಾರ್ಯ ಸ್ಥಗಿತಗೊಳಿಸಿದೆ. ಲಕ್ಷಾಂತರ ಪ್ರಯಾಣಿಕರನ್ನು ದೇಶದ ಮೂಲೆಮೂಲೆಗಳಿಗೆ ಸಾಗಿಸುತ್ತಿದ್ದ ಸಾವಿರಾರು ರೈಲುಗಳ ಸಂಚಾರ ರದ್ದಾಗಿದೆ. ಇದರಿಂದಾಗಿ ನಿತ್ಯವೂ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ರೈಲ್ವೆ ನಿಲ್ದಾಣಗಳು ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿವೆ. ರೈಲು ನಿಲ್ದಾಣಗಳನ್ನೇ ನಂಬಿ ಬದುಕುತ್ತಿದ್ದ ಸಾವಿರಾರು ಕೂಲಿ ಕಾರ್ಮಿಕರ ಬದುಕು ಅತಂತ್ರವಾಗಿದೆ.

1845ರಲ್ಲಿ ಮೊದಲ ರೈಲು ಸಂಚಾರ ಆರಂಭಿಸಿದ ಭಾರತೀಯ ರೈಲ್ವೆ ದೇಶದ ಅಭಿವೃದ್ಧಿಗೆ ಬಹುದೊಡ್ಡ ಕಾಣಿಕೆ ನೀಡಿದೆ. ಅಗ್ಗದ ದರದ ಪ್ರಯಾಣದಿಂದಾಗಿ ಬಡವರು ಮತ್ತು ಮಧ್ಯಮ ವರ್ಗದ ಮೆಚ್ಚಿನ ಸಾರಿಗೆಯಾಗಿದೆ. ಹೀಗಾಗಿಯೇ ಭಾರತೀಯ ರೈಲ್ವೆ ಜಗತ್ತಿನಲ್ಲೇ ದೊಡ್ಡದಾದ 1.15 ಲಕ್ಷ ಕಿ.ಮೀ ದೂರದ 65 ಸಾವಿರ ರೈಲು ಮಾರ್ಗಗಳು ಹಾಗು 13 ಲಕ್ಷ ನೌಕರರನ್ನು ಹೊಂದಿದೆ. ಪ್ರಸ್ತುತ ಕೊರೊನಾ ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ರೈಲು ಸಂಚಾರ ರದ್ದುಗೊಳಿಸಿದೆ. ಪರಿಣಾಮ, ದಿನದ ಇಪ್ಪತ್ನಾಲ್ಕು ಗಂಟೆಯೂ ಗಿಜಿಗುಡುತ್ತಿದ್ದ ರೈಲ್ವೆ ನಿಲ್ದಾಣಗಳಲ್ಲಿ ಈಗ ನೀರವ ಮೌನ ಕವಿದಿದೆ. ಆಯ್ದ ಮಾರ್ಗಗಳಲ್ಲಿ ಮಾತ್ರ ಸರಕು ಸಾಗಣೆ ರೈಲುಗಳು ಓಡಾಡುತ್ತಿವೆ.

ಕೊರೊನಾ ಪರಿಣಾಮ ರಾಜ್ಯದ ಪ್ರಮುಖ ರೈಲ್ವೆ ನಿಲ್ದಾಣಗಳಾದ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಎಲ್ಲ ನಿಲ್ದಾಣಗಳು ಜನರಿಲ್ಲದೇ ಬಿಕೋ ಎನ್ನುತ್ತಿವೆ. ನಿತ್ಯವೂ 2.20 ಲಕ್ಷ ಪ್ರಯಾಣಿಕರನ್ನು ರಾಜ್ಯ ಮತ್ತು ದೇಶದ ವಿವಿಧ ಮೂಲೆಗಳಿಗೆ ಸಾಗಿಸುತ್ತಿದ್ದ ಬೆಂಗಳೂರಿನ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಆವರಣದಲ್ಲಿ ಕಾವಲು ಸಿಬ್ಬಂದಿ ಬಿಟ್ಟು ಬೇರೆ ಯಾರೂ ಕಾಣಿಸುತ್ತಿಲ್ಲ. ಹತ್ತು ಫ್ಲಾಟ್‌ಫಾರ್ಮ್ ಹೊಂದಿರುವ ಈ ಅತಿದೊಡ್ಡ ನಿಲ್ದಾಣದ ಮುಖ್ಯ ದ್ವಾರವನ್ನು ಮುಚ್ಚಿದ್ದು ದೂಳು ಹಿಡಿಯುತ್ತಿದೆ. ನಗರದ ಕಂಟೋನ್ಮೆಂಟ್, ಯಶವಂತಪುರ, ಕೆಂಗೇರಿ, ವೈಟ್‌ಫೀಲ್ದ್‌ ಮತ್ತಿತರ ನಿಲ್ದಾಣಗಳು ಇದೆ ಪರಿಸ್ಥಿತಿಯಿದೆ.

ಬಿಕೋ ಎನ್ನುತ್ತಿರುವ ಬೆಂಗಳೂರು ಸಿಟಿ ರೈ್ಲ್ವೆ ನಿಲ್ದಾಣ
ನಗರದ ಈ ರೈಲ್ವೆ ನಿಲ್ದಾಣಗಳು ಕೇವಲ ರೈಲ್ವೆ ಇಲಾಖೆಗಷ್ಟೇ ಆದಾಯ ತಂದುಕೊಡುತ್ತಿರಲಿಲ್ಲ. ಬದಲಿಗೆ ಇಲ್ಲಿಗೆ ಬರುವ ಪ್ರಯಾಣಿಕರನ್ನು ನಂಬಿ ಸಾವಿರಾರು ಕೂಲಿ ಕಾರ್ಮಿಕರು, ಹೋಟೆಲ್‌, ಕ್ಯಾಂಟೀನ್‌ಗಳ ಮಾಲಿಕರು-ಕೆಲಸಗಾರರು, ಹೂ-ಹಣ್ಣು ವ್ಯಾಪಾರಿಗಳು, ಬಟ್ಟೆ ವ್ಯಾಪಾರಿಗಳು, ಚಪ್ಪಲಿ ವ್ಯಾಪಾರಿಗಳು, ಆಟೋ, ಟ್ಯಾಕ್ಸಿಗಳ ಚಾಲಕರು ಜೀವನ ನಡೆಸುತ್ತಿದ್ದರು. ರೈಲ್ವೆ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳೇ ಇವರ ವ್ಯಾಪಾರ ಕೇಂದ್ರಗಳಾಗಿದ್ದವು. ಇವರೆಲ್ಲರೂ ಈಗ ನಯಾ ಪೈಸೆ ಆದಾಯವಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ. ವಿಶೇಷವಾಗಿ ರೈಲು ಪ್ರಯಾಣಿಕರನ್ನೇ ನಂಬಿ ನಿಲ್ದಾಣಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದವರು ಇದೀಗ ಕೆಲಸವಿಲ್ಲದೆ ಸರ್ಕಾರದ ನಿರಾಶ್ರಿತರ ಶಿಬಿರ ಸೇರಿದ್ದಾರೆ.ಮಾ.24 ರಂದು ಕೇಂದ್ರ ಸರ್ಕಾರ 21 ದಿನಗಳ ಲಾಕ್‌ಡೌನ್‌ ಘೋಷಿಸಿದ ಬಳಿಕ ಏಪ್ರಿಲ್ 15 ರಿಂದ ಮತ್ತೆ ರೈಲು ಸಂಚಾರ ಆರಂಭವಾಗುತ್ತದೆ ಎಂದು ಸಾಕಷ್ಟು ಜನ ಖುಷಿಪಟ್ಟಿದ್ದರು. ಪ್ರಯಾಣಿಕರಿಗಿಂತ ಹೆಚ್ಚಾಗಿ ಪ್ರಯಾಣಿಕರನ್ನೇ ನಂಬಿರುವ ಕೂಲಿಗಳು, ವ್ಯಾಪಾರಿಗಳು, ಚಾಲಕರು ಸಂಭ್ರಮಿಸಿದ್ದರು. ಸಂಚಾರ ಆರಂಭಿಸಲು ಸಿದ್ದತೆ ಮಾಡಿಕೊಂಡಿದ್ದ ರೈಲ್ವೆ ಇಲಾಖೆ ಕೂಡ ತನ್ನ 17 ವಲಯಗಳ ನೌಕರರಿಗೆ ಕೆಲಸಕ್ಕೆ ಹಾಜರಾಗಲು ಸಿದ್ದರಾಗಿರುವಂತೆಯೂ ಸೂಚಿಸಿತ್ತು. ಆದರೆ ಇದೀಗ ಮೇ.3ರವೆಗೆ ಲಾಕ್‌ಡೌನ್‌ ಮುಂದುವರೆದಿದ್ದು, ಇನ್ನಷ್ಟು ಕಾಲ ವಿಸ್ತರಿಸುವ ಸಾಧ್ಯತೆ ಇದೆ. ಒಟ್ಟಾರೆ ರೈಲು ನಿಲ್ದಾಣಗಳಲ್ಲಿನ ನೀರವ ಮೌನ ಪ್ರಯಾಣಿಕರನ್ನೇ ನಂಬಿ ಬದುಕಿನ ಬಂಡಿ ಎಳೆಯುತ್ತಿದ್ದವರ ಕಣ್ಣಲ್ಲೀಗ ಅಸಹನೀಯ ಬದುಕಿನ ಪ್ರತಿಬಿಂಬವಾಗಿ ಬದಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.