ETV Bharat / state

ಮದ್ಯ, ಮಾದಕ ದ್ರವ್ಯ ಸೇವನೆಯಿಂದ ಅಪಘಾತವೆಸಗಿ ಸಾವು ಸಂಭವಿಸಿದರೆ ಹತ್ಯೆ ಪ್ರಕರಣ ದಾಖಲು

ಮದ್ಯ, ಮಾದಕ ದ್ರವ್ಯಗಳನ್ನು ಸೇವಿಸಿ ಅಪಘಾತವೆಸಗಿ ಸಾವಿಗೆ ಕಾರಣರಾಗಿರುವುದು ಸಾಬೀತಾದರೆ ಅದು 'ಉದ್ದೇಶಪೂರ್ವಕವಲ್ಲದ ಹತ್ಯೆ ಪ್ರಕರಣ'ವಾಗುತ್ತದೆ ಎಂದು ಬೆಂಗಳೂರು ಸಂಚಾರ ವಿಭಾಗದ ಜಂಟಿ ಆಯುಕ್ತರು ಎಚ್ಚರಿಸಿದ್ದಾರೆ.

Bangalore Police
ಪಾನಮತ್ತರು ಅಪಘಾತವೆಸಗಿ ಸಾವಿಗೆ ಕಾರಣರಾದರೆ, ಅದು ಉದ್ದೇಶ ಪೂರ್ವಕವಲ್ಲದ ಹತ್ಯೆ ಪ್ರಕರಣ: ಅನುಚೇತ್
author img

By ETV Bharat Karnataka Team

Published : Dec 27, 2023, 3:02 PM IST

Updated : Dec 27, 2023, 6:49 PM IST

ಬೆಂಗಳೂರು ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್. ಅನುಚೇತ್ ಪ್ರತಿಕ್ರಿಯೆ

ಬೆಂಗಳೂರು: ಪಾನಮತ್ತ ವಾಹನ ಚಾಲನೆಯಿಂದ ಮಾತ್ರವಲ್ಲದೆ, ಮಾದಕ ದ್ರವ್ಯಗಳನ್ನು ಸೇವಿಸಿ ವಾಹನ ಚಾಲನೆ, ವೀಲಿಂಗ್ ಕೃತ್ಯಗಳಿಂದಲೂ ಅಪಘಾತ ಸಂಭವಿಸುತ್ತಿರುವ ಪ್ರಕರಣಗಳನ್ನು ತಡೆಗಟ್ಟಲು ರಕ್ತದ ಮಾದರಿಯೊಂದಿಗೆ ನಾರ್ಕೋಟಿಕ್ಸ್ ಪರೀಕ್ಷೆ ಮಾಡಿಸುವ ಕೆಲಸವನ್ನೂ ಬೆಂಗಳೂರು ಸಂಚಾರಿ ಪೊಲೀಸರು ಆರಂಭಿಸಿದ್ದಾರೆ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಸಂಭವಿಸಿದ ಅಪಘಾತ ಪ್ರಕರಣಗಳ ಪೈಕಿ ಮೂರು ಮಾರಣಾಂತಿಕ ಹಾಗೂ ಐದು ಸಾಧಾರಣ ಅಪಘಾತ ಪ್ರಕರಣಗಳಲ್ಲಿ ಪಾನಮತ್ತರಾಗಿ ವಾಹನ ಚಾಲನೆ ಮಾಡಿರುವುದು ಕಂಡುಬಂದಿದೆ. ಅಲ್ಲದೇ ಒಂದು ವೀಲಿಂಗ್ ಪ್ರಕರಣದಲ್ಲಿ, ಆರೋಪಿಯು ಮಾದಕ ಸೇವಿಸಿರುವುದು ಕಂಡುಬಂದಿದ್ದು, ಆತನ ವಿರುದ್ಧ ಕಾನೂನು ಸುವ್ಯವಸ್ಥೆ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಪ್ರಕರಣ ದಾಖಲಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ವಿಭಾಗದ ಜಂಟಿ ಆಯುಕ್ತ ಎಂ. ಎನ್. ಅನುಚೇತ್ ತಿಳಿಸಿದ್ದಾರೆ.

ಇಷ್ಟು ದಿನ ಅಪಘಾತದಿಂದ ಸಾವಿಗೆ ಕಾರಣವಾಗುವ ಆರೋಪಿತರ ವಿರುದ್ಧ ಐಪಿಸಿ ಸೆಕ್ಷನ್ 304(a) - (ಅಜಾಗರೂಕ ಹಾಗೂ ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಆರೋಪದಡಿ ಪ್ರಕರಣ ದಾಖಲಿಸಲಾಗುತ್ತಿತ್ತು. ಆದರೆ, ಇನ್ನು ಮುಂದೆ ಮದ್ಯಪಾನ ಅಥವಾ ಮಾದಕ ಸೇವಿಸಿ ಅಪಘಾತವೆಸಗಿ ಸಾವಿಗೆ ಕಾರಣರಾದರೆ ಐಪಿಸಿ ಸೆಕ್ಷನ್ 304 - (ಉದ್ದೇಶಪೂರ್ವಕವಲ್ಲದ ಹತ್ಯೆ) ಆರೋಪದಡಿಯಲ್ಲಿಯೂ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಹೇಳಿದರು.

ಇದನ್ನೂ ಓದಿ: 2023; ಕ್ರಿಮಿನಲ್ ಪ್ರಕರಣಗಳಲ್ಲಿ ಹೈಕೋರ್ಟ್ ಮಹತ್ವದ ಆದೇಶಗಳಿವು!

Last Updated : Dec 27, 2023, 6:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.