ETV Bharat / state

ದೆಹಲಿ ಪ್ರತಿಭಟನೆಗೆ ಬೆಂಬಲ.. ಬೆಂಗಳೂರಲ್ಲಿ ರೈತರನ್ನು ವಶಕ್ಕೆ ಪಡೆದ ಪೊಲೀಸರು - bengaluru police,

ನಗರದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಕರ್ನಾಟಕ ರಾಜ್ಯ ಸಂಘಟನೆಯಿಂದ ನಗರದ ಮೌರ್ಯ ಸರ್ಕಲ್​​ನಲ್ಲಿ ಪ್ರತಿಭಟನೆ ನಡೆಸಿ, ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಪತ್ರ ಕೊಡುವ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆದರೆ, ರಾಜ್ಯಪಾಲರ ಭೇಟಿಗೆ ಅವಕಾಶ ಕೊಡದೇ, ಮೌರ್ಯ ಸರ್ಕಲ್​ನಲ್ಲೇ ರೈತ ಮುಖಂಡರು ಹಾಗೂ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

bangalore police arrested protesters
ರೈತ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು
author img

By

Published : Jun 26, 2021, 1:25 PM IST

Updated : Jun 26, 2021, 3:47 PM IST

ಬೆಂಗಳೂರು: ದೆಹಲಿ ಗಡಿಯಲ್ಲಿ ಕೃಷಿ ತಿದ್ದುಪಡಿ ಕಾನೂನುಗಳನ್ನು ರದ್ದು ಪಡಿಸುವಂತೆ ನಡೆಯುತ್ತಿರುವ ಪ್ರತಿಭಟನೆ ಇಂದಿಗೆ (ಜೂನ್ 26) ಏಳು ತಿಂಗಳು ಪೂರ್ಣಗೊಂಡಿದೆ. ಈ ಹಿನ್ನೆಲೆ ದೇಶಾದ್ಯಂತ 'ಕೃಷಿ ಉಳಿಸಿ- ಪ್ರಜಾಪ್ರಭುತ್ವವನ್ನು ರಕ್ಷಿಸಿ' ಎಂಬ ಪ್ರತಿಭಟನೆ ಹಮ್ಮಿಕೊಂಡಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ದೇಶದ ಮೂಲೆ- ಮೂಲೆಯಿಂದ ರೈತ ಸಂಘಟನೆಗಳು ಪತ್ರ ಬರೆಯುತ್ತಿವೆ.

ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ವಶಕ್ಕೆ ಪಡೆದ ಪೊಲೀಸರು

ನಗರದಲ್ಲಿಯೂ ಸಂಯುಕ್ತ ಕಿಸಾನ್ ಮೋರ್ಚಾ ಕರ್ನಾಟಕ ರಾಜ್ಯ ಸಂಘಟನೆ ವತಿಯಿಂದ ನಗರದ ಮೌರ್ಯ ಸರ್ಕಲ್​​ನಲ್ಲಿ ಪ್ರತಿಭಟನೆ ನಡೆಸಿ, ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಪತ್ರ ಕೊಡುವ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ, ರಾಜ್ಯಪಾಲರ ಭೇಟಿಗೆ ಅವಕಾಶ ಕೊಡದೆ, ಮೌರ್ಯ ಸರ್ಕಲ್​ನಲ್ಲೇ ರೈತ ಮುಖಂಡರು ಹಾಗೂ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಬಡಗಲಪುರ ನಾಗೇಂದ್ರ ಹಾಗೂ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ತಂಡವನ್ನು ಮೌರ್ಯ ಸರ್ಕಲ್​​ನಲ್ಲಿ ಪೊಲೀಸರು ವಶಕ್ಕೆ ಪಡೆದರು.

ಇನ್ನೊಂದೆಡೆ ರಾಜಭವನಕ್ಕೆ ಹೊರಟಿದ್ದ ಕುರುಬೂರು ಶಾಂತಕುಮಾರ್ ನೇತೃತ್ವದ ಪ್ರತಿಭಟನಾಕಾರರನ್ನು ಜ್ಞಾನಜ್ಯೋತಿ ಆಡಿಟೋರಿಯಂ ಬಳಿ ಇರುವ ಕಾವೇರಿ ಅತಿಥಿ ಗೃಹದಲ್ಲಿಯೇ ವಶಕ್ಕೆ ಪಡೆದು ಮೈಸೂರು ರಸ್ತೆಯ ಸಿಎಆರ್ ಮೈದಾನಕ್ಕೆ ಕರೆದೊಯ್ಯಲಾಗಿದೆ.

ಪ್ರತಿಭಟನೆ ವೇಳೆ ಮಾತನಾಡಿದ ರಾಜ್ಯ ರೈತಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ನಮ್ಮ ಸ್ವಾತಂತ್ರ್ಯ ಹರಣವಾಗಿದೆ. ರೈತವಿರೋಧಿ ಕಾನೂನನ್ನು ಜಾರಿಗೆ ತಂದಿರುವ ಯಡಿಯೂರಪ್ಪ ಸರ್ಕಾರ ಕೂಡಾ ರೈತ ವಿರೋಧಿಯಾಗಿದೆ. ಇದನ್ನು ವಿರೋಧಿಸಿ ರಾಜ್ಯಪಾಲರ ಬಳಿ ಮನವಿ ಮಾಡಲು ಹೋಗುತ್ತಿದ್ದೆವು.

ಆದರೆ, ಸರ್ಕಾರ ಅದಕ್ಕೆ ಅವಕಾಶ ನೀಡದೇ ನಮ್ಮ ಪ್ರತಿಭಟನಾ ಸ್ವಾತಂತ್ರ್ಯ ಹರಣ ಮಾಡಿದೆ. ರೈತವಿರೋಧಿ ಕಾನೂನುಗಳನ್ನು ಬಲತ್ಕಾರವಾಗಿ ನಮ್ಮ ಮೇಲೆ ಹೇರುತ್ತಿದ್ದಾರೆ.

ರೈತ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ಇಂದು ಪ್ರಜಾಪ್ರಭುತ್ವಕ್ಕೆ ಅಪಾಯ ಬಂದಿದೆ. ಎಮರ್ಜೆನ್ಸಿ ವಿರೋಧಿಸಿದವರೇ ಇಂದು ಆ ಪರಿಸ್ಥಿತಿ ಮತ್ತೆ ತಂದಿದ್ದಾರೆ. ಇಡೀ ದೇಶದ ವ್ಯವಸ್ಥೆ ಖಾಸಗೀಕರಣ ಮಾಡಲು ಹೊರಟಿರುವುದರಿಂದ ಇವು ಜನವಿರೋಧಿ, ದೇಶವಿರೋಧಿ ಕಾನೂನುಗಳು. ನ್ಯಾಯ ಕೇಳಲು ಬಂದ ನಮ್ಮನ್ನು ಜೈಲಿಗೆ ಹಾಕ್ತೇವೆ ಎನ್ನುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರಪತಿಗೆ ಬರೆದಿರುವ ಪತ್ರದಲ್ಲಿ ಏನಿದೆ?

ಈ ಪತ್ರದಲ್ಲಿ, ಕೋವಿಡ್ ಇದ್ದರೂ ಕೃಷಿಯನ್ನು ಕೈ ಬಿಡದೆ, ಕಳೆದ 74 ವರ್ಷದಿಂದ ಕೃಷಿ ಮಾಡಿಕೊಂಡು 140 ಕೋಟಿ ಭಾರತೀಯರಿಗೆ ಆಹಾರ ನೀಡುತ್ತಿದ್ದೇವೆ. ಆದರೂ ಈ ಸೇವೆಗೆ ಪ್ರತಿಯಾಗಿ ಭಾರತ ಸರ್ಕಾರ ಮೂರು ರೈತ ವಿರೋಧಿ ಕರಾಳ ಕಾನೂನು ಹೇರಿದೆ. ಇವು ನಮ್ಮ ಕೃಷಿಯನ್ನು ಮತ್ತು ಮುಂದಿನ ಪೀಳಿಗೆಗಳನ್ನು ನಾಶಪಡಿಸುತ್ತವೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಈ ಕಾನೂನುಗಳನ್ನು ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ಸುಗ್ರೀವಾಜ್ಞೆ ರೂಪದಲ್ಲಿ ತರಲಾಗಿದೆ. ರೈತರು ನಷ್ಟಕ್ಕೊಳಗಾಗುತ್ತಿದ್ದಾರೆ. ಅನೇಕ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಆದಾಯ ದ್ವಿಗುಣ ಮಾಡುವುದೆಂದು ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿದೆ.

ಪ್ರತಿಭಟನೆಗೆ ಬಂದ ರೈತರನ್ನು ತಡೆಯಲು ಕೇಂದ್ರ ಸರ್ಕಾರ ಎಲ್ಲ ಪ್ರಜಾಪ್ರಭುತ್ವದ ನಿಯಮ ಮೀರಿದೆ. ಪ್ರತಿಭಟನಾಕಾರರಲ್ಲೇ ಈವರೆಗೆ 550 ಮಂದಿ ಹುತಾತ್ಮರಾಗಿದ್ದಾರೆ. 46 ವರ್ಷದ ಹಿಂದಿನ ತುರ್ತು ಪರಿಸ್ಥಿತಿ ಮತ್ತೆ ನೆನಪಿಗೆ ಬಂದಿದೆ.

ಇದನ್ನೂ ಓದಿ: ವ್ಯಾಕ್ಸಿನ್​​ಗಾಗಿ ಧಾರವಾಡದಲ್ಲಿ ನೂಕು-ನುಗ್ಗಲು: ಲಸಿಕಾ ಕೇಂದ್ರದ ಬಾಗಿಲು ಹಾಕಿದ ಸಿಬ್ಬಂದಿ

ಹೀಗಾಗಿ ರಾಷ್ಟ್ರಪತಿಗಳಿಗೆ ಜ್ಞಾಪಕ ಪತ್ರ ಕೊಡುವ ಮೂಲಕ, ರೈತ ವಿರೋಧಿ ಕಾನೂನುಗಳನ್ನು ರದ್ದುಪಡಿಸಬೇಕು. ಎಲ್ಲ ರೈತರಿಗೆ C2+50 ರಷ್ಟು ಆದಾಯ ನೀಡುವ ಎಂಎಸ್​ಪಿಯನ್ನು ಖಾತರಿ ಪಡಿಸುವ ಕಾನೂನು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುತ್ತೀರಿ ಎಂದು ಭಾವಿಸಲಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

Last Updated : Jun 26, 2021, 3:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.