ಬೆಂಗಳೂರು: ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡದ ಹಣಕ್ಕೂ ಸೈಬರ್ ವಂಚಕರು ಕನ್ನ ಹಾಕುವುದಕ್ಕೆ ಶುರು ಮಾಡಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಪೊಲೀಸ್ ಇಲಾಖೆ ರೂಪಿಸಿರುವ ಇ-ಚಲನ್ ಲಿಂಕ್ ಮಾದರಿಯಲ್ಲೇ ನಕಲಿ ಲಿಂಕ್ ಸೃಷ್ಟಿಸಿ ಖದೀಮರು ವಂಚನೆ ಎಸಗುತ್ತಿರುವುದು ಬಯಲಾಗಿದೆ.
ಸಂಚಾರ ದಂಡ ಪಾವತಿ ಹೆಸರಲ್ಲಿ ವಾಹನ ಮಾಲೀಕರು ಹಾಗೂ ಸವಾರರ ಮೊಬೈಲ್ ನಂಬರ್ಗೆ ಸೈಬರ್ ವಂಚಕರು ಸಂದೇಶಗಳನ್ನು ರವಾನಿಸಿ, ಅದರೊಂದಿಗೆ ನಕಲಿ ಲಿಂಕ್ ಕಳುಹಿಸುತ್ತಿದ್ದಾರೆ. ಈ ಮೂಲಕ ಖದೀಮರು ಬ್ಯಾಂಕ್ ಖಾತೆಯ ವಿವರಗಳನ್ನು ಸಂಗ್ರಹಿಸಿ ಹಣ ದೋಚುವ ಕೃತ್ಯದಲ್ಲಿ ತೊಡಗಿದ್ದಾರೆ. ಇಂತಹ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ ಪೊಲೀಸರು ಕೂಡ ಎಚ್ಚೆತ್ತುಕೊಂಡಿದ್ದಾರೆ.
-
Beware of the new scam in cyber world !!!! pic.twitter.com/jpuYNwTqjY
— CP Bengaluru ಪೊಲೀಸ್ ಆಯುಕ್ತ ಬೆಂಗಳೂರು (@CPBlr) August 29, 2023 " class="align-text-top noRightClick twitterSection" data="
">Beware of the new scam in cyber world !!!! pic.twitter.com/jpuYNwTqjY
— CP Bengaluru ಪೊಲೀಸ್ ಆಯುಕ್ತ ಬೆಂಗಳೂರು (@CPBlr) August 29, 2023Beware of the new scam in cyber world !!!! pic.twitter.com/jpuYNwTqjY
— CP Bengaluru ಪೊಲೀಸ್ ಆಯುಕ್ತ ಬೆಂಗಳೂರು (@CPBlr) August 29, 2023
ಸಂಚಾರ ನಿಯಮ ಉಲ್ಲಂಘನೆಯ ದಂಡದ ಇ-ಚಲನ್ ಹೆಸರಲ್ಲಿ ಬರುತ್ತಿರುವ ನಕಲಿ ಲಿಂಕ್ಗಳನ್ನು ನಂಬಬಾರದು ಹಾಗೂ ಇವುಗಳ ಬಗ್ಗೆ ಎಚ್ಚರ ವಹಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಖುದ್ದು ಮನವಿ ಮಾಡಿದ್ದಾರೆ. ಪೊಲೀಸ್ ಇಲಾಖೆಯು ನೀಡಿರುವ ಅಧಿಕೃತ ಲಿಂಕ್ ಮಾತ್ರ ಬಳಸುವಂತೆ ದಂಡ ಪಾವತಿಸುವ ವಾಹನ ಸವಾರರಿಗೆ ಸೂಚಿಸಿದ್ದಾರೆ.
ಇಷ್ಟೇ ಅಲ್ಲ, ಇ-ಚಲನ್ ಹೆಸರಲ್ಲಿ ಬರುವ ಲಿಂಕ್ಗಳನ್ನು ಕ್ಲಿಕ್ ಮಾಡಿದರೆ ವಂಚಕರು ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಬಹುದು ಎಂದೂ ಎಚ್ಚರಿಸಿರುವ ಅವರು, ಸೈಬರ್ ವಂಚಕರಿಂದ ಯಾವ ರೀತಿ ಎಚ್ಚರ ವಹಿಸಬೇಕು ಎಂಬ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟರ್ವೊಂದನ್ನೂ ಹಂಚಿಕೊಂಡಿದ್ದಾರೆ.
ಟ್ವೀಟ್ನಲ್ಲಿ ಏನಿದೆ?: ''ಸೈಬರ್ ಜಗತ್ತಿನ ಹೊಸ ಹಗರಣದ ಬಗ್ಗೆ ಎಚ್ಚರದಿಂದಿರಿ'' ಎಂದು ಟ್ವೀಟ್ ಮಾಡಿರುವ ಪೊಲೀಸ್ ಆಯುಕ್ತರು, ಅಧಿಕೃತ ಲಿಂಕ್ ಹಾಗೂ ನಕಲಿ ಲಿಂಕ್ಗಳ ಬಗೆಗಿನ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. https://echallan.parivahan.gov.in/ ಎಂಬುವುದು ಆಸಲಿ ಲಿಂಕ್. ಅದೇ ರೀತಿಯಾಗಿ https://echallanparivahan.in ಎಂಬುದು ನಕಲಿ ಲಿಂಕ್ ಆಗಿರುತ್ತದೆ. ಟ್ರಾಫಿಕ್ ಚಲನ್ ಹೆಸರಲ್ಲಿ ನೀವು ಇಂತಹ ಲಿಂಕ್ಗಳನ್ನು ಸ್ವೀಕರಿಸಿದರೆ, ಅವುಗಳನ್ನು ಕ್ಲಿಕ್ ಮಾಡಬೇಡಿ. ಒಂದು ವೇಳೆ, ಹಣ ಪಾವತಿಗಾಗಿ ನೀವು ಅಂತಹ ಲಿಂಕ್ಗಳನ್ನು ಕ್ಲಿಕ್ ಮಾಡಿದರೆ, ವಂಚಕರು ನಿಮ್ಮ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಬಹುದು ಎಂದು ಆಯುಕ್ತರು ಹಂಚಿಕೊಂಡಿರುವ ಪೋಸ್ಟರ್ನಲ್ಲಿ ತಿಳಿಸಲಾಗಿದೆ.
ಸೆಪ್ಟೆಂಬರ್ 9ರ ವರೆಗೆ ವಿನಾಯಿತಿ: ಮತ್ತೊಂದೆಡೆ, ಸಂಚಾರಿ ದಂಡ ಪಾವತಿಗೆ ನೀಡಲಾಗಿದ್ದ ಶೇ.50ರಷ್ಟು ರಿಯಾಯಿತಿ ಅವಕಾಶವನ್ನು ಸೆಪ್ಟೆಂಬರ್ 9ರವರೆಗೂ ವಿಸ್ತರಿಸಲಾಗಿದೆ. ಫೆಬ್ರವರಿ 11ಕ್ಕೂ ಮೊದಲು ಇ-ಚಲನ್ ಮೂಲಕ ದಾಖಲಾಗಿರುವ ಸಂಚಾರ ಉಲ್ಲಂಘನೆ ಪ್ರಕರಣಗಳಿಗೆ ಮಾತ್ರವೇ ಈ ರಿಯಾಯತಿ ಅವಕಾಶ ಅನ್ವಯವಾಗಲಿದೆ.