ETV Bharat / state

ಕೆಲಸ ಕೊಡಿಸುವುದಾಗಿ ವಂಚಿಸಿದ ಶಾಸಕರ ನಕಲಿ ಗನ್ ಮ್ಯಾನ್ ಬಂಧನ

ಕೆಲಸ‌ ಕೊಡಿಸುವುದಾಗಿ ಹೇಳಿ ಅಮಾಯಕರಿಂದ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ್ದ ನಕಲಿ ಗನ್ ಮ್ಯಾನ್ಅ​ನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

author img

By

Published : Feb 2, 2021, 3:17 PM IST

Bengaluru Police arrested Fake Gun Man
ನಕಲಿ ಗನ್ ಮ್ಯಾನ್ ಬಂಧನ

ಬೆಂಗಳೂರು: ಶಾಸಕರ ಗನ್ ಮ್ಯಾನ್ ಎಂದು ಹೇಳಿ ನಿರುದ್ಯೋಗಿಗಳಿಗೆ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ ಆರೋಪಿಯನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ‌.

ಶಿರಸಿ ಮೂಲದ 30 ವರ್ಷದ ನಾರಾಯಣ ರಾಮಚಂದ್ರ ಬಂಧಿತ ಆರೋಪಿ. ಈತನಿಂದ ನಕಲಿ ಪಿಸ್ತೂಲ್ ವಶಪಡಿಸಿಕೊಂಡಿರುವ ಪೊಲೀಸರು, ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

Bengaluru Police arrested Fake Gun Man
ಆರೋಪಿಯಿಂದ ವಶಪಡಿಸಿಕೊಂಡ ನಕಲಿ ಪಿಸ್ತೂಲ್​​

ಓದಿ : ಲೋನ್ ಕೊಡಿಸುವುದಾಗಿ ವಂಚನೆ: ನಿಂದನೆಗೆ ಹೆದರಿ ಚಾಕು ಇರಿದಕೊಂಡ ವೃದ್ಧ

ದಾವಣಗೆರೆಯ ಶಾಸಕರೊಬ್ಬರ ಗನ್ ಮ್ಯಾನ್ ಎಂದು ಹೇಳಿಕೊಂಡಿದ್ದ ಆರೋಪಿ, ನಗರ ಸಶಸ್ತ್ರ ಹಾಗೂ ಜಿಲ್ಲಾ ಸಶಸ್ತ್ರ ವಿಭಾಗದ ಪೊಲೀಸರ ಜೊತೆ ಇರುವ ಫೋಟೊಗಳನ್ನು ಫೇಸ್​​ಬುಕ್​​ನಲ್ಲಿ ಹಾಕಿಕೊಳ್ಳುತ್ತಿದ್ದ‌‌. ಇದನ್ನು ನೋಡಿದ ಜನ, ಈತ ಶಾಸಕರ ಗನ್ ಮ್ಯಾನ್ ಎಂದು ನಂಬಿದ್ದರು. ಈತನ ಫೋಟೋ ನೋಡಿದ ದಾವಣಗೆರೆ ಮೂಲದ ವ್ಯಕ್ತಿಯೊಬ್ಬರು ಫೇಸ್​​ಬುಕ್​ನಲ್ಲಿ ಪರಿಚಯ ಮಾಡಿಕೊಂಡಿದ್ದರು. ಕ್ರಮೇಣ ಅವರ ಮೊಬೈಲ್ ನಂಬರ್ ಪಡೆದಿದ್ದ ಆರೋಪಿ ನಾರಾಯಣ, ನಾನು ಶಾಸಕರೊಬ್ಬರ ಬಳಿ ಗನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದು‌, ಕೆಲಸ ಕೊಡಿಸುವುದಾಗಿ ಹೇಳಿದ್ದಾನೆ. ಈತನ ಮಾತು ನಂಬಿದ ಆ ವ್ಯಕ್ತಿ, ಹಣ ನೀಡಿ ಮೋಸ ಹೋಗಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಉಪ್ಪಾರಪೇಟೆ ಪೊಲೀಸ್ ಇನ್ಸ್​ಪೆಕ್ಟರ್ ಶಿವಸ್ವಾಮಿ ನೇತೃತ್ವದ ತಂಡ, ನಗರದ ಸಿಆರ್ ಗಾರ್ಡನ್ ಬಳಿ ವಂಚಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈತ ಗನ್ ಮ್ಯಾನ್ ಎಂದು ಹೇಳಿಕೊಂಡು ಹಲವರಿಗೆ ವಂಚಿಸಿರುವ ಸಾಧ್ಯತೆಯಿದೆ. ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.