ETV Bharat / state

ಸದ್ದಿಲ್ಲದೇ ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇ ಟೋಲ್ ದರ ಹೆಚ್ಚಳ.. 10 ದಿನಗಳ ಬಳಿಕ ಸವಾರರ ಗಮನಕ್ಕೆ

Bengaluru Mysuru express highway toll charges ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ‌ಹೈವೇ ಟೋಲ್ ದರ ಹೆಚ್ಚಳ. ಜೂನ್​ 1 ರಿಂದಲೇ ದರ ಹೆಚ್ಚಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ. ವಾಹನ ಸವಾರರಿಂದ ಆಕ್ರೋಶ.

Bengaluru Mysuru express highway toll charges
ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇ ಟೋಲ್ ದರ ಹೆಚ್ಚಳ
author img

By

Published : Jun 13, 2023, 6:58 AM IST

ಬೆಂಗಳೂರು: ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ‌ಹೈವೇ ಟೋಲ್ ದರವನ್ನು ಏರಿಕೆ (Bengaluru Mysuru express highway toll charges hike ) ಮಾಡುವ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ವಾಹನ ಸವಾರ ಜೇಬಿಗೆ ಕತ್ತರಿ ಹಾಕಿದೆ.‌ ಜೂನ್ 1ರಿಂದಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆಚ್ಚಿನ ಟೋಲ್ ವಿಧಿಸುತ್ತಿದೆ.‌ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿರುವುದು ವಾಹನ‌ ಸವಾರರಿಗೆ ತಡವಾಗಿ ಗಮನಕ್ಕೆ ಬಂದಿದೆ. ಫಾಸ್ಟ್ ಟ್ಯಾಗ್ ಮೂಲಕ ಟೋಲ್ ಪಾವತಿ ಮಾಡುತ್ತಿರುವುದರಿಂದ, ಟೋಲ್ ಹೆಚ್ಚಳ ವಾಹನ‌ ಸವಾರರ ಗಮನಕ್ಕೆ ಬಂದಿರಲಿಲ್ಲ.‌ ಆದರೆ ಇದೀಗ ವಾಹನ ಸವಾರರಿಗೆ ಟೋಲ್ ಹೆಚ್ಚಳ ಬಿಸಿ ತಟ್ಟಿದೆ.‌

ಈ ಹಿಂದೆ ಏ. 1ರಿಂದ ಅನ್ವಯವಾಗುವಂತೆ ಮೈಸೂರು - ಬೆಂಗಳೂರು ಎಕ್ಸ್ ಪ್ರೆಸ್ ಹೈವೇಯ ಶುಲ್ಕವನ್ನು ಕನಿಷ್ಟ 35 ರೂ.ಗಳಿಂದ ಗರಿಷ್ಠ 305 ರೂ.ಗಳಷ್ಟು ಹೆಚ್ಚಿಸಿ ಎನ್ಎಚ್ಎಐ ಆದೇಶ ಹೊರಡಿಸಿತ್ತು. ಮಾ. 14ರಿಂದ ಈ ಹೆದ್ದಾರಿಯಲ್ಲಿ ಶುಲ್ಕ ಸಂಗ್ರಹಿಸಲು ಆರಂಭಿಸಲಾಗಿದ್ದು, ಶುಲ್ಕವನ್ನು ಪರಿಷ್ಕರಣೆ ಸಂಬಂಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

Bengaluru Mysuru express highway toll
ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇ

ಹೀಗಾಗಿ ಟೋಲ್ ಹೆಚ್ಚಳ ಆದೇಶವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಾಪಸ್ ತೆಗೆದುಕೊಂಡಿತ್ತು. ಶುಲ್ಕ ಪರಿಷ್ಕರಣೆಯನ್ನು 3 ತಿಂಗಳ ಅವಧಿಗೆ ತಡೆ ಹಿಡಿದಿತ್ತು. ಆದರೆ, ಮೂರು ತಿಂಗಳಿಗೆ ಮುನ್ನವೇ ಶೇ.22ರಷ್ಟು ಟೋಲ್ ದರ ಹೆಚ್ಚಳ ಮಾಡಲಾಗಿರುವುದು ವಾಹನ ಸವಾರರ ಕೆಂಗಣ್ಣಿಗೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಟೋಲ್ ದರ ಎಷ್ಟು ಹೆಚ್ಚಳ?:

  • ಕಾರು, ವ್ಯಾನ್‌, ಜೀಪ್‌ಗಳ ಏಕಮುಖ ಸಂಚಾರಕ್ಕೆ ₹135 ರಿಂದ ₹165ಕ್ಕೆ ಏರಿಕೆ ಮಾಡಲಾಗಿದೆ. ಆ ಮೂಲಕ 30 ರೂ. ಹೆಚ್ಚಿಸಲಾಗಿದೆ.
  • ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್‌ ₹220ರಿಂದ ₹270ಕ್ಕೆ ಏರಿಕೆ ಮಾಡಲಾಗಿದ್ದು, 50 ರೂ. ಹೆಚ್ಚಳ ಮಾಡಲಾಗಿದೆ.
  • ಟ್ರಕ್‌, ಬಸ್, 2 ಆಕ್ಸೆಲ್‌ ವಾಹನಗಳ ಏಕಮುಖ ಸಂಚಾರಕ್ಕೆ ₹460 ರಿಂದ ₹565ಕ್ಕೆ ಏರಿಕೆ ಮಾಡಲಾಗಿದ್ದು, 105 ರೂ. ಟೋಲ್ ಹೆಚ್ಚಳ ಮಾಡಲಾಗಿದೆ.
  • 3 ಆಕ್ಸೆಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರ ₹ 500 ರಿಂದ ₹615ಕ್ಕೆ ಏರಿಕೆ ಮಾಡಿ 115 ರೂ. ಹೆಚ್ಚಳ‌ ಮಾಡಲಾಗಿದೆ.
  • ಭಾರಿ ವಾಹನಗಳ ಏಕಮುಖ ಸಂಚಾರ ₹ 720ರಿಂದ ₹885ಕ್ಕೆ ಏರಿಸಲಾಗಿದೆ. ಆ ಮೂಲಕ 165 ರೂ. ಹೆಚ್ಚಳ ಮಾಡಲಾಗಿದೆ.
  • 7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್‌ ವಾಹನಗಳ ಏಕಮುಖ ಸಂಚಾರಕ್ಕೆ ₹880ರಿಂದ ₹1,080ಕ್ಕೆ ಏರಿಕೆಯಾಗಿದ್ದು, ಒಟ್ಟು ₹200 ಹೆಚ್ಚಳ ಮಾಡಲಾಗಿದೆ.

Bengaluru Mysuru expressway: ಮಹತ್ವಾಕಾಂಕ್ಷೆಯ ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ವೇಗೆ ಮಾರ್ಚ್​ 12 ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಆ ಮೂಲಕ ಅಧಿಕೃತವಾಗಿ ಎಕ್ಸ್​ಪ್ರೆಸ್​ ವೇ ಅನ್ನು ಸಂಚಾರ ಮುಕ್ತಗೊಳಿಸಲಾಗಿತ್ತು. ಹಳೆಯ ಹೆದ್ದಾರಿಯಂತೆ ಬೆಂಗಳೂರು ಮತ್ತು ಮೈಸೂರು ನಡುವೆ 143 ಕಿಲೋಮೀಟರ್ ಅಂತರವಿದೆ. ಈ ಅಂತರವನ್ನು ಈ ಎಕ್ಸಪ್ರೆಸ್ ವೇ 118 ಕಿಲೋಮೀಟರ್​ಗೆ ಇಳಿಸಿದೆ. ಹಾಗಾಗಿ ಈ ದೂರವನ್ನು ಕ್ರಮಿಸಲು ಕೇವಲ 90 ನಿಮಿಷ ಸಾಕಾಗಲಿದೆ. ಆದರೆ ಈ ಮೊದಲು ಈ ಎರಡು ನಗರಗಳ ಮಧ್ಯೆ ಸಂಚರಿಸಲು 3ಗಂಟೆ ಬೇಕಾಗುತ್ತಿತ್ತು. ಇದೀಗ ಸಂಚಾರ ಸಮಯ ಅರ್ಧಕ್ಕೆ ಇಳಿದಿದೆ.

ಇದನ್ನೂ ಓದಿ: ಎಕನಾಮಿಕ್ ಕ್ಯಾಪಿಟಲ್ ಟು ಕಲ್ಚರಲ್ ಕ್ಯಾಪಿಟಲ್: ಎಕ್ಸ್​ಪ್ರೆಸ್ ವೇ ಕುರಿತ ಪಕ್ಷಿನೋಟ ಇಲ್ಲಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.