ETV Bharat / state

ಬೆಂಗಳೂರು: ನೀರಿನ ಟಬ್‌ನಲ್ಲಿ ಮುಳುಗಿಸಿ ಮಗು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ - ಮಗುವನ್ನು ನೀರಿನ ಟಬ್‌ನಲ್ಲಿ ಮುಳುಗಿಸಿ ಕೊಲೆ

ಗೃಹಿಣಿಯೊಬ್ಬರು ತನ್ನ ಮೂರುವರೆ ವರ್ಷದ ಮಗುವನ್ನು ನೀರಿನ ಟಬ್‌ನಲ್ಲಿ ಮುಳುಗಿಸಿ ಕೊಲೆಗೈದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Bengaluru
ಬೆಂಗಳೂರು
author img

By

Published : Aug 23, 2022, 7:14 AM IST

Updated : Aug 23, 2022, 7:41 AM IST

ಬೆಂಗಳೂರು: ಸುಮಾರು ಮೂರುವರೆ ವರ್ಷದ ಹೆಣ್ಣು ಮಗುವನ್ನು ನೀರಿನ ಟಬ್​​ನಲ್ಲಿ ಮುಳುಗಿಸಿ ಹತ್ಯೆ‌ ಮಾಡಿದ ತಾಯಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ವಿಭೂತಿಪುರದ ಮನೆಯೊಂದರಲ್ಲಿ‌‌ ಘಟನೆ ನಡೆದಿದೆ. ನೇಣು ಬಿಗಿದುಕೊಂಡಿದ್ದ ಗಾಯತ್ರಿ ದೇವಿ ಬದುಕುಳಿದಿದ್ದು, ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಮಿಳುನಾಡು ಮೂಲದ ಗಾಯತ್ರಿದೇವಿ ಹಾಗೂ ನರೇಂದ್ರನ್ ದಂಪತಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ. ಇವರಿಗೆ ಸಂಯುಕ್ತಾ ಎಂಬ ಮಗಳಿದ್ದಾಳೆ. ನರೇಂದ್ರನ್ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕಳೆದ 20 ದಿನಗಳ ಹಿಂದೆ ಈರೋಡ್​​ನಲ್ಲಿ ವಾಸವಾಗಿದ್ದ ನರೇಂದ್ರನ್ ಅವರ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ಊರಿಗೆ ಹೋಗಿದ್ದ ಅವರು ಸೋಮವಾರ ಮುಂಜಾನೆ ವಾಪಸ್ ಆಗಿದ್ದರು. ಮನೆ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ ಬಲವಾಗಿ ಬಾಗಿಲು ತಳ್ಳಿದ್ದಾರೆ. ಒಳಗಡೆಯಿಂದ ಸರಿಯಾಗಿ ಲಾಕ್‌ ಆಗದ ಕಾರಣ ತಕ್ಷಣ ಬಾಗಿಲು ತೆರೆದುಕೊಂಡಿದೆ.

ಒಳಪ್ರವೇಶಿಸಿದಾಗ ಮಗುವನ್ನು ನೀರಿನ ಬಕೆಟ್​​ನಲ್ಲಿ‌ ಮುಳುಗಿಸಿ ಹತ್ಯೆ ಮಾಡಿದ್ದು ಗೊತ್ತಾಗಿದೆ. ಗಾಯಿತ್ರಿದೇವಿ ಫ್ಯಾನಿಗೆ ನೇಣು ಬಿಗಿದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಇದನ್ನು ನೋಡಿದ ನರೇಂದ್ರನ್ ಆತಂಕದಿಂದಲೇ‌ ಪತ್ನಿಯನ್ನು ಕೆಳಗಿಳಿಸಿದಾಗ ಉಸಿರಾಡುತ್ತಿರುವುದನ್ನು ಗಮನಿಸಿದ್ದಾರೆ.‌ ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ.

ಡೆತ್ ನೋಟ್‌ನಲ್ಲೇನಿದೆ?: ಡೆತ್‌ ನೋಟ್‌ ಪ್ರತಿ ಪೊಲೀಸರಿಗೆ ದೊರೆತಿದೆ. "ಸಂಕಷ್ಟ ನಿಭಾಯಿಸುವ ಶಕ್ತಿ ನನ್ನಲ್ಲಿ‌ಲ್ಲ. ನಾನು ಸತ್ತರೆ ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲ. ಹೀಗಾಗಿ ಮಗುವನ್ನು ಸಾಯಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ" ಎಂದು ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗಿನ ಘಟನಾವಳಿಗಳು: ಬನಶಂಕರಿ‌‌ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿಪುರದ ನಿವಾಸವೊಂದರಲ್ಲಿ ಆ.8 ರಂದು ಮನೆಯಲ್ಲಿ ತಾಯಿ-ಮಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಷ ಸೇವಿಸಿ ದಂತ ವೈದ್ಯೆ ಶೈಮಾ (39) ಮಗಳು ಆರಾಧನಾ (10) ಮೃತಪಟ್ಟಿದ್ದರು.

ಆ. 4 ರಂದು ಸಂಪಂಗಿರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್​ಮೆಂಟ್‌ವೊಂದರ 4ನೇ‌ ಮಹಡಿಯಿಂದ ತಾಯಿ ಸುಷ್ಮಾ‌ ಎಂಬಾಕೆ‌ 5 ವರ್ಷದ ಮಗುವನ್ನು‌ ಎಸೆದು ಹತ್ಯೆ ಮಾಡಿದ್ದಳು.‌ ಈ ಅಮಾನವೀಯ ಕೃತ್ಯದ ದೃಶ್ಯ ಸಿಸಿಟಿವಿ ಸೆರೆಯಾಗಿ ಸಂಚಲನ ಮೂಡಿಸಿತ್ತು.

ಇದನ್ನೂ ಓದಿ: ಬೆಂಗಳೂರು: ಬಿಲ್ಡಿಂಗ್​​​​​ನಿಂದ ಕಂದಮ್ಮನನ್ನ ಕೆಳಕ್ಕೆ ಎಸೆದು ಹತ್ಯೆ ಮಾಡಿದ ತಾಯಿ!

Last Updated : Aug 23, 2022, 7:41 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.