ETV Bharat / state

ವಿಶ್ವದರ್ಜೆ ನಗರದ ರೀತಿ ಬೆಂಗಳೂರು ಅಭಿವೃದ್ಧಿ; ಮಿಷನ್-2022 ಟಾರ್ಗೆಟ್ ಫಿಕ್ಸ್ ಮಾಡಿದ ಸರ್ಕಾರ

ಬೆಂಗಳೂರು ಮಿಷನ್-2022 ಬೆಂಗಳೂರಿಗೆ ನವಚೈತನ್ಯ ತರುವ, ಸರ್ವಾಂಗೀಣ ಪ್ರಗತಿಯ ದೂರದೃಷ್ಟಿ ಹೊಂದಿರುವ ಕಾರ್ಯಕ್ರಮವಾಗಿದೆ. ವಿಶ್ವದರ್ಜೆಯ ನಗರವಾಗಿ ಬೆಂಗಳೂರು ನಗರ ನಿರ್ಮಾಣದ ಕನಸು ನನಸಾಗಿಸಲು ಇದೊಂದು ಮಹತ್ವಪೂರ್ಣ ಹೆಜ್ಜೆಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ.

bengaluru-mission-2022-development-news
ವಿಶ್ವದರ್ಜೆ ನಗರದ ರೀತಿ ಬೆಂಗಳೂರು ಅಭಿವೃದ್ಧಿ
author img

By

Published : Dec 18, 2020, 9:04 PM IST

ಬೆಂಗಳೂರು: ವಿಶ್ವದರ್ಜೆ ನಗರದ‌ ರೀತಿ ರಾಜಧಾನಿಯನ್ನು ಅಭಿವೃದ್ಧಿಪಡಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಮೂಲಸೌಕರ್ಯ ಅಭಿವೃದ್ಧಿಗಾಗಿ ಬೆಂಗಳೂರು ಮಿಷನ್- 2022 ಯೋಜನೆ ಘೋಷಿಸಿದ್ದು, ಎರಡು ವರ್ಷದಲ್ಲಿ ಯೋಜನೆ ಅನುಷ್ಠಾನದ ಭರವಸೆ ನೀಡಿದೆ.

ಬೆಂಗಳೂರು 21ನೇ ಶತಮಾನದ 22ನೇ ವರ್ಷದಲ್ಲಿ ಹೇಗಿರಬೇಕು ಎಂಬ ಪರಿಕಲ್ಪನೆಯೊಂದಿಗೆ ಬೆಂಗಳೂರು ಮಿಷನ್-2022 ಕಾರ್ಯಯೋಜನೆಯ ನೀಲನಕ್ಷೆಯನ್ನು ರೂಪಿಸಲಾಗಿದೆ. ಬೆಂಗಳೂರು ನಗರದ ನಾಗರಿಕರು ತಮ್ಮ ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸಿ ಅಗತ್ಯ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಿದ್ದು, ಬೆಂಗಳೂರು ಮಿಷನ್ 2022 ಕಾರ್ಯಕ್ರಮವನ್ನು ರೂಪಿಸಿದೆ. ಅದಕ್ಕಾಗಿ ಮುಂದಿನ ಎರಡು ವರ್ಷಗಳಲ್ಲಿ ಬೆಂಗಳೂರು ನಗರದ ಅಭಿವೃದ್ಧಿಗೆ ಸರ್ಕಾರ ನೀಲನಕ್ಷೆಯನ್ನು ಸಿದ್ಧಪಡಿಸಿ ನಾಲ್ಕು ಪ್ರಮುಖ ವಲಯಗಳಾಗಿ ಗುರುತಿಸಿದೆ.

ವಲಯ:

* ಸುಗಮ ಸಂಚಾರ
* ಸ್ವಚ್ಛ ಬೆಂಗಳೂರು
* ಹಸಿರು ಬೆಂಗಳೂರು
* ಜನಸಂಪರ್ಕ- ಸಾರ್ವಜನಿಕ ಕುಂದು ಕೊರತೆ ನಿವಾರಣೆ

ಸುಗಮ ಸಂಚಾರ:

ಅತ್ಯುತ್ತಮ ರಸ್ತೆ ನಿರ್ವಹಣೆ: 12 ಅತಿ ದಟ್ಟಣೆಯ ರಸ್ತೆಗಳನ್ನು ಒಟ್ಟು 190 ಕಿಲೋಮೀಟರ್ ಉದ್ದಕ್ಕೆ ಅನ್ವಯವಾಗುವಂತೆ ಮೇಲ್ದರ್ಜೆಗೇರಿಸಿ ನಿರ್ವಹಣೆ ಮಾಡುವುದು.

* ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ ನಿರ್ಮಾಣ ಕಾರ್ಯ ಶೀಘ್ರ ಪೂರ್ಣಗೊಳಿಸುವುದು

* ಬೆಂಗಳೂರು ನಗರದಲ್ಲಿ ವಾರ್ಷಿಕ ನಿರ್ವಹಣಾ ಒಪ್ಪಂದದ ಮೂಲಕ 400 ಕಿಲೋ ಮೀಟರ್ ಉದ್ದದ ಪ್ರಮುಖ ಸಂಪರ್ಕ ರಸ್ತೆಗಳ ಅತ್ಯುತ್ತಮ ನಿರ್ವಹಣೆ

* ರಸ್ತೆ ಸುರಕ್ಷತಾ ಪರಿಕರಗಳನ್ನು ಅಳವಡಿಸುವ ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ಖಾತರಿಪಡಿಸುವುದು

* ಸಮನ್ವಯ ಹೊಂದಿದ ಸಿಗ್ನಲ್ ದೀಪಗಳ ಅಳವಡಿಕೆ

ಸ್ಮಾರ್ಟ್ ಸಂಚಾರ:

* ವಿದ್ಯುತ್ ಚಾಲಿತ ಸಮೂಹ ಸಾರಿಗೆ ವ್ಯವಸ್ಥೆಗಳಿಗೆ ಉತ್ತೇಜನ ನೀಡುವುದು

* ಪ್ರಗತಿಯಲ್ಲಿರುವ ಮೆಟ್ರೋ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವುದು

* ಪ್ರಮುಖ ರಸ್ತೆಗಳಲ್ಲಿ ಬಸ್ ಆದ್ಯತಾ ಪಥ ಗುರುತಿಸುವುದು

* ರಸ್ತೆಗಳಲ್ಲಿನ ದಟ್ಟಣೆ ಕಡಿಮೆಗೊಳಿಸಲು ಉಪನಗರ ರೈಲ್ವೆ ಯೋಜನೆಗಳನ್ನು ಕಾರ್ಯಗತಗೊಳಿಸುವುದು

ಸ್ವಚ್ಛ ಬೆಂಗಳೂರು:

* ಸಮಗ್ರ ನಗರ ತ್ಯಾಜ್ಯ ನಿರ್ವಹಣೆ: ನಗರ ತ್ಯಾಜ್ಯ ವಿಲೇವಾರಿಯ ದಕ್ಷ ಹಾಗೂ ಸಮರ್ಥ ನಿರ್ವಹಣೆಗೆ ಸಾಂಸ್ಥಿಕ ರೂಪ ನೀಡುವುದು

* ಪ್ರಸ್ತುತ ಕಾರ್ಯನಿರ್ವಹಿಸುವ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಉನ್ನತೀಕರಿಸಿ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡುವುದು

* ತಂತ್ರಜ್ಞಾನದ ನೆರವಿನಿಂದ ಘನತ್ಯಾಜ್ಯ ಸಂಗ್ರಹ ಮತ್ತು ಸಾಗಣೆಯನ್ನ ನಿರ್ವಹಿಸುವುದು ಮತ್ತು ನಿಗಾವಹಿಸುವುದು

* ಹಳೆಯ ತ್ಯಾಜ್ಯ ಸುರಿಯುವ ಸ್ಥಳಗಳ ಅಭಿವೃದ್ಧಿ

* ಮಾದರಿ ತ್ಯಾಜ್ಯ ಸಂಗ್ರಹ ಕೇಂದ್ರಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದು

ನನ್ನ ಕಸ ನನ್ನ ಜವಾಬ್ದಾರಿ:

* ಎಲ್ಲ ಹಂತಗಳಲ್ಲಿ ಘನ ತ್ಯಾಜ್ಯದ ಯಶಸ್ವಿ ನಿರ್ವಹಣೆಗಾಗಿ ನಾಗರಿಕರ ಸಹಭಾಗಿತ್ವವನ್ನು ಹೆಚ್ಚಿಸಲು ತ್ಯಾಜ್ಯ ನಿರ್ವಹಣಾ ತರಬೇತುದಾರರ ತರಬೇತಿ ಹಾಗೂ ಶುಚಿ ಮಿತ್ರರ ತರಬೇತಿ ಕಾರ್ಯಕ್ರಮ

* ಪ್ರತಿ ವಲಯದಲ್ಲಿ ಗೊಬ್ಬರ ತಯಾರಿಕೆ ಹಾಗೂ ಶೂನ್ಯ ತ್ಯಾಜ್ಯ ಮನೆಗಳ ಕುರಿತಂತೆ ಸಮುದಾಯಕ್ಕೆ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲು ಒಕ್ಕಲಿಗ ಕೇಂದ್ರಗಳ ಸ್ಥಾಪನೆ

* ಸ್ಥಳೀಯವಾಗಿಯೇ ಗೊಬ್ಬರ ಖರೀದಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಮನೆಯಲ್ಲಿಯೇ ಹಸಿತ್ಯಾಜ್ಯ ಸಂಸ್ಕರಣೆಯನ್ನು ಉಪಯೋಗಿಸುವುದು

ಹಸಿರು ಬೆಂಗಳೂರು:

* ಹಸಿರು ನೆರೆಹೊರೆ: ರಾಜ್ಯ ಸರ್ಕಾರದ ಕೆಲಸ ಸಾರ್ವಜನಿಕ ಉದ್ದಿಮೆಗಳ ಭೂಮಿಯನ್ನು ನಗರದ ಹಸಿರು ಹೊದಿಕೆ ಹೆಚ್ಚಿಸಲು ಮರುಬಳಕೆ ಮಾಡುವುದು

* ನಗರದ ಹೊರ ವಲಯದಲ್ಲಿ 400 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಎರಡು ಬೃಹತ್ ವೃಕ್ಷೋದ್ಯಾನ ಅಭಿವೃದ್ಧಿ

* ನಗರದ ತುರಹಳ್ಳಿ, ಜೆಪಿ ನಗರ, ಕಾಡುಗೋಡಿ ಮತ್ತು ಮತ್ತಿಕೆರೆಯ ಕಿರು ಅರಣ್ಯಗಳನ್ನು ಜನಪ್ರಿಯಗೊಳಿಸುವುದು

* ನಗರದ ವಾತಾವರಣದ ವಾಯು ಮಾಲಿನ್ಯದ ಮೇಲೆ ತೀವ್ರ ನಿಗಾ ವಹಿಸಲು ವಾಯು ಗುಣಮಟ್ಟ ಪರೀಕ್ಷೆ ಉಪಕರಣಗಳ ಸಂಖ್ಯೆಯನ್ನು 500ಕ್ಕೆ ಹೆಚ್ಚಿಸುವುದು

* ಜಲಮೂಲಗಳ ಶುದ್ಧೀಕರಣ ಹಾಗೂ ಸಂರಕ್ಷಣೆ: ಕೆ-100 ರಾಜಕಾಲುವೆ ಯೋಜನೆ ಮೂಲಕ ರಾಜಕಾಲುವೆಗಳು ಹರಿಯುವ ಪ್ರದೇಶಗಳ ಅಭಿವೃದ್ಧಿ

* ಬೆಂಗಳೂರಿನ 25 ಕೆರೆಗಳ ಪುನಶ್ಚೇತನಕ್ಕೆ ಕ್ರಮ. ಆ ಮೂಲಕ ನೀರಿನ ಗುಣಮಟ್ಟ ಸುಧಾರಿಸುವ ಜೊತೆಗೆ ಕೆರೆಗಳಲ್ಲಿ ಪ್ರತಿಕ್ಷಣ ನೀರಿನ ಗುಣಮಟ್ಟದ ಮೇಲೆ ನಿಗಾ ಇರಿಸುವುದು

* ಈ ಕೆರೆಗಳ ಸುತ್ತ ಜೀವವೈವಿಧ್ಯ ರಕ್ಷಣೆಗೆ ಆದ್ಯತೆ ನೀಡುವುದು

* ಸ್ವಯಂಸೇವಕರು ಮತ್ತು ಇತರ ಭಾಗೀದಾರರೊಂದಿಗೆ ಯೋಜನೆಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವುದು.

ಜನಸಂಪರ್ಕ- ಸಾರ್ವಜನಿಕ ಕುಂದು ಕೊರತೆ ನಿವಾರಣೆ:

* ಏಕೀಕೃತ ಜನಸಂಪರ್ಕ ವೇದಿಕೆ: ಖಾತೆ, ಆಸ್ತಿ ತೆರಿಗೆ ಪಾವತಿ, ಜನನ ಮತ್ತು ಮರಣ ಪ್ರಮಾಣ ಪತ್ರಗಳ ವಿತರಣೆ, ವ್ಯಾಪಾರ ಪರವಾನಗಿ ವಿತರಣೆ ಮೊದಲಾದ ನಾಗರಿಕ ಸೇವೆಗಳನ್ನು ಏಕೀಕೃತ ಡಿಜಿಟಲ್ ವೇದಿಕೆಯಲ್ಲಿ ಒದಗಿಸುವುದು

* ನಾಗರಿಕರಿಗೆ ರಸ್ತೆ ಕುರಿತ ಮಾಹಿತಿ ಆನ್ ಲೈನ್ ನಲ್ಲಿ ಒದಗಿಸುವುದು

* ನಾಗರಿಕ ಸೇವೆಗಳು ವಿವಿಧ ಯೋಜನೆಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳ ಕುರಿತು ಮಾಹಿತಿ ಒದಗಿಸುವುದು

* ಸಾರ್ವಜನಿಕ ಕುಂದುಕೊರತೆ ನಿವಾರಣೆಗೆ ಏಕೀಕೃತ ವೇದಿಕೆಯಾಗಿ ಸಹಾಯ ಪೋರ್ಟಲ್​​ನ ಮರುವಿನ್ಯಾಸ. ಆ ಮೂಲಕ ಬೆಂಗಳೂರಿನ ನಾಗರಿಕರಿಗೆ ಸುಧಾರಿತ ಸೇವೆ ಒದಗಿಸುವುದು

* ಬೆಂಗಳೂರಿಗೊಂದು ಬೆಳಕಿಂಡಿ: ಸಂಸ್ಕೃತಿ ಪರಂಪರೆ ಮತ್ತು ಕರಕುಶಲ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸುವುದು

* ಸಾರ್ವಜನಿಕರಿಗೆ ಮನರಂಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನದ ತಾಣಗಳನ್ನು ಅಭಿವೃದ್ಧಿಪಡಿಸುವುದು. ಆ ಮೂಲಕ ಕಲಾಕಾರರು, ಕುಶಲಕರ್ಮಿಗಳು ಹಾಗೂ ಇತರ ಸೃಜನಶೀಲ ವೃತ್ತಿಯಲ್ಲಿರುವವರಿಗೆ ಅವಕಾಶಗಳನ್ನು ಒದಗಿಸುವುದು

* ಇತಿಹಾಸ, ಬೆಂಗಳೂರಿನ ತಂತ್ರಜ್ಞಾನದ ಇತಿಹಾಸವನ್ನು ಪರಿಚಯಿಸುವ ಸಂವಹನಶೀಲ ಡಿಜಿಟಲ್ ಪ್ರಾತ್ಯಕ್ಷಿಕೆಯನ್ನು ಸ್ಥಾಪಿಸುವುದು

* ಉದ್ಯಮಶೀಲನೆ, ನಾವಿನ್ಯತೆ ಮತ್ತು ಜೈವಿಕ ತಂತ್ರಜ್ಞಾನ ಉದ್ಯಮಗಳ ಮುನ್ನಡೆಯನ್ನು ಬಿಂಬಿಸುವ ಬೆಂಗಳೂರು ಇನ್ನೋವೇಶನ್ ಕೇಂದ್ರದ ಸ್ಥಾಪನೆ ಮಾಡುವುದು

ಒಟ್ಟಿನಲ್ಲಿ ಬೆಂಗಳೂರು ನಗರದಲ್ಲಿ ಅತ್ಯುತ್ತಮ ಮೂಲಸೌಕರ್ಯ ಒದಗಿಸುವುದರೊಂದಿಗೆ ಸ್ವಚ್ಛ, ಸುಂದರ ಪರಿಸರ ನಿರ್ಮಾಣ ಸರ್ಕಾರದ ಆದ್ಯತೆಯಾಗಿದ್ದು, ಅತಿವೇಗದ ಬೆಳವಣಿಗೆಯ ಭರದಲ್ಲಿ ನಗರದ ಭವ್ಯ ಇತಿಹಾಸ ಪರಂಪರೆ, ಸಂಸ್ಕೃತಿಗಳನ್ನು ರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಪರಿಚಯಿಸುವ ಮಹೋನ್ನತ ಗುರಿಯನ್ನು ಹೊಂದಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.