ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ಮಾಡುವುದೇ ತಪ್ಪು. ಅದರಲ್ಲೂ ನಿಯಮ ಉಲ್ಲಂಘಿಸಿದ ಬಳಿಕ ದಂಡ ಪಾವತಿಸದೇ ಇರುವುದು ಮತ್ತೊಂದು ತಪ್ಪು. ಆದರೆ, ಇಲ್ಲೊಬ್ಬರು ಟ್ರಾಫಿಕ್ ಸಿಗ್ನಲ್ ಉಲ್ಲಂಘಿಸಿ ಪಶ್ಚಾತಾಪ ಪಟ್ಟಿದ್ದಾರೆ. ಅಷ್ಟೇ ಅಲ್ಲದೆ ದಂಡ ಪಾವತಿಸುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಬಾಲಕೃಷ್ಞ ಬಿರ್ಲಾ ಎಂಬುವರು ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣ ಬಳಿ ಅಚಾನಕ್ಕಾಗಿ ಟ್ರಾಫಿಕ್ ಸಿಗ್ನಲ್ ದಾಟಿ ನಿಯಮ ಉಲ್ಲಂಘಿಸಿದ್ದು ಮನೆಗೆ ಬಂದಾಗ ಪಶ್ಚಾತಾಪ ಪಟ್ಟಿದ್ದಾರೆ. ತಪ್ಪಿನ ಅರಿವಾದ ಬಳಿಕ ಕೂಡಲೇ ಟ್ರಾಫಿಕ್ ವೈಯಲೇಷನ್ ಮಾಡಿದ್ದೇನೆ, ಸ್ವಯಂಪ್ರೇರಿತವಾಗಿ ದಂಡ ಕಟ್ಟಬಹುದೇ ಎಂದು ಟ್ವೀಟ್ ಮಾಡಿರುವ ಅವರು, ಬೆಂಗಳೂರು ನಗರ ಟ್ರಾಫಿಕ್ ಟ್ವಿಟರ್ ಖಾತೆಯೊಂದಿಗೆ ಟ್ಯಾಗ್ ಮಾಡಿದ್ದಾರೆ.
ಇದಕ್ಕೆ ರೀಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಪೊಲೀಸರು, ನೋಟಿಸ್ ಕಳುಹಿಸಿದ ಬಳಿಕ ದಂಡ ಪಾವತಿಸುವಂತೆ ತಿಳಿಸಿದ್ದಾರೆ.
ಇದನ್ನೂ ಓದಿ: '3 ವರ್ಷ ಡೇಟಿಂಗ್ ಮಾಡಿ ಟ್ರಾಫಿಕ್‌ನಲ್ಲಿ ಸಿಕ್ಕವಳ ಮದ್ವೆಯಾದೆ! ಬೆಂಗಳೂರಿನ ಫ್ಲೈಓವರ್ ಕೆಲಸ ಮಾತ್ರ ಹಾಗೇ ಇದೆ!'