ಬೆಂಗಳೂರು: ಕೊರೊನಾ ಸರಪಳಿ ಬ್ರೇಕ್ ಮಾಡಲು ಇಂದಿನಿಂದ 14 ದಿನಗಳ ಕಾಲ ರಾಜ್ಯದಲ್ಲಿ ಕಠಿಣ ಲಾಕ್ಡೌನ್ ಜಾರಿಯಾಗಲಿದ್ದು, ಸಿಲಿಕಾನ್ ಸಿಟಿಯಲ್ಲಿ 10 ಗಂಟೆ ಬಳಿಕ ಅನಗತ್ಯವಾಗಿ ರಸ್ತೆಗಿಳಿದರೆ ವಾಹನ ಸೀಜ್ ಮಾಡಲು ಪೊಲೀಸರು ಸನ್ನದ್ಧರಾಗಿದ್ದಾರೆ.
ಕೆ.ಆರ್ ಮಾರ್ಕೆಟ್ನಲ್ಲಿ ವಿನಾಯಿತಿ ನೀಡಿದ ಅವಧಿಯಲ್ಲೇ ಪೊಲೀಸರು ಫೀಲ್ಡಿಗಿಳಿದಿದ್ದು, ಲಾಠಿ ಹಿಡಿದು ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸುವ ಪ್ರಕ್ರಿಯೆ ಆರಂಭಿಸಿದ್ದಾರೆ. ಇಲ್ಲ ಸಲ್ಲದ ಕಾರಣ ಹೇಳುವ ವಾಹನ ಸವಾರರಿಗೆ ಲಾಠಿ ಬಿಸಿ ಮುಟ್ಟಿಸುತ್ತಿದ್ದಾರೆ.
ಓದಿ : ಚಿತ್ರದುರ್ಗದಲ್ಲಿ ಲಾಕ್ ಡೌನ್ಗೆ ಡೋಂಟ್ ಕೇರ್ : ಬೆಳಂಬೆಳ್ಳಗ್ಗೆ 150 ಬೈಕ್ ಸೀಜ್
ಈಗಾಗಲೇ ಹೆಚ್ಚಿನ ಜನರನ್ನು ತುಂಬಿಸಿಕೊಂಡು ಹೋಗುತ್ತಿದ್ದ 10ಕ್ಕೂ ಹೆಚ್ಚು ಆಟೋಗಳನ್ನು ಸೀಜ್ ಮಾಡಲಾಗಿದ್ದು, 10 ಗಂಟೆ ಬಳಿಕ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ.