ETV Bharat / state

48 ವರ್ಷಗಳ ನಂತರ ಹೊರಬಂದ ಜಯಚಾಮರಾಜ ಒಡೆಯರ್ ಜೀವಚರಿತ್ರೆ

ಮಹಾರಾಜ ಜಯಚಾಮರಾಜ ಒಡೆಯರ್ ದಿವಂಗತರಾಗಿ 48 ವರ್ಷ ಕಳೆದರೂ ಇಂದಿನವರೆಗೂ ಅವರ ಕುರಿತು ಒಂದು ಪುಸ್ತಕ ಕೂಡ ಬಂದಿರಲಿಲ್ಲ ಎಂದು ಲೇಖಕಿ ದೀಪ್ತಿ ನವರತ್ನ ತಿಳಿಸಿದರು.

bengaluru lit fest session about mevarik maharaja
48 ವರ್ಷಗಳ ನಂತರ ಹೊರಬಂದ ಜಯಚಾಮರಾಜ ಒಡೆಯರ್ ಜೀವಚರಿತ್ರೆ
author img

By

Published : Dec 4, 2022, 9:59 PM IST

ಬೆಂಗಳೂರು: ಭಾನುವಾರ ಲಲಿತ ಅಶೋಕ ಹೋಟೆಲ್‌ನಲ್ಲಿ ನಡೆದ ಬೆಂಗಳೂರು ಲಿಟ್ ಫೆಸ್ಟ್‌ ಕಾರ್ಯಕ್ರಮದಲ್ಲಿ ಜಯಚಾಮರಾಜ ಒಡೆಯರ್ ಜೀವನ ಚರಿತ್ರೆ ಕುರಿತ ಪುಸ್ತಕ ‘ದಿ ಮೇವರಿಕ್ ಮಹಾರಾಜಾ’ ಪುಸ್ತಕ ಕುರಿತಾದ ಸಂವಾದದಲ್ಲಿ ಮಾತನಾಡಿದ ದೀಪ್ತಿ ದಿ ಮೆಮೆರಿಕ್‌ ಮಹಾರಾಜ ಪುಸ್ತಕವು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಜೀವನಚರಿತ್ರೆ ಹಾಗೂ ಆತ್ಮಚರಿತ್ರೆಯಾಗಿದೆ.

ಮೈಸೂರಿನ ಕೊನೆಯ ಮಹಾರಾಜ ಜಯಚಾಮರಾಜೇಂದ್ರ ಒಡೆಯ‌ರ ಅವರ ಪ್ರಪ್ರಥಮ ಜೀವನದ ಯಥಾವತ್ತಾಗಿ ಚಿತ್ರಿಸುವ ಬಗ್ಗೆ ಮಹಾರಾಜರು ದಿವಂಗತರಾಗಿ 48 ವರ್ಷಗಳು ಕಳೆದರೂ ಇಂದಿನ ತನಕ ಒಂದು ಪುಸ್ತಕ ಕೂಡ ಬಂದಿರಲಿಲ್ಲ. ಆದರೆ ನನ್ನ ಮೊದಲ ಜೀವನಚರಿತ್ರೆ ಪುಸ್ತಕದಲ್ಲಿ ಅವರ ಜೀವನ ಮತ್ತು ಸಮಯ, ವಿಶೇಷ ಬರಹಗಳು, ಸಂಗೀತ ಆವಿಷ್ಕಾರಗಳು, ಪರೋಪಕಾರಿ ಕಾರ್ಯಕ್ರಮಗಳು ಜೀವನದ ಇತರ ಮುಖಗಳನ್ನು ತೋರಿಸುವ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು.

ಯುವ ಜನರಿಗೋಸ್ಕರ ಬರೆದ ಪುಸ್ತಕ: ಆಡಳಿತದಲ್ಲಿ ಕುಶಾಗ್ರಮತಿಯಾಗಿದ್ದ ಅವರ ಛಾಯಾಚಿತ್ರಗಳು ಮತ್ತು ಐತಿಹಾಸಿಕ ಘಟನೆಗಳ ಮೂಲಕ 320 ಪುಟಗಳ ಪುಸ್ತಕವು ಮಹಾರಾಜರ ಬಹುಮುಖ ವ್ಯಕ್ತಿತ್ವವನ್ನು ತೋರಿಸುತ್ತದೆ. ಇಂತಹ ಪುಸ್ತಕದ ಚರ್ಚೆ ಲಿಟ್ರೇಚರ್ ಫೆಸ್‌ನಲ್ಲಿ ಮೊದಲನೇ ಬಾರಿ ಚರ್ಚೆಯಾಗಿದ್ದು, ಈಗಾಗಲೇ ಬಂದಿರುವ ಪುಸ್ತಕಗಳು ಬರೀ ಹಳೆಯ ಮೈಸೂರಿನ ಕುರಿತಾಗಿ ಇದ್ದವು. ದಿ ಮೇವರಿಕ್ ಮಹಾರಾಜ ಪುಸ್ತಕವು ಜನಸಾಮಾನ್ಯರಿಗೆ ಮಹಾರಾಜರ ಆತ್ಮಚರಿತ್ರೆಯ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಮತ್ತು ಯುವ ಜನರಿಗೋಸ್ಕರ ಬರೆದಿರುವ ಪುಸ್ತಕವಾಗಿದೆ ಎಂದು ಹೇಳಿದರು.

ಸಂವಾದದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಈ ಸಂಸ್ಥಾನದ ಬಗ್ಗೆ ಒಡೆಯರ ಬಗ್ಗೆ ಅವರ ಜೀವನಚರಿತೆಗಳ ಬಗ್ಗೆ ಪುಸ್ತಕಗಳು ಮತ್ತಷ್ಟು ಬರಬೇಕು, ಭೂತಕಾಲಕ್ಕೆ ಸರಿಯಾದ ಗೌರವವನ್ನು ನೀಡಿ ಭವಿಷ್ಯದ ಬಗ್ಗೆ ಚಿಂತನೆ ನಡೆಸುತ್ತಿದ್ದವರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ರ ಚಿಂತನೆಯಾಗಿತ್ತು ಎಂದರು.

ನಮ್ಮ ದೇಶ ಬ್ರಿಟಿಷ್ ರಾಜ್, ಸಮಾಜವಾದ, ಕಮ್ಯೂನಿಸ್ಟ್‌ ಸಿದ್ಧಾಂತದಿಂದ ಹೊರಬಂದು ಆರ್ಥಿಕವಾಗಿ ಅಭಿವೃದ್ಧಿಯಾಗುವತ್ತ ಮುನ್ನುಗ್ಗುತ್ತಿದೆ. ಜನಗಳ ನಡುವೆ ಇದ್ದು, ಅವರನ್ನು ಬೆಳೆಸಿ, ನಾವೂ ಬೆಳೆದಿರುವ ಮನೆತನ ನಮ್ಮದು. ಜನರಿಗೋಸ್ಕರ ಜನರಿಗಾಗಿ ಪ್ರಜಾಪ್ರಭುತ್ವದ ಮೌಲ್ಯವಾಗಿದೆ. ನಾನು ಕೂಡ ಇದನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಶ್ವಾಸನೆ ನೀಡಿದರು.

ಇದನ್ನೂ ಓದಿ: ಕನ್ನಡಕ್ಕೆ ಆದ್ಯತೆಯ ಕೆಲಸ ನಮ್ಮ ನಾಡಿನಲ್ಲೇ ಆಗಬೇಕಿದೆ: ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.