ETV Bharat / state

'ಆನಿಮೇಷನ್, ವಿಷುವಲ್ ಎಫೆಕ್ಟ್, ಗೇಮಿಂಗ್​ ಉದ್ಯಮದಲ್ಲಿ ಬೆಂಗಳೂರು ಜಾಗತಿಕ ಕೇಂದ್ರ' - ವಿಷುವಲ್ ಎಫೆಕ್ಟ್

Bengaluru tech summit 2023: ಬೆಂಗಳೂರು ಟೆಕ್ ಸಮ್ಮಿಟ್​​ನಲ್ಲಿ ಆನಿಮೇಷನ್, ವಿಷುವಲ್ ಎಫೆಕ್ಟ್, ಗೇಮಿಂಗ್ ಮತ್ತು ಕಾಮಿಕ್ಸ್

Bengaluru tech summit 2023
Bengaluru tech summit 2023
author img

By ETV Bharat Karnataka Team

Published : Dec 2, 2023, 8:04 AM IST

ಬೆಂಗಳೂರು: ಆನಿಮೇಷನ್ ಮತ್ತು ವಿಷುವಲ್ ಎಫೆಕ್ಟ್ ವಲಯದಲ್ಲಿ ಬೆಂಗಳೂರು ಜಾಗತಿಕ ಕೇಂದ್ರವಾಗಿ ಹೊರಹೊಮ್ಮಿದೆ ಎಂದು ಟೆಕ್ನಿಕಲರ್ ಕ್ರಿಯೇಟಿವ್ ಸರ್ವೀಸಸ್ ಸಂಸ್ಥೆಯ ಭಾರತೀಯ ವಿಭಾಗದ ಮುಖ್ಯಸ್ಥ ಬಿರೇನ್ ಘೋಷ್ ಶುಕ್ರವಾರ ಹೇಳಿದರು. ಬೆಂಗಳೂರು ಟೆಕ್ ಸಮ್ಮಿಟ್​​ನಲ್ಲಿ 'ಆನಿಮೇಷನ್, ವಿಷುವಲ್ ಎಫೆಕ್ಟ್, ಗೇಮಿಂಗ್ ಮತ್ತು ಕಾಮಿಕ್ಸ್-ಎವಿಜಿಸಿ ಭವಿಷ್ಯದ ಪರಿಕಲ್ಪನೆ: ಕರ್ನಾಟಕದ ನಾಯಕತ್ವ' ಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿವುಡ್ ಬಹುತೇಕ ಸಿನಿಮಾ ಮತ್ತು ಟಿವಿ ಸರಣಿಗಳ ಆನಿಮೇಷನ್ ಮತ್ತು ವಿಷುವಲ್ ಎಫೆಕ್ಟ್ ಬೆಂಗಳೂರಿನಲ್ಲೇ ನಿರ್ಮಾಣಗೊಳ್ಳುತ್ತವೆ ಎಂದರು.

ಸೃಜನಶೀಲತೆ ಮತ್ತು ತಂತ್ರಜ್ಞಾನದ ಸಂಗಮವಾದ ಎವಿಜಿಸಿ ಭವಿಷ್ಯದ ಮನರಂಜನಾ ಉದ್ಯಮವಾಗಿದ್ದು, ವರ್ಷದಿಂದ ವರ್ಷಕ್ಕೆ ಅಗಾಧವಾಗಿ ಬೆಳವಣಿಗೆ ಹೊಂದುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಉದ್ಯಮ ಪ್ರಸಕ್ತ ವರ್ಷ ಶೇಕಡ 20ರಷ್ಟು ಅಭಿವೃದ್ಧಿ ಹೊಂದಿದೆ. ಗೇಮಿಂಗ್ ಉದ್ಯಮವೂ ಹೆಚ್ಚಿನ ಅಭಿವೃದ್ಧಿ ಕಾಣುತ್ತಿದ್ದು ಪ್ರಸ್ತುತ ಸಿನಿಮಾ ಉದ್ಯಮಕ್ಕಿಂತ ಎರಡೂವರೆ ಪಟ್ಟು ದೊಡ್ಡದಿದೆ ಎಂದು ಅವರು ತಿಳಿಸಿದರು.

ಎವಿಜಿಸಿ ಮತ್ತು ಎಕ್ಸ್ ಆರ್ ವೇದಿಕೆ ಅಧ್ಯಕ್ಷ ಆಶಿಶ್ ಕುಲಕರ್ಣಿ ಮಾತನಾಡಿ, ಈ ವಲಯವು ಕಲೆ ಮತ್ತು ತಂತ್ರಜ್ಞಾನದ ಸಂಗಮವಾಗಿದ್ದು ಭಾರತದಲ್ಲಿ ಅಗಾಧ ಪ್ರತಿಭೆಗಳಿದ್ದಾರೆ. ಆದರೆ ಇಂತಹ ಪ್ರತಿಭೆಗಳನ್ನು ಶೈಕ್ಷಣಿಕವಾಗಿ ವೃತ್ತಿಪರರಾಗಿ ತಯಾರು ಮಾಡುವುದು ಸವಾಲಿನ ಕೆಲಸವಾಗಿದೆ. 1990ರ ದಶಕದಲ್ಲಿ ದೇಶದಲ್ಲಿ ಯಾವುದೇ ಆನಿಮೇಷನ್ ಸ್ಟುಡಿಯೋ ಇರಲಿಲ್ಲ. ಕೋರ್ಸ್​ಗಳಂತೂ ಇರಲೇ ಇಲ್ಲ. ಆಗ ಕೆಲವು ಸಿನಿಮಾ ವೃತ್ತಿಪರರು ಚನ್ನಪಟ್ಟಣ, ಕುಂಭಕೋಣಂ, ಮಹಾಬಲಿಪುರಂ ಮುಂತಾದ ಪಾರಂಪರಿಕ ತಾಣಗಳಿಗೆ ಭೇಟಿ ನೀಡಿ ಅಲ್ಲಿನ ಸಾಂಪ್ರದಾಯಿಕ ಕಲಾವಿದರನ್ನು ಕರೆ ತಂದು ಅವರಿಗೆ ತರಬೇತಿ ನೀಡಿ ಆನಿಮೇಷನ್ ಮಾಡಿಸುತ್ತಿದ್ದರು ಎಂದು ವಿವರಿಸಿದರು.

ಈ ವಲಯಕ್ಕೆ ಅಗಾಧ ಭವಿಷ್ಯವಿದ್ದರೂ ಈ ಮಾದರಿಯ ಕೋರ್ಸ್ ಆರಂಭಿಸುವಂತೆ ಶಿಕ್ಷಣ ಸಂಸ್ಥೆಗಳು ಹಾಗೂ ಬೋಧಕ ವರ್ಗವನ್ನು ಒಪ್ಪಿಸುವುದು ಕಷ್ಟದ ಕೆಲಸವಾಗಿತ್ತು. ಇದಕ್ಕಾಗಿ ತಾವು 700ಕ್ಕೂ ಹೆಚ್ಚು ಕಾಲೇಜು, ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದಾಗಿ ಅವರು ವಿವರಿಸಿದರು. ಪ್ರಸ್ತುತ ಆನಿಮೇಷನ್ ಮತ್ತ ವಿಷುವಲ್ ಎಫೆಕ್ಟ್ ಕಲಿಸುವ ಹಲವು ಕಾಲೇಜುಗಳು ದೇಶದಲ್ಲಿವೆ. ತಮ್ಮ ವೇದಿಕೆಯಿಂದ ಮುಂದಿನ ವರ್ಷ ಸುಮಾರು 10 ಸಾವಿರ ಶಾಲೆಗಳ 35 ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡುವ ಯೋಜನೆ ಇದೆ ಎಂದು ಹೇಳಿದರು.

'ವೆಂಟನಾ ವೆಂಚರ್ಸ್‌'ನ ಸ್ಥಾಪಕ ಪಾಲುದಾರರಾದ ಶೈಲಜಾ ರಾವ್, ಬೆಂಗಳೂರಿನಂತಹ ಮಹಾನಗರಗಳು ಮಾತ್ರವಲ್ಲದೆ ಸಣ್ಣ ಪಟ್ಟಣಗಳಲ್ಲೂ ಆನಿಮೇಷನ್-ಎಕ್ಸ್ ಆರ್ ಪ್ರತಿಭೆಗಳಿದ್ದಾರೆ. ಉಡುಪಿಯಲ್ಲಿ ನೆಲೆಯಾಗಿರುವ ತಮ್ಮ ಸಂಸ್ಥೆ ಇಂತಹ ಪ್ರತಿಭೆಗಳಿಗೆ ಅವಕಾಶ ಒದಗಿಸಲಿದೆ. ಅಲ್ಲದೆ ಈ ವಲಯದ ಉದ್ಯಮಗಳಿಗೆ ಆರಂಭಿಕ ಬಂಡವಾಳ ಒದಗಿಸುವುದು, ಮಾರುಕಟ್ಟೆ ವಿಸ್ತರಣೆ ನೆರವು ನೀಡಲಿದೆ ಎಂದು ತಿಳಿಸಿದರು.

ಗೇಮಿಂಗ್ ಉದ್ಯಮಕ್ಕೆ ಭಾಷೆಯ ಮಿತಿ ಇಲ್ಲವಾದ್ದರಿಂದ ಇದು ಸಿನಿಮಾಕ್ಕಿಂತಲೂ ಹೆಚ್ಚಿನ ವ್ಯಾಪ್ತಿ ಹೊಂದಿದೆ. ಮುಂದಿನ ದಶಕದಲ್ಲಿ ಈ ಉದ್ಯಮದ ಸ್ವರೂಪ ಕಲ್ಪನಾತೀತವಾಗಿ ಬದಲಾಗಲಿದೆ ಎಂದು ಮೊಬೈಲ್ ಪ್ರೀಮಿಯರ್ ಲೀಗ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾಯಿ ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಇ-ಗೇಮಿಂಗ್ ಫೌಂಡೇಷನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುರಾಗ ಸಕ್ಸೇನಾ ಮಾತನಾಡಿ, ಭಾರತದಂತಹ ಗ್ರಾಮೀಣ ಹಾಗೂ ಕೃಷಿ ಪ್ರಧಾನ ದೇಶ ಈಗ ಗೇಮಿಂಗ್ ಮತ್ತು ವಿಷುವಲ್ ಎಫೆಕ್ಟ್​​​ನಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ. ಈ ವಲಯವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇತರ ರಾಷ್ಟ್ರಗಳ ಪ್ರತಿಭೆಗಳನ್ನು ಭಾರತಕ್ಕೆ ಆಕರ್ಷಿಸಿ ಆ ಮೂಲಕ ನಮ್ಮ ತಂತ್ರಜ್ಞಾನವನ್ನು ಹಲವು ಆಯಾಮಗಳಲ್ಲಿ ಅಭಿವೃದ್ಧಿಪಡಿಸುವುದು ಅತ್ಯಗತ್ಯ ಎಂದರು.

'ಎಐಜಿಎಫ್' ಸಂಸ್ಥೆಯ ಧ್ರುವ ಗರ್ಗ್, ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಅಭಿಯಾನದಿಂದಾಗಿ ಗೇಮಿಂಗ್ ಮತ್ತು ಎಕ್ಸ್ ಆರ್ ವಲಯಕ್ಕೆ ಸಾಕಷ್ಟು ಉತ್ತೇಜನ ದೊರಕಿದೆ. ನವೀನ ತಂತ್ರಜ್ಞಾನಗಳಿಂದ ಮುಂದಿನ 5 ವರ್ಷಗಳಲ್ಲಿ ಈ ಉದ್ಯಮ ಶೇ. 25ಕ್ಕಿಂತ ಹೆಚ್ಚಿನ ಅಭಿವೃದ್ಧಿ ಸಾಧಿಸಲಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಬೆಂಗಳೂರು ಟೆಕ್ ಸಮ್ಮಿಟ್: ಇನ್ಫೋಸಿಸ್, ಇಂಟೆಲ್ ಪಾಲಾದ ಕರ್ನಾಟಕ ಐಟಿ ರತ್ನ ಪ್ರಶಸ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.