ETV Bharat / state

ವಿಮಾನ ನಿರ್ಮಾಣದ ಅಗತ್ಯಗಳ ಪೂರೈಸುವ ಪ್ರಮುಖ ತಾಣ ಬೆಂಗಳೂರು: ಸಿಎಂ ಬೊಮ್ಮಾಯಿ - ಬೆಂಗಳೂರು ದೇಶದಲ್ಲೇ ಹೆಚ್ಚು ಅಭಿವೃದ್ಧಿ ಹೊಂದಿರುವ ನಗರ

ಕರ್ನಾಟಕವು ನಿರಂತರವಾಗಿ ತಾಂತ್ರಿಕವಾಗಿ ಬೆಳೆಯುತ್ತಿರುವ ರಾಜ್ಯವಾಗಿದ್ದು, ಇಲ್ಲಿ 400 ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಿವೆ. ಮುಂದಿನ ದಿನಗಳಲ್ಲಿ ದೇಶದಲ್ಲೇ ಹೆಚ್ಚು ಅಭಿವೃದ್ಧಿ ಹೊಂದಿರುವ ನಗರವಾಗಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

bengaluru-is-a-major-hub-for-aircraft-manufacturing-needs-says-cm-bommai
ವಿಮಾನ ನಿರ್ಮಾಣದ ಅಗತ್ಯಗಳ ಪೂರೈಸುವ ಪ್ರಮುಖ ತಾಣ ಬೆಂಗಳೂರು: ಸಿಎಂ ಬೊಮ್ಮಾಯಿ
author img

By

Published : Jul 8, 2022, 7:31 PM IST

ದೇವನಹಳ್ಳಿ: ಸಾಧ್ಯತೆಗಳ ನಗರವಾಗಿರುವ ಬೆಂಗಳೂರು ದೇಶದಲ್ಲೇ ವಿಮಾನ ನಿರ್ಮಾಣಕ್ಕೆ ಬೇಕಾಗುವ ಅಗತ್ಯಗಳನ್ನು ಪೂರೈಸುವ ಪ್ರಮುಖ ತಾಣವಾಗಿದೆ. ಅತಿ ಶೀಘ್ರದಲ್ಲಿಯೇ ಪೂರ್ಣ ಪ್ರಮಾಣದ ವಿಮಾನ ನಿರ್ಮಾಣ ಮಾಡುವ ಕಾರ್ಯಕ್ಕೂ ಸಹ ಬೆಂಗಳೂರು ಸಾಕ್ಷಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ದೇವನಹಳ್ಳಿ ತಾಲೂಕಿನ ಕೆಐಎಡಿಬಿ ಪ್ರದೇಶದಲ್ಲಿ ಸಫ್ರಾನ್ ಗ್ರೂಪ್ ಹಾಗೂ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ವತಿಯಿಂದ ಆಯೋಜಿಸಿರುವ ಸಫ್ರಾನ್ ಹಾಲ್ ಏರ್​ಕ್ರಾಫ್ಟ್​ ಇಂಜಿನ್‍ಗಳ ಸೌಲಭ್ಯಗಳ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಹೆಚ್​ಎಎಲ್, ಇಸ್ರೋ, ಎನ್ಎಎಲ್, ಹೆಚ್ಎಂಟಿ, ಬಿಹೆಚ್ಇಎಲ್​ನಂತಹ ಮತ್ತಿತರ ಸಂಸ್ಥೆಗಳು ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದಲ್ಲಿ ತಾಂತ್ರಿಕತೆ ತಂದಂತಹ ಸಂಸ್ಥೆಗಳಾಗಿವೆ ಎಂದರು.

ವಿಮಾನ ನಿರ್ಮಾಣದ ಅಗತ್ಯಗಳ ಪೂರೈಸುವ ಪ್ರಮುಖ ತಾಣ ಬೆಂಗಳೂರು: ಸಿಎಂ ಬೊಮ್ಮಾಯಿ

ಮನುಷ್ಯನ ಜೀವನಕ್ಕೂ ತಾಂತ್ರಿಕತೆ ಅಗತ್ಯವಾಗಿದ್ದು, ತಾಂತ್ರಿಕತೆ ಎಂಬುದು ಮನುಷ್ಯನ ಜೀವನವನ್ನು ಆಸಕ್ತಿಕರ ಹಾಗೂ ಸಾಹಸಮಯವಾಗಿಸುವ ಸಾಧನವಾಗಿದೆ. ದೇಶದ ಬೆಳವಣಿಗೆಯಲ್ಲಿ ತಾಂತ್ರಿಕತೆ ಎಂಬುದು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಏರೋಸ್ಪೇಸ್ ತಂತ್ರಜ್ಞಾನ ಎಂಬುದು ವಿಭಿನ್ನವಾದ ತಾಂತ್ರಿಕತೆ ಹೊಂದಿದೆ. ರೈಟ್ ಸಹೋದರರು ಮೊದಲ ಬಾರಿಗೆ ವಿಮಾನ ಕಂಡುಹಿಡಿದ ಕುರಿತು ತಿಳಿಸಿದರಲ್ಲದೇ, ಮೊದಲ ಹಾಗೂ ಎರಡನೇ ಮಹಾಯುದ್ಧದ ನಂತರ ವೈಮಾನಿಕ ಕ್ಷೇತ್ರದ ಚಿತ್ರಣ ಬದಲಾಯಿತು ಎಂದು ಹೇಳಿದರು.

ರಕ್ಷಣಾ ಕ್ಷೇತ್ರ ತಂತ್ರಜ್ಞಾನದ ಬಲ: ರಕ್ಷಣಾ ವಿಭಾಗದ ಅಗತ್ಯತೆಗಳನ್ನು ಪೂರೈಸಲು ತಂತ್ರಜ್ಞಾನ ಎಂಬುದು ವೇಗ ನೀಡಿದ್ದು, ಇದೊಂದು ಹೊಸ ಬೆಳವಣಿಗೆಯಾಗಿದೆ. ಹೆಚ್ಎಎಲ್ ಸಂಸ್ಥೆಯು ಭವಿಷ್ಯದ ತಾಂತ್ರಿಕ ತಂತ್ರಜ್ಞರನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಕರ್ನಾಟಕದಲ್ಲಿ ಸೆಮಿ ಕಂಡಕ್ಟರ್‌ಗಳನ್ನು ಉತ್ಪಾದಿಸಲು ಟವರ್ ಗ್ರೂಪ್ ಆಫ್ ಕಂಪನಿ ಮತ್ತು ರೆಸಿಲಿಯನ್ ಕಂಪನಿಯೊಂದಿಗೆ ಸಹಿ ಮಾಡಲಾಗಿದ್ದು, ದೇಶದಲ್ಲೇ ಸೆಮಿ ಕಂಡಕ್ಟರ್‌ಗಳನ್ನು ಉತ್ಪಾದಿಸಲು ಸಹಿ ಮಾಡಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ಈ ನಿರ್ಧಾರದ ಹಿಂದಿರುವ ಶಕ್ತಿಯೇ ಹೆಚ್ಎಎಲ್ ಮತ್ತು ಬಿಇಎಲ್ ಎಂದು ಸಿಎಂ ತಿಳಿಸಿದರು.

ಕರ್ನಾಟಕವು ನಿರಂತರವಾಗಿ ತಾಂತ್ರಿಕವಾಗಿ ಬೆಳೆಯುತ್ತಿರುವ ರಾಜ್ಯವಾಗಿದ್ದು, ಇಲ್ಲಿ 400 ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಿವೆ. ಬೆಂಗಳೂರಿನ ಹವಾಮಾನ ಮತ್ತು ಇಲ್ಲಿನ ಜನರ ಕೌಶಲ್ಯಗಳನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ಬೆಂಗಳೂರು ದೇಶದಲ್ಲೇ ಹೆಚ್ಚು ಅಭಿವೃದ್ಧಿ ಹೊಂದಿರುವ ನಗರವಾಗಲಿದೆ. ಆರ್ಥಿಕತೆ ಎಂಬುದು ಕೇವಲ ಹಣವಲ್ಲ. ಜನರ ಚಟುವಟಿಕೆಗಳನ್ನು ಸೂಚಿಸುತ್ತದೆ ಎಂದೂ ಅಭಿಪ್ರಾಯಪಟ್ಟರು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್.ಆರ್.ನಿರಾಣಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಶಂಕರ್ ಮುನೇನಕೊಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್​ನ ಸಿಇಒ ಮಾಧವನ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ: 10 ಲಕ್ಷ ಮಕ್ಕಳು ಶಾಲೆ ಬಿಟ್ಟು ಭಿಕ್ಷಾಟನೆ: ಸಚಿವ ನಾಗೇಶ್‌ ರಾಜೀನಾಮೆಗೆ ಭಾಸ್ಕರ್‌ ರಾವ್‌ ಆಗ್ರಹ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.