ETV Bharat / state

ಥಲಸ್ಸೆಮಿಯಾದಿಂದ ಬಳಲುತ್ತಿರುವ ಪುಟ್ಟ ಬಾಲಕಿಯ ವೈದ್ಯೆಯಾಗುವ ಆಸೆ ಈಡೇರಿಸಿದ ಆಸ್ಪತ್ರೆ - ಈಟಿವಿ ಭಾರತ ಕನ್ನಡ

ಥಲಸ್ಸೆಮಿಯಾ ಬಳಲುತ್ತಿರುವ 9 ವರ್ಷದ ಪುಟ್ಟ ಬಾಲಕಿಯ ವೈದ್ಯೆಯಾಗುವ ಆಸೆಯನ್ನು ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಯ ವೈದ್ಯರು ನೆರವೇರಿಸಿದರು.

the-hospital-fulfilled-the-wish-of-a-little-girl
ಥಲಸ್ಸೆಮಿಯಾದಿಂದ ಬಳಲುತ್ತಿರುವ ಪುಟ್ಟ ಬಾಲಕಿಯ ವೈದ್ಯೆಯಾಗುವ ಆಸೆ ಈಡೇರಿಸಿದ ಆಸ್ಪತ್ರೆ
author img

By

Published : Oct 19, 2022, 9:30 PM IST

Updated : Oct 19, 2022, 9:47 PM IST

ಬೆಂಗಳೂರು: ಥಲಸ್ಸೆಮಿಯಾ ರೋಗದಿಂದ ಬಳಲುತ್ತಿರುವ 9 ವರ್ಷದ ಬಾಲಕಿಯ ವೈದ್ಯೆಯಾಗುವ ಆಸೆಯನ್ನು ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಯ ವೈದ್ಯರು ಒಂದು ದಿನದ ಮಟ್ಟಿಗೆ ಪೂರೈಸಿದ್ದಾರೆ.

ಕೇರಳದ ಇರುಟ್ಟಿ ಮೂಲದ ಫಾತಿಮಾ ಎ.ಕೆ ಥಲಸ್ಸೆಮಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟ್ ಕಸಿಯ ತಪಾಸಣೆಗಾಗಿ ನಗರಕ್ಕೆ ಪೋಷಕರೊಂದಿಗೆ ಬಂದಿದ್ದ ಫಾತಿಮಾ, ತಾನು ದೊಡ್ಡವಳಾದ ಮೇಲೆ ವೈದ್ಯೆಯಾಗುವ ಬಯಕೆಯನ್ನು ವೈದ್ಯರಲ್ಲಿ ವ್ಯಕ್ತಪಡಿಸಿದ್ದಳಂತೆ. ಈ ಬಗ್ಗೆ ಮೇಕ್-ಎ-ವಿಶ್ ಫೌಂಡೇಶನ್ ಸಹಯೋಗದೊಂದಿಗೆ ನಾರಾಯಣ ಹೆಲ್ತ್ ಸಿಟಿ ವೈದ್ಯರು ಆಕೆ ಒಂದು ದಿನ ವೈದ್ಯೆಯಾಗಿ ಕಾರ್ಯ ನಿರ್ವಹಿಸುವ ಅವಕಾಶ ನೀಡಿದ್ದಾರೆ. ಆಕೆೆಗೆ ಸ್ಟೆಥಸ್ಕೋಪ್ ಹೇಗೆ ಬಳಸಬೇಕು ಮತ್ತು ರೋಗಿಗಳನ್ನು ಪರೀಕ್ಷಿಸುವುದು ಹೇಗೆಂಬ ಬಗ್ಗೆ ಸಂಕ್ಷಿಪ್ತವಾಗಿ ಕಲಿಸಲಾಯಿತು. ಒಪಿಡಿಯಲ್ಲಿ ವೈದ್ಯರಿಗೆ ಸಹಾಯ ಮಾಡಿದ ಬಳಿಕ ಒಳರೋಗಿಗಳನ್ನು ಭೇಟಿ ಮಾಡಲು ವೈದ್ಯರ ಜತೆಗೆ ಆಕೆಗೂ ವಿಶೇಷ ಅವಕಾಶ ನೀಡಲಾಯಿತು.

ಬಾಲಕಿ ಮಾತನಾಡಿ, 'ಇದು ನನ್ನ ಜೀವನದ ಅತ್ಯುತ್ತಮ ದಿನ. ಇದರಿಂದ ನನಗೆ ತುಂಬಾ ಸಂತಸವಾಗಿದೆ. ನಾನು ಶೀಘ್ರವಾಗಿ ಚೇತರಿಸಿಕೊಳ್ಳುವುದನ್ನು ಎದುರು ನೋಡುತ್ತಿದ್ದೇನೆ' ಎಂದಳು.

ಕ್ಲಿನಿಕಲ್ ಲೀಡ್ ಡಾ. ಸುನಿಲ್ ಭಟ್ ಪ್ರತಿಕ್ರಿಯಿಸಿ,'ಥಲಸ್ಸೆಮಿಯಾ, ಕ್ಯಾನ್ಸರ್ ಕುರಿತು ತಪ್ಪು ಕಲ್ಪನೆಗಳೇ ಜನರಲ್ಲಿ ಹತಾಶೆಗೆ ಕಾರಣ. ವಾಸ್ತವವಾಗಿ ರೋಗಿಯ ಸಕಾರಾತ್ಮಕ ಬಯಕೆಗಳನ್ನು ಈಡೇರಿಸಿದಾಗ ಚಿಕಿತ್ಸೆ ಸಾಕಷ್ಟು ಫಲಕಾರಿಯಾಗುತ್ತದೆ' ಎಂದು ಹೇಳಿದರು.

ಇದನ್ನೂ ಓದಿ: ಮೈಸೂರಿನ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಅಗತ್ಯ: ಯದುವೀರ್

Last Updated : Oct 19, 2022, 9:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.