ETV Bharat / state

ಸಹಕಾರ ಸಂಘಗಳ ಅಧ್ಯಕ್ಷರ ವಿರುದ್ಧ ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆ ಮಾಡಿದರೆ ಕಾರಣ ನೀಡುವ ಅಗತ್ಯವಿಲ್ಲ: ಹೈಕೋರ್ಟ್​ - ಸೊಸೈಟಿಯ ಅಧ್ಯಕ್ಷ ನಾಸೀರುದ್ದೀನ್ ಭಗವಾನ್

ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ವಿರುದ್ಧ ಶೇಕಡಾ 33ರಷ್ಟು ಸದಸ್ಯರು ತಮ್ಮ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದರೆ ಅದಕ್ಕೆ ಕಾರಣ ನೀಡುವ ಅಗತ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

high court
ಹೈಕೋರ್ಟ್​
author img

By

Published : May 16, 2023, 6:46 AM IST

ಬೆಂಗಳೂರು: ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ವಿರುದ್ಧ ಮೂರನೇ ಒಂದರಷ್ಟು ಅಂದರೆ ಶೇ.33 ರಷ್ಟು ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆ ಮಾಡಿದರೆ ಆಗ ಕಾರಣ ನೀಡುವ ಅಗತ್ಯವಿಲ್ಲ. ಆದರೆ, ನಿಯಮದಂತೆ 15 ದಿನ ಮುಂಚಿತವಾಗಿಯೇ ನೋಟಿಸ್ ನೀಡಿದರೆ ಸಾಕು ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಬೆಳಗಾವಿಯ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಸೊಸೈಟಿಯ ಅಧ್ಯಕ್ಷ ನಾಸೀರುದ್ದೀನ್ ಭಗವಾನ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಾಲಯ ಎಂ.ಐ.ಅರುಣ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ ಏನು ?: ಶ್ರೀ ಮಲಪ್ರಭ ಸಹಕಾರಿ ಸಕ್ಕರೆ ಕಾರ್ಖಾನೆ ಸೊಸೈಟಿಯ ಅಧ್ಯಕ್ಷ ನಾಸೀರುದ್ದೀನ್ ಭಗವಾನ್ ವಿರುದ್ಧ 2023 ರ ಮಾರ್ಚ್‌ನಲ್ಲಿ 9 ಸದಸ್ಯರು ಅವಿಶ್ವಾಸ ಮಂಡನೆ ನಿರ್ಣಯ ನೋಟಿಸ್ ಕಳುಹಿಸಿದ್ದರು. ಅದನ್ನು ಅವರು ಸಹಕಾರ ಸಂಘಗಳ ರಿಜಿಸ್ಟ್ರಾರ್​ ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಲು ಅಧಿಕಾರಿಯನ್ನು ನಿಯೋಜಿಸಲು 7 ದಿನಕ್ಕೂ ಅಧಿಕ ಕಾಲ ತೆಗೆದುಕೊಂಡಿದ್ದಾರೆ. ತಮಗೆ ನೋಟಿಸ್ ಪ್ರತಿಯನ್ನು ನೀಡಿಲ್ಲ ಹಾಗೂ ಕಾರಣವನ್ನೂ ಸಹ ಉಲ್ಲೇಖಿಸಿಲ್ಲ ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ಇದನ್ನೂ ಓದಿ: ಸಮನ್ಸ್ ಜಾರಿ ಮಾಡದೆ ವಿಚ್ಛೇದನ ಮಂಜೂರು : ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು

ಈ ಅರ್ಜಿ ವಿಚಾರಣೆ ನಡೆಸಿದ ಎಂ.ಐ.ಅರುಣ್ ಅವರಿದ್ದ ನ್ಯಾಯ ಪೀಠವು, ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ವಿರುದ್ಧ ಶೇಕಡ 33 ರಷ್ಟು ಸದಸ್ಯರು ವಿಶ್ವಾಸ ನಿರ್ಣಯ ಮಂಡನೆ ಮಾಡಿದರೆ ಆಗ ಕಾರಣ ನೀಡುವ ಅಗತ್ಯವಿಲ್ಲ. ಆದರೆ ನಿಯಮದಂತೆ 15 ದಿನ ಮುಂಚಿತವಾಗಿಯೇ ನೋಟಿಸ್ ನೀಡಿದರೆ ಸಾಕು ಎಂದು ತಿಳಿಸಿದೆ.

ಜೊತೆಗೆ, ಸಹಕಾರ ಸಂಘದ ಅಗತ್ಯ ಸದಸ್ಯರು ಮಂಡಿಸಿರುವ ಅವಿಶ್ವಾಸ ನಿರ್ಣಯದ ಕುರಿತು ಕೋ ಆಪರೇಟಿವ್ ಸೋಸೈಟಿಗಳ ರಿಜಿಸ್ಟ್ರಾರ್​ ​ ತೃಪ್ತರಾದರೆ ಸಾಕು, ಜೊತೆಗೆ ಯಾರ ವಿರುದ್ಧ ಅವಿಶ್ವಾಸ ಮಂಡಿಸಲಾಗಿದೆಯೋ ಅವರು ಸೇರಿದಂತೆ ಎಲ್ಲಾ ಸದಸ್ಯರಿಗೆ 15 ದಿನ ಮುಂಚಿತವಾಗಿಯೇ ನೋಟಿಸ್ ನೀಡಿ ನಿಯಮ ಪಾಲಿಸಬೇಕಾಗುತ್ತದೆ ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: ಗಾಂಧಿಬಜಾರ್ ರಸ್ತೆಯಲ್ಲಿ ಪಾದಚಾರಿ ಮಾರ್ಗ 40 ಅಡಿ ಅಗಲಕ್ಕೆ ವಿಸ್ತರಿಸುವ ಕಾರ್ಯಕ್ಕೆ ಹೈಕೋರ್ಟ್ ನಿರ್ಬಂಧ

ಅಲ್ಲದೆ, ನೋಟಿಸ್ ನೀಡಿದ ನಂತರ ಯಾರ ವಿರುದ್ಧ ಅವಿಶ್ವಾಸ ಮಂಡಿಸಲಾಗಿರುತ್ತದೆಯೋ ಅಂತಹವರು ತಾವು ಇಚ್ಚಿಸಿದ್ದರೆ ಇತರ ಪದಾಧಿಕಾರಿಗಳನ್ನು ಹಾಗೂ ಸದಸ್ಯರನ್ನು ಭೇಟಿ ಮಾಡಿ ನೋಟಿಸ್ ವಾಪಸ್ ಪಡೆಯಲು ಮನವೊಲಿಸಬಹುದು ಎಂದೂ ಪೀಠ ಹೇಳಿದೆ. ಈ ಪ್ರಕರಣದಲ್ಲಿ ಅರ್ಜಿದಾರರು ಅವಿಶ್ವಾಸ ಮಂಡಿಸಿದವರನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ, ಆದರೆ ಇತರೆ ನಿರ್ದೇಶಕರನ್ನು ಪ್ರತಿವಾದಿಗಳನ್ನಾಗಿ ಮಾಡಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: ಐಪಿಎಸ್ ಅಧಿಕಾರಿ ಗುಳೇದ್ ವಿರುದ್ಧದ ಲೈಂಗಿಕ ಕಿರುಕುಳ, ಅಕ್ರಮ ಹಣ ವರ್ಗಾವಣೆ ಆರೋಪ.. ಕೇಸ್​ ರದ್ದುಗೊಳಿಸಿದ ಹೈಕೋರ್ಟ್

ಇದನ್ನೂ ಓದಿ: ಹೆಚ್ಚುವರಿ ಪಡೆದಿದ್ದ ಶುಲ್ಕ ಹಿಂದಿರುಗಿಸುವಂತೆ ಮೆಡಿಕಲ್ ಕಾಲೇಜಿಗೆ ಹೈಕೋರ್ಟ್ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.