ETV Bharat / state

ನಕಲಿ ವೋಟರ್ ಐಡಿ ಪತ್ತೆ ಪ್ರಕರಣ ಸಿಬಿಐಗೆ ವಹಿಸಲು ಮನವಿ : ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರಿನ ಆರ್.ಆರ್.ನಗರ ಬಳಿಯ ಅಪಾರ್ಟ್​ಮೆಂಟ್​​​​ನಲ್ಲಿ ನಕಲಿ ವೋಟರ್ ಐಡಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನಾಶವಾಗುವ ಸಾಧ್ಯತೆಗಳಿವೆ. ಇದರಿಂದ ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ವಹಿಸಬೇಕು ಎಂದು ದೂರುದಾರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್​ನಲ್ಲಿ ನಡೆಯಿತು.

ಹೈಕೋರ್ಟ್​, ಬೆಂಗಳೂರು
author img

By

Published : Jun 25, 2019, 2:29 AM IST

ಬೆಂಗಳೂರು : ಆರ್.ಆರ್. ನಗರ ಬಳಿಯ ಅಪಾರ್ಟ್​ಮೆಂಟ್​​​​ನಲ್ಲಿ ನಕಲಿ ವೋಟರ್ ಐಡಿ ಪತ್ತೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು, ಇಲ್ಲವಾದರೆ ಸಾಕ್ಷಿ ನಾಶವಾಗುವ ಸಾಧ್ಯತೆ ಇದೆ ಎಂದು ದೂರುದಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್​ ಇದೇ 26ಕ್ಕೆ ಮುಂದೂಡಿದೆ.

ದೂರುದಾರ ರಾಕೇಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್​​ನ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿದೆ. ಅರ್ಜಿದಾರರ ಪರ ವಾದಿಸಿದ ವಕೀಲರು ಜಾಲಹಳ್ಳಿ ಪೊಲೀಸರು ತನಿಖೆಯನ್ನು ಸರಿಯಾಗಿ ನಡೆಸಿಲ್ಲ. ವೋಟರ್ ಐಡಿ ಪತ್ತೆಯಾದ ಅಪಾರ್ಟ್​ಮೆಂಟ್​​ನಲ್ಲಿ ಸಿಸಿ ಕ್ಯಾಮರಾ ಇತ್ತು. ಆದರೆ ಅಲ್ಲಿನ ಸಾಕ್ಷ್ಯಗಳನ್ನು ಸರಿಯಾಗಿ ಗಮನಿಸಿಲ್ಲ ಎಂದು ವಾದಿಸಿದರು.

ಇದು ಗಂಭೀರ ಸ್ವರೂಪದ ಪ್ರಕರಣವಾಗಿದ್ದು, ಇದರ ತನಿಖೆಯನ್ನು ಸಿಬಿಐ ನೀಡದೆ ಹೋದರೆ ಸಾಕ್ಷಿಗಳು ನಾಶವಾಗುತ್ತವೆ ಎಂದು ವಾದ ಮಂಡಿಸಲಾಗಿದೆ. ಅಲ್ಲದೆ ದೂರುದಾರರಿಗೆ ಬೆದರಿಕೆ ಇರುವ ಹಿನ್ನೆಲೆ‌ ಭದ್ರತೆಯನ್ನು ಮುಂದುವರೆಸುವಂತೆ ಬೇಡಿಕೆ ಇಡಲಾಯಿತು. ಈ ಬೇಡಿಕೆಯನ್ನು ಹೈಕೋರ್ಟ್​ ನಿರಾಕರಿಸಿದ್ದು, ಅರ್ಜಿಯ ವಿಚಾರಣೆಯನ್ನು ಇದೇ 26ಕ್ಕೆ ಮುಂದೂಡಿದೆ

ಏನಿದು ಪ್ರಕರಣ:

ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ‌‌ ಫ್ಲ್ಯಾಟ್​​ವೊಂದರಲ್ಲಿ ಮತದಾರರ ನಕಲಿ ಗುರುತಿನ ಚೀಟಿಗಳು ಪತ್ತೆಯಾಗಿದ್ದವು. ಈ ಸಂಬಂಧ ರಾಕೇಶ್ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ದೂರುದಾರ ರಾಕೇಶ್‌ಗೆ ಜೀವ ಬೆದರಿಕೆ ಇರುವ ಹಿನ್ನೆಲೆ ಪೊಲೀಸ್ ಭದ್ರತೆ ಕೋರಿ ನ್ಯಾಯಾಲಯಕ್ಕೆ ಮನವಿ ಮಾಡಿದಾಗ ರಾಕೇಶ್‌ಗೆ ಪೊಲೀಸ್ ಭದ್ರತೆ ನೀಡಲು ಹೈಕೋರ್ಟ್ ಆದೇಶಿಸಿತ್ತು. ಸದ್ಯ ಯಾವುದೇ ಭಯದ ವಾತಾವರಣ ಇಲ್ಲದೇ ಇರುವ ಕಾರಣ ಭದ್ರತೆಯನ್ನು ಮುಂದುವರೆಸಲು ನ್ಯಾಯಪೀಠವು ನಿರಾಕರಿಸಿದೆ.

Intro:ನಕಲಿ ಓಟರ್ ಐಡಿ ಪತ್ತೆ ಪ್ರಕರಣ
ಸಿಬಿಐಗೆ ವಹಿಸದಿದ್ದರೆ ಸಾಕ್ಷಿ ನಾಶದ ಸಾಧ್ಯತೆ : ಹೈಕೋರ್ಟ್ ನಲ್ಲಿ ವಾದ

ಬೆಂಗಳೂರು

ಆರ್.ಆರ್.ನಗರ ಬಳಿಯ ಅಪಾರ್ಟ್ಮೆಂಟ್ ನಲ್ಲಿ ನಕಲಿ ಓಟರ್ ಐಡಿ ಪತ್ತೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಇಲ್ಲಾವಾದರೆ ಸಾಕ್ಷಿ ನಾಶವಾಗುವ ಸಾಧ್ಯತೆ ಇದೆ ಎಂದು ಅರ್ಜಿದಾರರು ಹೈಕೋರ್ಟಲ್ಲಿ ಬಲವಾಗಿ ವಾದಿಸಿದ್ದಾರೆ.

ದೂರುದಾರ ರಾಕೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲರು ಜಾಲಹಳ್ಳಿ ಪೊಲೀಸರು ತನಿಖೆಯನ್ನು ಸರಿಯಾಗಿ ನಡೆಸಿಲ್ಲ. ಓಟರ್ ಐಡಿ ಪತ್ತೆಯಾದ ಅಪಾರ್ಟ್ಮೆಂಟ್ ನಲ್ಲಿ ಸಿಸಿ ಕ್ಯಾಮರಾ ಇತ್ತು ಅಲ್ಲಿಯ ಸಾಕ್ಷಗಳನ್ನು ಸರಿಯಾಗಿ ಗಮನಿಸಿಲ್ಲ ಎಂದು ವಾದಿಸಿದರು
ಗಂಭೀರ ಸ್ವ ರೂಪವಾದ ಕಾರಣ ಈ ಪ್ರಕರಣದ ತನಿಖೆಯನ್ನು ಸಿಬಿಐ ತನಿಖೆಗೆ ನೀಡದೆ ಇದ್ದರೆ ಸಾಕ್ಷಿಗಳು ನಾಶವಾಗುತ್ತವೆ. ಹಾಗೆ ದೂರು ದಾರರಿಗೆ ಬೆದರಿಕೆ ಇರುವ ಹಿನ್ನೆಲೆ‌ ಮತ್ತೆ ಭದ್ರತೆ ಮುಂದುವರೆಸುವಂತೆ ಕೇಳಿದಾಗ ಭದ್ರತೆ ಮುಂದುವರೆಸಲು ಹೈಕೋರ್ಟ್ ನಿರಾಕರಿಸಿ ಅರ್ಜಿಯನ್ನ ಇದೇ 26ಕ್ಕೆ ಮುಂದೂಡಿದೆ

ಏನಿದು ಪ್ರಕರಣ

ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ‌‌ಫ್ಲ್ಯಾಟ್ ಒಂದರಲ್ಲಿ ಮತದಾರರ ನಕಲಿ ಗುರುತಿನ ಚೀಟಿಗಳು ಪತ್ತೆಯಾಗಿದ್ದವು. ಈ ಸಂಬಂಧ ರಾಕೇಶ್ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ರು. ನಂತರ ದೂರುದಾರ ರಾಕೇಶ್‌ಗೆ ಜೀವ ಬೆದರಿಕೆ ಇರುವ ಹಿನ್ನೆಲೆ ಪೊಲೀಸ್ ಭದ್ರತೆ ಕೋರಿ ನ್ಯಾಯಾಲಯಕ್ಕೆ ಮನವಿ ಮಾಡಿದಾಗ ರಾಕೇಶ್‌ಗೆ ಪೊಲೀಸ್ ಭದ್ರತೆ ನೀಡಲು ಹೈಕೋರ್ಟ್ ಆದೇಶಿಸಿತ್ತು. ಸದ್ಯ ಯಾವುದೇ ಭಯದ ವಾತಾವರಣ ಇಲ್ಲದೇ ಇರುವ ಕಾರಣ ಭದ್ರತೆಯನ್ನು ಮುಂದುವರಿಸಲು ನ್ಯಾಯಪೀಠವು ನಿರಾಕರಿಸಿದೆ.Body:KN_BNG_11_24_HIGCOURT_BHAVYA_7204498Conclusion:KN_BNG_11_24_HIGCOURT_BHAVYA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.