ETV Bharat / state

ಲಾಕ್​ಡೌನ್​ ಸಡಿಲಿಕೆ ಬೆನ್ನಲ್ಲೇ ದರೋಡೆಗೆ ಸಂಚು: ಖದೀಮರ ಹೆಡೆಮುರಿ ಕಟ್ಟಿದ ಸಿಸಿಬಿ ಪೊಲೀಸ್​ - 4 arrest who are sketch for robbery

ನಗರದ ಹೆಚ್.ಎ.ಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸ್ಮಶಾನ ರಸ್ತೆಯ ಬಳಿ ಕತ್ತಲೆಯಲ್ಲಿ ಕುಳಿತು ಸಾರ್ವಜನಿಕರ‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಅವರಿಂದ ನಗದು, ಚಿನ್ನ ಆಭರಣಗಳನ್ನು ದೋಚಲು ಸಂಚು ಮಾಡಿದ್ದರು. ಈ ಪುಂಡರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ದರೋಡೆಗೆ ಯತ್ನಿಸಿದ ಕಳ್ಳರ ಬಂಧನ
ರೌಡಿಗಳ ಬಂಧನ
author img

By

Published : May 19, 2020, 9:15 AM IST

ಬೆಂಗಳೂರು: ಲಾಕ್​ಡೌನ್​ ಸಡಿಲಿಕೆಯಾಗ್ತಿದ್ದಂತೆ ನಗರದಲ್ಲಿ ಪುಡಿ ರೌಡಿಗಳು ಕ್ರೀಯಾಶೀಲರಾಗಿದ್ದಾರೆ. ಸಿಸಿಬಿ ಪೊಲೀಸರು ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂತೋಷ್, ಶಶಿಕುಮಾರ್, ಭಾಸ್ಕರ್, ಸ್ಪೀಪನ್, ಆರ್. ಕುಮಾರ್ ಬಂಧಿತರು. ಈ ಆರೋಪಿಗಳು ನಗರದ ಹೆಚ್.ಎ.ಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸ್ಮಶಾನ ರಸ್ತೆಯ ಬಳಿ ಕತ್ತಲೆಯಲ್ಲಿ ಕುಳಿತು ಸಾರ್ವಜನಿಕರ‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಅವರಿಂದ ನಗದು, ಚಿನ್ನ ಆಭರಣಗಳನ್ನು ದೋಚಲು ಸಂಚು ರೂಪಿಸಿದ್ದರು.

ಈ ಮಾಹಿತಿ ಸಿಸಿಬಿ ಅಧಿಕಾರಿಗಳಿಗೆ ತಿಳಿದು ದಾಳಿ ನಡೆಸಿ‌ ಖದೀಮರನ್ನು ಹೆಡೆಮುರಿ ಕಟ್ಟಿದ್ದಾರೆ. ಇನ್ನು ಬಂಧಿತ ಆರೋಪಿಗಳ ವಿರುದ್ಧ ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ದರೋಡೆಯಂತಹ ಪ್ರಕರಣ ಈಗಾಗ್ಲೇ ದಾಖಲಾಗಿ ಜೈಲೂಟ ಅನುಭವಿಸಿ ಬಂದಿದ್ದಾರೆ. ಸದ್ಯ ಆರೋಪಿಗಳಿಂದ ಒಂದು ಲಾಂಗ್, ಒಂದು ಮಚ್ಚು, ಒಂದು ‌ಮರದ ದೊಣ್ಣೆ, ಎರಡು ಖಾರದ ಪುಡಿ ಪ್ಯಾಕೇಟ್ಅನ್ನು​ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೆ.ಚ್ ಎಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.