ETV Bharat / state

ನೋ ಎನ್​ಆರ್​ಸಿ.. ನೋ ಸಿಎಎ.. ಬೆಂಗಳೂರಿನಲ್ಲೂ ಹೊತ್ತಿಕೊಂಡ ''ಫ್ರೀ ಕಾಶ್ಮೀರ'' ಕಿಚ್ಚು..!

author img

By

Published : Jan 14, 2020, 1:34 PM IST

ದೇಶದೆಲ್ಲೆಡೆ ಪೌರತ್ವ ಕಾಯ್ದೆ ಕಿಚ್ಚು ಹೆಚ್ಚಾಗಿ ಪ್ರತಿಭಟನೆ ನಡೆದುಹೋಗಿತ್ತು. ಆದರೆ ಇದೀಗ ಬೆಂಗಳೂರಲ್ಲಿ ಎನ್ಆರ್​ಸಿ ಹಾಗೂ ಸಿಎಎ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇದಕ್ಕೆ ಚರ್ಚ್​​ ಸ್ಟ್ರೀಟ್​ ಸಾಕ್ಷಿಯಾಗಿದೆ.

free kashmir boards in bangalore
ಬೆಂಗಳೂರಿನಲ್ಲೂ ಹೊತ್ತಿಕೊಂಡ ''ಫ್ರೀ ಕಾಶ್ಮೀರ'' ಕಿಚ್ಚು

ಬೆಂಗಳೂರು: ನಗರದಲ್ಲಿ ಎನ್ಆರ್​ಸಿ ಹಾಗೂ ಸಿಎಎ ವಿರುದ್ಧ ಕಿಚ್ಚು ಮತ್ತೊಮ್ಮೆ ಹೊತ್ತಿಕೊಂಡಿದೆ. ಚರ್ಚ್​​ಸ್ಟ್ರೀಟ್​ನಲ್ಲಿ ರಾತ್ರೋ ರಾತ್ರಿ ಕಿಡಿಗೇಡಿಗಳು ಅಂಗಡಿಗಳ ಶಟರ್​ಗಳ ಮೇಲೆ ನೋ ಸಿಎಎ ಹಾಗೀ ನೋ ಎನ್​​​ಆರ್​ಸಿ ಎಂದು ಬರೆದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ''ಫ್ರೀ ಕಾಶ್ಮೀರ'' ಎಂಬ ಬರಹವನ್ನು ಬರೆದು ಅದರ ಮೇಲೆ ಮತ್ತಷ್ಟು ಘೋಷಣೆಗಳನ್ನು ಕಿಡಿಗೇಡಿಗಳು ಬರೆದಿದ್ದಾರೆ. ಈ ಮೂಲಕ ಮೈಸೂರಿನ ಕಿಚ್ಚು ಇಲ್ಲೂ ಕೂಡಾ ಹೊತ್ತಿಕೊಳ್ಳುವ ಅನುಮಾನಗಳು ಕಾಡುತ್ತಿವೆ.

ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಬಂದ ಕಬ್ಬನ್​ ಪಾರ್ಕ್​ ಠಾಣಾ ಪೊಲೀಸರು ಘಟನೆ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಆರೋಪಿಗಳ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈಗಾಗಲೇ ಸಿಸಿಟಿವಿಗಳನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Intro:Body:

bengaluru_free_kashmir_boards_painted and caa, nrc protest

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.