ETV Bharat / state

ಮಗುವಿಗೆ ಕಿವಿ ಚುಚ್ಚಿಸುವ ವಿಚಾರದಲ್ಲಾದ ಮನಸ್ತಾಪವೇ ಐವರ ಸಾವಿಗೆ ಕಾರಣವಾಯ್ತಾ? - ಸಿಂಚನಾ

ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಐವರ ಆತ್ಮಹತ್ಯೆ ಪ್ರಕರಣ ಸಂಬಂಧ, ಕುಟುಂಬದ ಹಿರಿಯ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾರೆ.

ಸಿಂಚನಾ
ಸಿಂಚನಾ
author img

By

Published : Sep 18, 2021, 10:41 AM IST

ಬೆಂಗಳೂರು: ಮಗುವಿಗೆ ಕಿವಿ ಚುಚ್ಚಿಸುವ ವಿಚಾರವಾಗಿ ಸಿಂಚನಾ ಹಾಗೂ ಪತಿ ನಡುವೆ ಮನಸ್ತಾಪ ಉಂಟಾಗಿತ್ತು. ಈ ಹಿನ್ನೆಲೆ ಅವರು ತವರು ಮನೆ ಸೇರಿದ್ದರು ಎಂದು ಕುಟುಂಬದ ಹಿರಿಯ, ಸಿಂಚನಾ ತಂದೆ ಹಲ್ಲೆಗೆರೆ ಶಂಕರ್ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

9 ತಿಂಗಳ ಮಗುವನ್ನು ಕೊಲೆ ಮಾಡಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದರು. 4 ದಿನಗಳ ಕಾಲ ಮೃತದೇಹಗಳ ಮಧ್ಯೆಯಿದ್ದ ಎರಡೂವರೆ ವರ್ಷದ ಮಗು ಪವಾಡದ ರೀತಿಯಲ್ಲಿ ಬದುಕುಳಿದಿದ್ದಾಳೆ.

ಈ ಸಂಬಂಧ ಕುಟುಂಬದ ಹಿರಿಯ ಶಂಕರ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. 31 ವರ್ಷದಿಂದ ಕುಟುಂಬಕ್ಕಾಗಿ ಶ್ರಮಪಟ್ಟಿದ್ದೇನೆ. ಮಕ್ಕಳಿಗೆ ವಿದ್ಯಾಭ್ಯಾಸ ಪಾಲನೆ, ಪೋಷಣೆ ಮಾಡಿದ್ದೇನೆ. ಹಿರಿಯ ಮಗಳು ಇಂಜಿನಿಯರಿಂಗ್, ಕಿರಿಯ ಮಗಳು ಬಿಕಾಂ ವ್ಯಾಸಂಗ ಮಾಡಿದ್ದು ಇಬ್ಬರಿಗೂ ಮದುವೆ ಮಾಡಿದ್ದೆ. ಮಗನಿಗೆ ಸಹ ಎಲ್ಲವನ್ನೂ ಕೊಟ್ಟಿದ್ದೇನೆ. ಪತ್ನಿ ಭಾರತಿ ಸಹ ನನ್ನೊಂದಿಗೆ ಕಷ್ಟಪಟ್ಟಿದ್ದಾಳೆ ಎಂದು ಶಂಕರ್‌ ಅಳಲು ತೋಡಿಕೊಂಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ದ್ವಂದ್ವ ಹೇಳಿಕೆ

ಶಂಕರ್​​ ಪೊಲೀಸರ ಮುಂದೆ ದ್ವಂದ್ವ ಹೇಳಿಕೆ ನೀಡಿದ್ದಾರೆ ಎನ್ನಲಾಗ್ತಿದೆ. ಮೊದಲಿಗೆ ಮಗುವಿಗೆ ಕಿವಿ ಚುಚ್ಚಿಸುವ ವಿಚಾರವಾಗಿ ಗಲಾಟೆ ನಡೆದಿತ್ತು ಎಂದಿದ್ದಾರೆ. ಬಳಿಕ, 10 ಲಕ್ಷ ರೂಪಾಯಿಯ ಚೀಟಿ ವಿಚಾರಕ್ಕೆ ಜಗಳವಾಗಿತ್ತು ಎಂದು ಹೇಳಿಕೆ ನೀಡಿದ್ದಾರೆ. ಸದ್ಯ ಶಂಕರ ಅವರ ಈ ಹೇಳಿಕೆ ಪೊಲೀಸರಿಗೆ ಗೊಂದಲವನ್ನುಂಟು ಮಾಡಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ವರದಿ ಬಂದ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ. ಈ ಮಧ್ಯೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ: 5 ದಿನದಿಂದ ಶವಗಳ ಮಧ್ಯೆಯೇ ಅನ್ನ-ನೀರಿಲ್ಲದೆ ಬದುಕಿದ ಕಂದಮ್ಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.