ಬೆಂಗಳೂರು: ಈ ಸ್ಟೋರಿ ಯಾವ ಕ್ರೈಂ ಥ್ರಿಲ್ಲರ್ ಸಿನಿಮಾದ ಕಥೆಗೂ ಕಡಿಮೆಯಿಲ್ಲ. ಅಪರಾಧ ಎಸಗಿ ಕಾರು, ಬೈಕ್, ಬಸ್ ಹಾಗೂ ರೈಲಿನಲ್ಲಿ ಪರಾರಿಯಾಗುವುದು ಸಾಮಾನ್ಯ. ಆದರೆ, ಕೊಲೆ ಯತ್ನ ಪ್ರಕರಣದ ಆರೋಪಿಯೊಬ್ಬ ಪರಾರಿಯಾಗಲು ತನ್ನ ಪ್ರೈವೇಟ್ ಜೆಟ್ ಬಳಸಿರುವುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.
ಪ್ರಕರಣದ ವಿವರ: ಜೂ. 9ರಂದು ವೈಷ್ಣವಿ ಬಿಲ್ಡರ್ಸ್ ಮುಖ್ಯಸ್ಥ ಗೋವಿಂದರಾಜು ಪುತ್ರ ದರ್ಶನ್ ಮೇಲೆ ಹಲ್ಲೆ ನಡೆಸಿದ್ದ ವೇದಾಂತ್ ದುಗಾರ್ ಎಂಬ ಆರೋಪಿ ತನ್ನ ಖಾಸಗಿ ಜೆಟ್ ಬಳಸಿ ಬೆಂಗಳೂರಿನಿಂದ ತೆರಳಿದ್ದಾನೆ. ಕೃತ್ಯದ ಬಳಿಕ ಆರ್/ಟಿ ನಗರ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಪೊಲೀಸರು ಹಿಂದೆ ಬೀಳುತ್ತಿದ್ದಂತೆ ಭಾರಿ ಪ್ಲ್ಯಾನ್ ಮಾಡಿದ್ದ ವೇದಾಂತ್, ಬೆಂಗಳೂರಿನಿಂದ ವಿಮಾನದ ಮೂಲಕ ಮುಂಬೈಗೆ ತೆರಳಿದ್ದ. ಬಳಿಕ ಬಾಂಬೆಯಲ್ಲಿ ಕಂಪನಿ ಮೀಟಿಂಗ್ ಮುಗಿಸಿದ್ದ. ನಂತರ ತನ್ನ ಪ್ರೈವೇಟ್ ಜೆಟ್ ಮೂಲಕ ಭಾರತ - ನೇಪಾಳ ಗಡಿಗೆ ಪ್ರಯಾಣಿಸಿದ್ದು, ನೇಪಾಳದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವೇದಾಂತ್ ಕುಟುಂಬಸ್ಥರು ಮೂಲತಃ ನೇಪಳಾದವರಾಗಿದ್ದು, ಈ ಹಿನ್ನೆಲೆ ಪೊಲೀಸರ ಕೈಗೆ ಸಿಗಬಾರದೆಂದು ವೇದಾಂತ್ ನೇಪಾಳಕ್ಕೆ ವೇದಾಂತ್ ಪರಾರಿಯಾಗಿದ್ದಾನೆ. ಪ್ರಕರಣದಲ್ಲಿ ವೇದಾಂತ್ ಪತ್ತೆಗಾಗಿ ಮುಂಬೈ, ಗೋವಾಕ್ಕೆ ಹೋಗಿದ್ದ ಪೊಲೀಸರು ಸದ್ಯ ಬರಿಗೈನಲ್ಲಿ ವಾಪಸ್ ಆಗಿದ್ದಾರೆ.
ಘಟನೆ ಹಿನ್ನೆಲೆ: ಜೂ. 9ರಂದು ಸಂಜೆ ಆರ್.ಟಿ ನಗರದ ಫೋರ್ ಸೀಸನ್ಸ್ ಹೋಟೆಲ್‌ನಲ್ಲಿ ಸ್ನೇಹಿತನ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ವೈಷ್ಣವಿ ಬಿಲ್ಡರ್ಸ್ ಮಾಲೀಕ ಗೋವಿಂದರಾಜು ಪುತ್ರ ದರ್ಶನ್ ಹಾಗೂ ವಿಎಆರ್ ಬಿಲ್ಡರ್ಸ್ ಪುತ್ರ ಸಂಜಯ್ ದುಗಾರ್ ಪುತ್ರ ವೇದಾಂತ್ ದುಗಾರ್ ಬಂದಿದ್ದರು. ಇಬ್ಬರೂ ಸ್ನೇಹಿತರೇ ಆಗಿದ್ದ ವೇದಾಂತ್ ದುಗಾರ್ ಮತ್ತು ದರ್ಶನ್ ಇಬ್ಬರೂ ಕಳೆದ ಕೆಲ ದಿನದ ಹಿಂದೆ ರೆಸ್ಟೋರೆಂಟ್ನಲ್ಲಿ ಎದುರು ಬದುರಾಗಿದ್ದರು.
ಈ ವೇಳೆ ದರ್ಶನ್ ವೇದಾಂತ್ ದುಗಾರ್ನನ್ನ ಮಾತನಾಡಿಸದೇ ಹೊರಟಿದ್ದ. ಫೋರ್ ಸೀನ್ ಹೋಟೆಲ್‌ನಲ್ಲಿ ಸಿಕ್ಕಾಗ ಅದೇ ವಿಚಾರವಾಗಿ ಕಿರಿಕ್ ನಡೆದಿತ್ತು. ಎಲ್ಲರೂ ನನ್ನನ್ನ ಮಾತನಾಡಿಸುತ್ತಾರೆ ನೀನ್ಯಾಕೊ ಮಾತನಾಡಿಸಲ್ಲ ಎಂದು ವೇದಾಂತ್ ದುಗಾರ್ ಪ್ರಶ್ನಿಸಿದ್ದ. ಈ ವೇಳೆ ದರ್ಶನ್ ಅದು ನನ್ನಿಷ್ಟ ಎಂದು ಉತ್ತರಿಸಿದ್ದ. ಇದರಿಂದ ಸಿಟ್ಟಿಗೆದ್ದ ವೇದಾಂತ್, ಬಿಯರ್ ಬಾಟಲ್ನಿಂದ ದರ್ಶನ್ ಮೇಲೆ ಹಲ್ಲೆ ನಡೆಸಿದ್ದ. ಈ ಸಂಬಂಧ ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸ್ನೇಹಿತನ ಮದುವೆಗೆ ಬಂದು ಬಡಿದಾಡಿಕೊಂಡ ಉದ್ಯಮಿಗಳ ಮಕ್ಕಳು!
ಸಾಫ್ಟ್‌ವೇರ್ ಇಂಜಿನಿಯರ್ ಕೊಲೆ ಯತ್ನ: ಯುವತಿ ತನ್ನನ್ನು ಮದುವೆಯಾಗಲು ನಿರಾಕರಿಸಿದಳೆಂದು ಯುವಕ ಆಕೆಯ ಕತ್ತು ಕೊಯ್ದು ತೀವ್ರವಾಗಿ ಗಾಯಗೊಳಿಸಿರುವ ಘಟನೆ ಹೈದರಾಬಾದ್ ನಗರದ ನರಸಿಂಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪುಪ್ಪಲಗುಡ ಟೀ ಗ್ರಿಲ್ ಹೋಟೆಲ್ ಬಳಿ ಇತ್ತೀಚೆಗೆ ನಡೆದಿತ್ತು. ಪಲ್ನಾಡು ಜಿಲ್ಲೆಯ ಪಿದುಗುರಳ್ಳ ಮೂಲದ ಯುವತಿ (22) ಹೈದರಾಬಾದ್ನಲ್ಲಿ ಕೆಲಸ ಮಾಡುತ್ತಿದ್ದಳು. ಗಚ್ಚಿಬೌಲಿಯ ಹಾಸ್ಟೆಲ್‌ನಲ್ಲಿ ವಾಸವಿದ್ದಳು. ಹತ್ತಿರದ ಸಂಬಂಧಿ ಚಿಲಕಲೂರಿಪೇಟೆಯ ಕೋಟ ಗಣೇಶ್ (27) ಎಂಬಾತ ಗಚ್ಚಿಬೌಲಿಯಲ್ಲಿ ಫುಡ್ ಡೆಲಿವರಿ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಈ ಹಿಂದೆ ಗಣೇಶ್ನ ಜೊತೆಗೆ ಯುವತಿಯನ್ನು ಮದುವೆ ಮಾಡಲು ಪೋಷಕರು ಮುಂದಾಗಿದ್ದು, ಯುವತಿ ಮದುವೆ ನಿರಾಕರಿಸಿದ್ದರಂತೆ. ಜೂ.21ರ ರಾತ್ರಿ ಹಾಸ್ಟೆಲ್‌ನಲ್ಲಿದ್ದ ಆಕೆಗೆ ಕರೆ ಮಾಡಿ, ಬೈಕ್‌ನಲ್ಲಿ ಟೀ ಗ್ರಿಲ್ ಹೋಟೆಲ್‌ಗೆ ಕರೆದೊಯ್ದಿದ್ದ. ಈ ವೇಳೆ, ಗಣೇಶ್ ಮತ್ತೊಮ್ಮೆ ಯುವತಿ ಎದುರು ಮದುವೆ ಪ್ರಸ್ತಾಪ ಮಾಡಿದ್ದ. ಆಕೆ ಮತ್ತೆ ನಿರಾಕರಿಸಿದ್ದಾಳೆ. ಇದು ಇಬ್ಬರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿತ್ತು.ಈ ಸಂದರ್ಭದಲ್ಲಿ ಆರೋಪಿ ತನ್ನ ಬ್ಯಾಗ್‌ನಿಂದ ಚಾಕು ತೆಗೆದು ಯುವತಿಯ ಮೇಲೆ ಹಲ್ಲೆ ನಡೆಸಿದ್ದ.
ಇದನ್ನೂ ಓದಿ: ಮದುವೆ ನಿರಾಕರಿಸಿದ ಸಾಫ್ಟ್‌ವೇರ್ ಇಂಜಿನಿಯರ್ ಕೊಲೆ ಯತ್ನ; ಕಿಡಿಗೇಡಿ ಯುವಕ ಸೆರೆ