ಬೆಂಗಳೂರು: ನಗರದಲ್ಲಿಂದು ಕೇವಲ 2018 ಜನರಲ್ಲಿ ಕೋವಿಡ್ ದೃಢಪಟ್ಟಿದೆ.
ಬೊಮ್ಮನಹಳ್ಳಿಯಲ್ಲಿ 216, ದಾಸರಹಳ್ಳಿ 54, ಬೆಂಗಳೂರು ಪೂರ್ವ 242, ಮಹಾದೇವಪುರ 368, ಆರ್‌ಆರ್ ನಗರ 144, ಬೆಂಗಳೂರು ದಕ್ಷಿಣ 168, ಬೆಂಗಳೂರು ಪಶ್ಚಿಮ 174, ಯಲಹಂಕದಲ್ಲಿ 153 ಜನರಿಗೆ ಕೊರೊನಾ ವಕ್ಕರಿಸಿದೆ.
![bengaluru corona update](https://etvbharatimages.akamaized.net/etvbharat/prod-images/kn-bng-01-bangalore-covid-720270_07062021144227_0706f_1623057147_146.jpg)
ನಿನ್ನೆ ನಗರದಲ್ಲಿ 2944 ಪ್ರಕರಣಗಳು ಪತ್ತೆಯಾಗಿದ್ದವು. 187 ಮಂದಿ ಮೃತಪಟ್ಟಿದ್ದರು. ಈವರೆಗೆ 1,17,340 ಸಕ್ರಿಯ ಪ್ರಕರಣಗಳಿವೆ.
ಜೂನ್ 5 ರಂದು 68,235 ಜನರ ಕೋವಿಡ್ ಸೋಂಕು ಪರೀಕ್ಷೆ ನಡೆಸಿದ್ದು, 1,14,673 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಪಾಸಿಟಿವಿಟಿ ಪ್ರಮಾಣ 9.92%ಕ್ಕೆ ಇಳಿಕೆಯಾಗಿದ್ದು, ಮರಣ ಪ್ರಮಾಣ 7.14% ಇದೆ.