ಬೆಂಗಳೂರು: ''ದೇಶಾದ್ಯಂತ 10 ಪ್ರಮುಖ ನಗರಗಳಲ್ಲಿ ಮಾಲಿನ್ಯದ ಮಟ್ಟವು 366 ದಿನಗಳಲ್ಲಿ ನಗರದ ಮಾಲಿನ್ಯವು ಸುರಕ್ಷಿತ ಮಟ್ಟಕ್ಕಿಂತ 5.8 ಪಟ್ಟು ಹೆಚ್ಚಾಗಿದೆ. ನಗರದ ಗಾಳಿಯ ಗುಣಮಟ್ಟ ಸ್ಥಿರವಾಗಿ ಕುಸಿಯುತ್ತಿದೆ'' ಎಂದು ಇತ್ತೀಚಿನ ಗ್ರೀನ್ಪೀಸ್ ಇಂಡಿಯಾದ ಅಧ್ಯಯನ ಎಚ್ಚರಿಸಿದೆ.
ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಸರಾಸರಿ 29.01 μg/m3 ಇದ್ದು, ವಿಶ್ವಸಂಸ್ಥೆೆ ನಿಗದಿಪಡಿಸಿದ 5 μg/m3 ಸುರಕ್ಷಿತ ಮಟ್ಟಕ್ಕಿಂತ 5.8 ಪಟ್ಟು ಹೆಚ್ಚಾಗಿದೆ. ಅದೇ ರೀತಿ, ನಗರದ ವಾರ್ಷಿಕ ಸರಾಸರಿ 10 ಸಾಂದ್ರತೆಯು 55.14 μg/m3, ಸುರಕ್ಷಿತ ಮಟ್ಟವಾದ 15 μg/m3 ಗಿಂತ 3.7 ಪಟ್ಟು ಹೆಚ್ಚಾಗಿದೆ ಎಂದು ಹೇಳಲಾಗಿದೆ.
10 ನಗರಗಳಲ್ಲಿ ಅಧ್ಯಯನ: ಬೆಂಗಳೂರು ಮಾತ್ರವಲ್ಲದೇ ಕೇರಳದ ಕೊಚ್ಚಿ, ಚೆನ್ನೈ, ದೆಹಲಿ, ಮಹಾರಾಷ್ಟ್ರದ ಮುಂಬೈ ಮತ್ತು ಉತ್ತರ ಭಾರತದ ಹಲವಾರು ನಗರಗಳು ಸೇರಿದಂತೆ 10 ನಗರಗಳಲ್ಲಿ ಅಧ್ಯಯನ ನಡೆಸಲಾಗಿದ್ದು, ಪ್ರತಿ ನಗರದಲ್ಲಿನ ವಾಯು ಗುಣಮಟ್ಟ ಸೂಚ್ಯಂಕವನ್ನು (ಎಕ್ಯೂ) ವಿಶ್ಲೇಷಿಸಿದೆ. ಇದು 2021ರಿಂದ ಸೆಪ್ಟೆೆಂಬರ್‌ನಿಂದ 2022 ರವರೆಗೆ ಪ್ರತಿ ದಿನವೂ ಗುಣಮಟ್ಟಕ್ಕಿಂತ ಕೆಳಗಿದೆ ಎಂದು ಅಧ್ಯಯನದಿಂದ ತಿಳಿದಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ವಾಯು ಮಾಲಿನ್ಯಪೀಡಿತ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳನ್ನು ಸಮಾನ ರೀತಿಯಲ್ಲಿ ಸ್ಥಾಪಿಸುವ ಅಗತ್ಯವಿದೆ ಎಂದು ಅಧ್ಯಯನ ಹೇಳಿದೆ. ವಿದ್ಯುತ್, ಸಾರಿಗೆ ಮತ್ತು ಉದ್ಯಮ ಕ್ಷೇತ್ರಗಳಿಗೆ ಪಳೆಯುಳಿಕೆ ಇಂಧನಗಳಿಗೆ ಪರ್ಯಾಯಗಳನ್ನು ತುರ್ತಾಗಿ ಹುಡುಕುವಂತೆ ಸರಕಾರಗಳನ್ನು ಒತ್ತಾಯಿಸಿದೆ.
ಇದನ್ನೂ ಓದಿ: Monsoon 2023: ಈ ವರ್ಷ ಸಾಮಾನ್ಯ ಮುಂಗಾರು; AI/ML ಮಾಡೆಲ್ನಿಂದ ಮುನ್ಸೂಚನೆ
ಆತಂಕಕಾರಿ ಅಂಕಿಅಂಶಗಳ ಜೊತೆಗೆ, ವರದಿಯು ನಗರದಲ್ಲಿ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಕ್ರಮಗಳನ್ನು ಸೂಚಿಸಿದೆ. ಪ್ರಮುಖವಾಗಿ ಬಸ್ ಸೇವೆಗಳು ಸಾರಿಗೆಯ ನೈಸರ್ಗಿಕ ಮತ್ತು ಪ್ರಾಥಮಿಕ ಆಯ್ಕೆಯಾಗಿರಬೇಕು. ಬಿಎಂಟಿಸಿ ಬಸ್ ಬಳಕೆ ಮತ್ತು ಎಲ್ಲಾ 11 ಬಸ್ ಲೇನ್‌ಗಳನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಗ್ರೀನ್ಪೀಸ್ ಇಂಡಿಯಾದ ಪ್ರಚಾರ ವ್ಯವಸ್ಥಾಪಕ ಅವಿನಾಶ್ ಚಂಚಲ್ ಮಾಹಿತಿ ನೀಡಿ, ಬೆಂಗಳೂರಿಗರು ಅಪಾಯಕಾರಿ ಕಲುಷಿತ ಗಾಳಿಯನ್ನು ಉಸಿರಾಡುತ್ತಿದ್ದಾರೆ. ವಾಹನಗಳ ಹೊರಸೂಸುವಿಕೆಯು ನಗರದಲ್ಲಿ ವಾಯುಮಾಲಿನ್ಯದ ಪ್ರಮುಖ ಕೊಡುಗೆಗಳಲ್ಲಿ ಒಂದಾಗಿದೆ. ಹೊಸದಾಗಿ ರಚನೆಯಾದ ಸರಕಾರ ಇದನ್ನು ಅತ್ಯಂತ ಬೇಗ ಪರಿಹರಿಸಬೇಕು ಎಂದು ಅವರು ತಿಳಿಸಿದರು.
ಕಸ ಎಸೆಯುವವರ ಕುರಿತ ಮಾಹಿತಿ ನೀಡಿ, ಹಣ ಗಳಿಸಿ: ಕೇರಳದಲ್ಲಿ ಸಾರ್ವಜನಿಕ ಸ್ಥಳಗಳು ಮತ್ತು ರಸ್ತೆಗಳ ಪಕ್ಕದಲ್ಲಿ ಕಸ ಎಸೆದವರ ಕುರಿತು ಮಾಹಿತಿ ನೀಡುವವರಿಗೆ 2,500 ರೂ.ವರೆಗೂ ಬಹುಮಾನ ಬಗ್ಗೆ ಕೇರಳ ಸರ್ಕಾರವು ಆದೇಶ ನೀಡಿದೆ. ನಗರ ಮತ್ತು ಗ್ರಾಮಗಳ ಸ್ವಚ್ಛತೆಗಾಗಿ ಸರ್ಕಾರಗಳು ಅರಿವು ಮೂಡಿಸುವುದರ ಜೊತೆಗೆ ಕಸ ವಿಲೇವಾರಿಗಾಗಿ ಕೋಟ್ಯಾಂತರ ರೂ ಖರ್ಚು ಮಾಡಲಾಗುತ್ತಿದೆ. ಬೇಕಾಬಿಟ್ಟಿ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸುವ ಕಾರ್ಯವೂ ಆಗುತ್ತಿದೆ.
ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ತಂದು ಸುರಿಯುವುದು ಇನ್ನೂ ಕಡಿಮೆಯಾಗಿಲ್ಲ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇರಳ ಸರ್ಕಾರವು ಹೊಸ ಹೆಜ್ಜೆ ಇಟ್ಟಿದೆೆ. ಸಾರ್ವಜನಿಕ ಸ್ಥಳಗಳು ಮತ್ತು ರಸ್ತೆಗಳ ಪಕ್ಕದಲ್ಲಿ ತ್ಯಾಜ್ಯ ಎಸೆದು ಹೋಗುವವರಿಗೆ ದಂಡ ಹಾಕುವುದರೊಂದಿಗೆ, ಈ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ನೀಡಲು ಸಹ ನಿರ್ಧರಿಸಿದೆ. ಕೇರಳವನ್ನು ಕಸ ಮುಕ್ತವಾಗಿಸಲು ಅಭಿಯಾನದ ಭಾಗವಾಗಿ ತ್ಯಾಜ್ಯ ಎಸೆಯುವಂತವರ ಕುರಿತು ಮಾಹಿತಿ ನೀಡಿದರೆ, ವಿಷಯ ತಿಳಿಸಿದ ಪ್ರತಿಯೊಬ್ಬರಿಗೂ ನಗದು ಬಹುಮಾನ ಕೊಡಲು ಉದ್ದೇಶಿಸಲಾಗಿದೆ. ಈ ರೀತಿಯ ಪ್ರತಿ ವರದಿಗೆ 2,500 ರೂ.ವರೆಗೆ ಗಳಿಸುವ ನೂತನ ಯೋಜನೆಯನ್ನು ಕೇರಳ ಸರ್ಕಾರ ಜಾರಿಗೊಳಿಸಿದೆ.
ಇದನ್ನೂ ಓದಿ: Global Wind Day 2023: ಇಂದು ವಿಶ್ವ ವಾಯು ದಿನ.. ಈ ದಿವಸದ ಆಚರಣೆಯ ಉದ್ದೇಶ, ಮಹತ್ವವೇನು?