ETV Bharat / state

ದೀಪಾವಳಿ ಪಟಾಕಿ ಅಬ್ಬರದಿಂದ ಕುಸಿದ ಬೆಂಗಳೂರಿನ ವಾಯು ಗುಣಮಟ್ಟ - ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿತ

ದೀಪಾವಳಿ ಹಬ್ಬದಂದು ನಗರದಲ್ಲಿ ಸಿಡಿಸಿದ ಪಟಾಕಿಯಿಂದ ರಾಜಧಾನಿಯಲ್ಲಿ ವಾಯು ಗುಣಮಟ್ಟ ಹದಗೆಟ್ಟಿದೆ.

Bangalore city Air quality
ವಾಯು ಗುಣಮಟ್ಟ
author img

By

Published : Nov 6, 2021, 7:25 PM IST

ಬೆಂಗಳೂರು: ನಗರದಲ್ಲಿ ವಾಹನಗಳಿಂದ ಬರುವ ಧೂಳು, ಹೊಗೆ, ಅಭಿವೃದ್ಧಿ ಕಾಮಗಾರಿಗಳಿಂದಾಗುವ ಮಾಲಿನ್ಯದಿಂದ ಗಾಳಿಯ ಗುಣಮಟ್ಟ ಹಾಳಾಗಿದ್ದು, ದೀಪಾವಳಿ ಹಬ್ಬದಲ್ಲಿ ಸಿಡಿಸಿದ ಪಟಾಕಿಗಳಿಂದ ಮಾಲಿನ್ಯ ಹೆಚ್ಚಳವಾಗಿದೆ.

city Air quality
ವಾಯು ಗುಣಮಟ್ಟದ ಕುರಿತಾದ ಮಾಹಿತಿ

ಸಿಲಿಕಾನ್​ ಸಿಟಿಯಲ್ಲಿ ಗಾಳಿ ಗುಣಮಟ್ಟ ಸೂಚ್ಯಂಕ ಉತ್ತಮ ಸ್ಥಿತಿಯಿಂದ ಸಮಾಧಾನಕರ ಸ್ಥಿತಿಗೆ ಇಳಿಕೆಯಾಗಿದೆ. ಆದರೆ ಇತರ ನಗರಗಳಿಗೆ ಹೋಲಿಸಿದರೆ ನಗರದ ವಾಯುಗುಣಮಟ್ಟ ಉತ್ತಮ ಸ್ಥಿತಿಯಲ್ಲಿದೆ. ದೀಪಾವಳಿಗೂ ಮೊದಲು ಅಂದರೆ ನ.0 2 ರಂದು ಹಾಗೂ ದೀಪಾವಳಿ ನಂತರ ನ.0 4 ರಂದು ಗಾಳಿ ಗುಣಮಟ್ಟ ಹೀಗಿದೆ..

ಸ್ಥಳಗಾಳಿಗುಣಮಟ್ಟ(AQI) (ನ.2- ನ.4)
ಹೆಬ್ಬಾಳ 28 53
ಜಯನಗರ 62 73
ಕ.ವಿ.ಕಾ ಮೈಸೂರು ರಸ್ತೆ 60 67
ನಿಮ್ಹಾನ್ಸ್ 24 38
ಹೆಚ್ಎಸ್ಆರ್ ಲೇಔಟ್ 43 41
ಮೆಜೆಸ್ಟಿಕ್ 104 120
ಶಿವನಗರ (kspcb) 39 53
ಕಾಡುಬೀಸನಹಳ್ಳಿ 52 55
ಬಿಟಿಎಂ ಲೇಔಟ್ 72 67
ವಿಭಾಗ ಆರೋಗ್ಯ ಪರಿಣಾಮ
ಉತ್ತಮ (0-50)ಸಣ್ಣ ಪ್ರಮಾಣದ ಪ್ರಭಾವ
ಸಮಾಧಾನಕರ(51-100) ಸೂಕ್ಷ್ಮ ಜನರಿಗೆ ಉಸಿರಾಟಕ್ಕೆ ಅಡಚಣೆ
ಮಧ್ಯಮ(101-200)ಮಕ್ಕಳು, ವಯಸ್ಸಾದವರು, ಹೃದಯ ಹಾಗೂ ಶ್ವಾಸಕೋಶ ಸಂಬಂಧಿ ರೋಗಿಗಳಿಗೆ ಉಸಿರಾಟದ ಸಮಸ್ಯೆ

ವಾಯುಗುಣಮಟ್ಟ ಸೂಚ್ಯಂಕ 201 ರಿಂದ 400 ಮೇಲ್ಪಟ್ಟು ಕಳಪೆ, ತೀರ ಕಳಪೆ ಹಾಗೂ ತೀವ್ರ ಕೆಟ್ಟ ಮಾಲಿನ್ಯದ ಸ್ಥಿತಿ ಉಂಟಾದರೆ ಆರೋಗ್ಯಕರವಾಗಿರುವ ಜನರಿಗೂ ಉಸಿರಾಟದ ಸಮಸ್ಯೆ ಉಂಟಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.