ETV Bharat / state

ಹಸುಗೂಸು ಮಾರಾಟ ಪ್ರಕರಣ: 6 ವರ್ಷದಲ್ಲಿ 250ಕ್ಕೂ ಹೆಚ್ಚು ಮಕ್ಕಳು ಬಿಕರಿ, ಸಿಸಿಬಿ ವಿಚಾರಣೆ ವೇಳೆ ಬೆಳಕಿಗೆ - ಮಕ್ಕಳ ಮಾರಾಟ

ಬಂಧಿತರಾಗಿರುವ ಆರೋಪಿಗಳು ವಿಚಾರಣೆ ವೇಳೆ ಮಕ್ಕಳ ಮಾರಾಟದ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಹಸುಗೂಸು ಮಾರಾಟ ಪ್ರಕರಣ ಆರೋಪಿ
ಹಸುಗೂಸು ಮಾರಾಟ ಪ್ರಕರಣ ಆರೋಪಿ
author img

By ETV Bharat Karnataka Team

Published : Nov 30, 2023, 3:27 PM IST

ಬೆಂಗಳೂರು: ನವಜಾತ ಶಿಶು ಮಾರಾಟ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರಿಂದ ಬಂಧಿತರಾದ 10 ಮಂದಿ ಆರೋಪಿಗಳ ವಿಚಾರಣೆ ವೇಳೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಕಳೆದ ಶುಕ್ರವಾರ ಆರ್.ಆರ್. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಮಸ್ವಾಮಿ ಕಣ್ಣನ್, ಹೇಮಲತಾ, ಶರಣ್ಯ ಹಾಗೂ ಮುರುಗೇಶ್ವರಿ ಎಂಬುವರು 20 ದಿನದ ಗಂಡು ಶಿಶುವನ್ನು ಮಾರಾಟಕ್ಕೆ ಮುಂದಾಗಿದ್ದಾಗ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಬಳಿಕ ಮಹಾಲಕ್ಷ್ಮೀ, ರಾಧಾ, ಕೇವಿನ್ ಸೇರಿ ಐವರನ್ನು ವಿಚಾರಣೆ ಮಾಡಿದ್ದರು.

ಬಂಧಿತರ ವಿಚಾರಣೆಯಿಂದ ದಿನೆ ದಿನೆ ಹೊಸ ವಿಚಾರಗಳು ಬೆಳಕಿಗೆ ಬರ್ತಿವೆ. ಹಲವು ವರ್ಷಗಳಿಂದ ಪುಟ್ಟ ಕಂದಮ್ಮಗಳನ್ನು ಕರ್ನಾಟಕ ಸೇರಿ ಬೇರೆ ರಾಜ್ಯಗಳಲ್ಲಿ ಕಳ್ಳಸಾಗಾಣಿಕೆ ಮಾಡುತ್ತಿದ್ದರು. ಸದ್ಯ ಸಿಸಿಬಿ ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಈ ವೇಳೆ 6 ವರ್ಷಗಳಲ್ಲಿ ಬರೋಬ್ಬರಿ 250ಕ್ಕೂ ಹೆಚ್ಚು ಮಕ್ಕಳ ಮಾರಾಟ ಮಾಡಿರೋದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಇನ್ನು ಕರ್ನಾಟಕದಲ್ಲಿ ಕೇವಲ 50-60 ಮಕ್ಕಳನ್ನು ಮಾರಾಟ ಮಾಡಿದ್ದು, ಉಳಿದ ಕಂದಮ್ಮಗಳನ್ನು ತಮಿಳುನಾಡಿನಲ್ಲಿ ಮಾರಾಟ ಮಾಡಿರುವುದಾಗಿ ಹೇಳಿದ್ದಾರೆ.

ಸದ್ಯ ಕರ್ನಾಟಕದಲ್ಲಿ ಮಾರಾಟ ಆಗಿರೋ ಮಕ್ಕಳ ಬಗ್ಗೆ ಮಾಹಿತಿ ಕಲೆಹಾಕುತ್ತಿರುವ ಸಿಸಿಬಿಗೆ ಕೇವಲ ಹತ್ತು ಮಕ್ಕಳ ಬಗ್ಗೆ ಮಾಹಿತಿ ಸಿಕ್ಕಿದ್ದು, ಉಳಿದ ಮಕ್ಕಳನ್ನು ಯಾರಿಗೆ ಕೊಟ್ಟಿದ್ದಾರೆ ಅನ್ನೋದರ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.

ಗಾರ್ಮೆಂಟ್ಸ್​​ನಲ್ಲಿ ಕೆಲಸ ಮಾಡ್ತಿದ್ದವಳು ಇಂದು ಕೋಟ್ಯಾಧಿಪತಿ; ಕರ್ನಾಟಕದ ಮೇನ್ ಕಿಂಗ್ ಪಿನ್, ಕಮ್ ಗ್ಯಾಂಗ್ ಲೀಡರ್ ಮಹಾಲಕ್ಷ್ಮೀಯ ಕಥೆಯೇ ಒಂದು ರೋಚಕ. ಏನೂ ಇಲ್ಲದೆ ದುಡಿಮೆಗೆಂದು ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡಿಕೊಂಡಿದ್ದ ಈಕೆ 2015 ರಿಂದ 2017ರ ವರೆಗೆ ಕೇವಲ 8 ಸಾವಿರ ರೂ. ಸಂಬಳಕ್ಕೆ ಕೆಲಸ ಮಾಡುತ್ತಿದ್ದಳು. ಈ ವೇಳೆ ಈಕೆಗೆ ಪರಿಚಯ ಆದ ಮಹಿಳೆಯೊಬ್ಬಳು ಅಂಡಾಣು ಕೊಟ್ಟರೆ ಹಣ ಕೊಡೋದಾಗಿ ಹೇಳಿದ್ದಳು. ಆಗ ಅಂಡಾಣು ನೀಡಿದ್ದ ಮಹಾಲಕ್ಷ್ಮೀಗೆ ಸುಮಾರು 20 ಸಾವಿರ ಮಹಿಳೆ ನೀಡಿದ್ದಳು. ಹಣದ ರುಚಿ ನೋಡಿದ ಮಹಾಲಕ್ಷ್ಮಿ ನಂತರ ದಿನಗಳಲ್ಲಿ ಅಂಡಾಣು ಕೊಡುವವರನ್ನು ಪತ್ತೆ ಮಾಡಿ ಅದರಿಂದ ಕಮೀಷನ್ ಪಡೆಯುವ ಕೆಲಸ ಮಾಡುತ್ತಿದ್ದಳು. ಇನ್ನು 2017 ರಿಂದಲೂ ಈ ದಂಧೆಯನ್ನ ಶುರುಮಾಡಿದ್ದ ಮಹಾಲಕ್ಷ್ಮೀ ಹಿಂದೆ ತಿರುಗಿ ನೋಡಿರಲಿಲ್ಲ. ಇದೀಗ ಪ್ರಕಣದ ಬಗ್ಗೆ ಸಿಸಿಬಿ ಫುಲ್ ಗ್ರಿಲ್ ಮಾಡುತ್ತಿದ್ದಾರೆ. ಮಹಾಲಕ್ಷ್ಮಿ ಸೇರಿದಂತೆ ಆರೋಪಿಗಳ ವಿಚಾರಣೆ ಮುಂದುವರೆದಿದೆ.

ಇದನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.