ETV Bharat / state

ಸೈಬರ್ ವಂಚನೆ ಪ್ರಕರಣಗಳಲ್ಲಿ ಬೆಂಗಳೂರಿಗೆ ಅಗ್ರಸ್ಥಾನ: ಕಾರಣಗಳೇನು?

Cyber crimes: ಸೈಬರ್ ಅಪರಾಧಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ ಮತ್ತು ಮಹಾನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ.

Etv Bharat
ಸೈಬರ್ ವಂಚನೆ ಪ್ರಕರಣಗಳಲ್ಲಿ ಬೆಂಗಳೂರಿಗೆ ಅಗ್ರಸ್ಥಾನದ ಕುಖ್ಯಾತಿ...! ಕಾರಣಗಳೇನು ?
author img

By ETV Bharat Karnataka Team

Published : Dec 7, 2023, 7:57 PM IST

ಬೆಂಗಳೂರು: ದೇಶದಲ್ಲಿ ದಾಖಲಾಗುವ ಸೈಬರ್ ಅಪರಾಧಗಳ ಪಟ್ಟಿಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿ ಹಾಗೂ ಮಹಾನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನ ಪಡೆದ ಕುಖ್ಯಾತಿಗೆ ಒಳಗಾಗಿವೆ. ದೇಶದಲ್ಲಿ 2021ರಲ್ಲಿ 52,974 ಸೈಬರ್ ಪ್ರಕರಣಗಳು ದಾಖಲಾಗಿದ್ದರೆ, 2022ರಲ್ಲಿ 65,893 ಕೇಸ್ ದಾಖಲಾಗಿವೆ.

2022ನೇ ಸಾಲಿನಲ್ಲಿ ತೆಲಂಗಾಣದಲ್ಲಿ 15,297 ಕೇಸ್‌ಗಳು ದಾಖಲಾಗಿದ್ದು, ಮೊದಲ ಸ್ಥಾನದಲ್ಲಿದೆ. 12,556 ಪ್ರಕರಣಗಳು ದಾಖಲಾಗಿರುವ ಕರ್ನಾಟಕ ಮತ್ತು 10,117 ಪ್ರಕರಣಗಳನ್ನು ದಾಖಲಾಗಿರುವ ಉತ್ತರ ಪ್ರದೇಶ ರಾಜ್ಯಗಳು ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ. ಸೈಬರ್ ಅಪರಾಧಗಳಷ್ಟೇ ಅಲ್ಲದೇ ಶೇ.11ರಷ್ಟು ಆರ್ಥಿಕ ಅಪರಾಧ ಪ್ರಕರಣಗಳು, ಶೇ. 9ರಷ್ಟು ಹಿರಿಯ ನಾಗರಿಕರ ವಿರುದ್ಧದ ಅಪರಾಧ ಪ್ರಕರಣಗಳು, ಶೇ.4ರಷ್ಟು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಹೆಚ್ಚಳವಾಗಿರುವ ಮಾಹಿತಿಯನ್ನು ಇತ್ತೀಚಿಗೆ ಬಿಡುಗಡೆಯಾಗಿರುವ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ವರದಿ ಬಹಿರಂಗಗೊಳಿಸಿದೆ.

ಬೆಂಗಳೂರಿನಲ್ಲಿ ಹೆಚ್ಚು ಸೈಬರ್ ಅಪರಾಧ: ದೇಶದಲ್ಲಿ ಮಹಾನಗರಗಳಲ್ಲಿ ದಾಖಲಾದ ಸೈಬರ್ ಅಪರಾಧ ಪ್ರಕರಣಗಳ ಪೈಕಿ ಬೆಂಗಳೂರು ಮೊದಲನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ 2021ರಲ್ಲಿ 6,423 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದರೆ, 2022ರಲ್ಲಿ 9,940 ಪ್ರಕರಣಗಳು ದಾಖಲಾಗಿದ್ದು, ಮೊದಲ ಸ್ಥಾನದಲ್ಲಿದೆ. 4724 ಪ್ರಕರಣಗಳು ದಾಖಲಾಗಿರುವ ಮುಂಬೈ ಮತ್ತು 4436 ಪ್ರಕರಣಗಳು ದಾಖಲಾಗಿರುವ ಹೈದರಾಬಾದ್ 2 ಮತ್ತು 3ನೇ ಸ್ಥಾನದಲ್ಲಿವೆ.

ಮಕ್ಕಳ ಮೇಲಿನ ಸೈಬರ್ ಅಪರಾಧ-ಕರ್ನಾಟಕಕ್ಕೆ ಮೊದಲ ಸ್ಥಾನ: ಮಕ್ಕಳ ಮೇಲಿನ ಸೈಬರ್ ಅಪರಾಧ ಪ್ರಕರಣಗಳಲ್ಲಿಯೂ ಕರ್ನಾಟಕ ಮೊದಲನೇ ಸ್ಥಾನ ಪಡೆದ ಕುಖ್ಯಾತಿಗೊಳಗಾಗಿದೆ. 2022ನೇ ಸಾಲಿನಲ್ಲಿ ಮಕ್ಕಳನ್ನೊಳಗೊಂಡ ಅಶ್ಲೀಲ ವಿಡಿಯೋಗಳ ಚಿತ್ರೀಕರಣ ಹಾಗೂ ಪ್ರಕಟಿಸುವ ಅಪರಾಧ ಸೇರಿದಂತೆ ಮಕ್ಕಳ ಮೇಲಿನ 239 ಸೈಬರ್ ಅಪರಾಧ ಪ್ರಕರಣಗಳು ಕರ್ನಾಟಕದಲ್ಲಿ ದಾಖಲಾಗಿವೆ. ತಲಾ 182 ಪ್ರಕರಣಗಳನ್ನು ಹೊಂದಿರುವ ಕೇರಳ ಹಾಗೂ ರಾಜಸ್ಥಾನ ಎರಡನೇ ಸ್ಥಾನದಲ್ಲಿದ್ದರೆ, 178 ಪ್ರಕರಣಗಳಿರುವ ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ.

ಮತ್ತೊಂದೆಡೆ, ಸೈಬರ್ ಪ್ರಕರಣಗಳ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಕರ್ನಾಟಕ ಪೊಲೀಸರು ಹಿಂದೆ ಬಿದ್ದಿದ್ದಾರೆ. 2022ರಲ್ಲಿ ದಾಖಲಾದ 12,556 ಪ್ರಕರಣಗಳ ಪೈಕಿ 612 ಪುರುಷರು ಹಾಗೂ 67 ಮಹಿಳೆಯರು ಸೇರಿ 679 ವಂಚಕರನ್ನಷ್ಟೇ ಬಂಧಿಸುವಲ್ಲಿ ಕರ್ನಾಟಕದ ಪೊಲೀಸರು ಯಶಸ್ವಿಯಾಗಿದ್ದಾರೆ. 10,117 ಪ್ರಕರಣಗಳಿಂದ 7107 ಪುರುಷ ಹಾಗೂ 15 ಮಹಿಳೆಯರು ಸೇರಿ 7,122 ಆರೋಪಿಗಳನ್ನು ಪತ್ತೆ ಹಚ್ಚಿರುವ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ.

2022ರಲ್ಲಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾದ ರಾಜ್ಯಗಳು:

ತೆಲಂಗಾಣ - 15,297
ಕರ್ನಾಟಕ - 12,556
ಉತ್ತರ ಪ್ರದೇಶ - 10,117
ಮಹಾರಾಷ್ಟ್ರ - 8,249
ಆಂಧ್ರಪ್ರದೇಶ - 2,341

2022ರಲ್ಲಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾದ ಮಹಾನಗರಗಳು:

ಬೆಂಗಳೂರು - 9,940
ಮುಂಬೈ - 4724
ಹೈದರಾಬಾದ್ - 4436
ಲಕ್ನೋ - 1134
ದೆಹಲಿ - 685

ಬೆಂಗಳೂರು ಸೈಬರ್ ವಂಚಕರ ಟಾರ್ಗೆಟ್ ಏಕೆ?: 'ಈಟಿವಿ ಭಾರತ್' ಜೊತೆ ಮಾಹಿತಿ ಹಂಚಿಕೊಂಡ ಸೈಬರ್ ತಜ್ಞ ಫಣೀಂದ್ರ ಬಿ.ಎನ್., ''ದೇಶದ ಮಹಾನಗರಗಳ ಪೈಕಿ ಬೆಂಗಳೂರು ನಗರ ಐಟಿ ಹಬ್ ಎಂದು ಹೆಸರುವಾಸಿಯಾಗಿದೆ. ಇಲ್ಲಿ ತಂತ್ರಜ್ಞಾನ ಆಧಾರಿತ ಕೆಲಸಗಳು ಹೆಚ್ಚಿರುವುದರಿಂದ ಸಹಜವಾಗಿಯೇ ಬೆಂಗಳೂರು ಸೈಬರ್ ವಂಚಕರ ಟಾರ್ಗೆಟ್ ಆಗಿದೆ. ಪ್ರತಿನಿತ್ಯದ ಕೆಲಸಗಳಿಗೂ ಜನರು ಆ್ಯಪ್​ಗಳನ್ನು ಅವಲಂಬಿಸಿರುವುದು ಇದಕ್ಕೆ ಕಾರಣ. ತಂತ್ರಜ್ಞಾನಗಳ ಹೆಚ್ಚಿನ ಬಳಕೆಯನ್ನು ನಾವು ಬೆಂಗಳೂರಿನಲ್ಲಿ ಕಾಣುತ್ತೇವೆ. ಹಾಗಾಗಿ ಸೈಬರ್ ವಂಚನೆಗಳೆಂದು ಬಂದಾಗ ಅವುಗಳಿಂದ ವಂಚನೆಗೊಳಗಾಗುವ ಅತಿ ಹೆಚ್ಚು ಜನರು ಬೆಂಗಳೂರಿನಲ್ಲಿ ಸಿಗುತ್ತಿದ್ದಾರೆ. ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋದ ಬಿಡುಗಡೆಗೊಳಿಸಿರುವ ಮಾಹಿತಿಗೂ ಸಿಗದ ಅನೇಕ ಪ್ರಕರಣಗಳಿವೆ. ಎಷ್ಟೋ ಪ್ರಕರಣಗಳು ವರದಿಯಾಗುವುದೇ ಇಲ್ಲ. ಸೈಬರ್ ಕ್ರೈಂ ಕುರಿತು ಜನರಲ್ಲಿ ನಿರಂತರ ಜಾಗೃತಿ ಮೂಡಿಸುವ ಅಗತ್ಯವಿದೆ'' ಎಂದು ಹೇಳಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಅಪರಾಧ ಪ್ರಕರಣ ಹೆಚ್ಚಳ: ಕಳೆದ ವರ್ಷ 1,404 ಮಂದಿ ಕೊಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.