ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಮಾರ್ಮಾಂಗದಲ್ಲಿ ಅಡಗಿಸಿಟ್ಟು ಸಾಗಾಟ ಮಾಡುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಆರೋಪಿ ವಿದೇಶಿ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.
ವಿದೇಶದಿಂದ ಕೆಂಪೇಗೌಡ ಏರ್ಪೋಟ್ಗೆ ಬಂದ ಮಹಿಳೆಯನ್ನು ತೀವ್ರವಾಗಿ ತಪಾಸಣೆ ಮಾಡಿದಾಗ ಮಾರ್ಮಾಂಗದಲ್ಲಿ ಡ್ರಗ್ಸ್ ಕ್ಯಾಪ್ಸುಲ್ ಪತ್ತೆಯಾಗಿದೆ. ಆರೋಪಿ ಮಹಿಳೆ ಕೀನ್ಯಾ ದೇಶದವರು. ಈಕೆಯಿಂದ 1 ಕೆಜಿ 144 ಗ್ರಾಂ ತೂಕದ ಕೊಕೇನ್ ಜಪ್ತಿ ಮಾಡಲಾಗಿದೆ.
ಆರೋಪಿ ಅಥಿಸ್ ಅಬಬಾದಿಂದ ಬೆಂಗಳೂರಿಗೆ ಎಥಿಫಿಯನ್ ಏರ್ಲೈನ್ಸ್ ಮೂಲಕ ಬಂದಿದ್ದರು. ಖಚಿತ ಮಾಹಿತಿ ಮೇರೆಗೆ ತಡೆದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕ್ಯಾಪ್ಸೂಲ್ನಲ್ಲಿ ಡ್ರಗ್ಸ್ ತುಂಬಿ, ಮರ್ಮಾಂಗದಲ್ಲಿ ಇಟ್ಟುಕೊಂಡು ಪ್ಲಾನ್ ಮಾಡಿದ ಮಹಿಳೆ ಸಿಕ್ಕಿಬಿದ್ದಿದ್ದಾಳೆ. ಎಲ್ಲಾ ಕ್ಯಾಪ್ಸೂಲ್ಸ್ ಹೊರತೆಗೆದು ಪರಿಶೀಲಿಸಿದಾಗ ಒಂದು ಕೆಜಿಗೂ ಅಧಿಕ ಡ್ರಗ್ಸ್ ಸಿಕ್ಕಿದೆ. ಕ್ಯಾಪ್ಸೂಲ್‌ಸಮೇತ ಮಹಿಳೆಯನ್ನು ಕಸ್ಟಮ್ಸ್ ಅಧಿಕಾರಿಗಳು ಎನ್ಸಿಬಿ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ. ಎನ್ಸಿಬಿ ಅಧಿಕಾರಿಗಳು ತನಿಖೆಗೆ ತೀವ್ರಗೊಳಿಸಿದ್ದಾರೆ.
ಮಂಗಳೂರು ಏರ್ಪೋರ್ಟ್ನಲ್ಲಿ ಚಿನ್ನ ಜಪ್ತಿ, ಪ್ರಯಾಣಿಕ ವಶಕ್ಕೆ: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಅಧಿಕ ಪ್ರಮಾಣದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಘಟನೆ ಇತ್ತೀಚೆಗೆ ನಡೆದಿದೆ. ಆರೋಪಿ ಪ್ರಯಾಣಿಕ ದುಬೈನಿಂದ ಮಂಗಳೂರಿಗೆ ಏರ್ ಇಂಡಿಯಾ ವಿಮಾನದಲ್ಲಿ ಬಂದಿಳಿದಿದ್ದರು. ರಟ್ಟಿನ ಪೆಟ್ಟಿಗೆಯ ಒಳಭಾಗದಲ್ಲಿ ಇರಿಸಲಾಗಿದ್ದ ನಾಲ್ಕು ನೀಲಿ ಬಣ್ಣದ ದಪ್ಪದ ಕಾಗದದ ಹಾಳೆಗಳ ಎರಡು ಪದರಗಳ ಮಧ್ಯೆ ಚಿನ್ನದ ಪೌಡರ್ ಅಡಗಿಸಿಡಲಾಗಿತ್ತು. ಕಸ್ಟಮ್ಸ್ ಅಧಿಕಾರಿಗಳು ಅಕ್ರಮ ಪತ್ತೆ ಮಾಡಿ, ಬಚ್ಚಿಟ್ಟ 242 ಗ್ರಾಂ ಚಿನ್ನದ ಪುಡಿಯನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ. ಇದರ ಮೌಲ್ಯ 14.50 ಲಕ್ಷ ರೂ. ಎಂದು ಅಂದಾಜು ಮಾಡಲಾಗಿದೆ. ಅಧಿಕಾರಿಗಳು ಪ್ರಯಾಣಿಕನನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಮಂಗಳೂರು ಏರ್ಪೋರ್ಟ್ನಲ್ಲಿ ₹14 ಲಕ್ಷದ ಚಿನ್ನ ಜಪ್ತಿ, ಪ್ರಯಾಣಿಕ ವಶಕ್ಕೆ