ETV Bharat / state

ನಟಿ ಚೇತನ ರಾಜ್ ಪ್ರಕರಣ ಮಾಸುವ ಮುನ್ನವೇ ಮತ್ತೊಂದು 'ಫ್ಯಾಟ್​' ಸರ್ಜರಿ ಕೇಸ್​: ಯುವತಿ ನರಳಾಟ - ಫ್ಯಾಟ್​ ಸರ್ಜರಿ ಸೈಡ್ ಎಫೆಕ್ಟ್​​ನಿಂದ ಯುವತಿ ಕಣ್ಣೀರು

ಖಾಸಗಿ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಸಿಕೊಂಡ ಹತ್ತೇ ದಿನಕ್ಕೆ ಸೈಡ್ ಎಫೆಕ್ಟ್ ಕಾಣಿಸಿಕೊಂಡಿದೆ. ಇದರಿಂದ ಸೊಂಟದ ಭಾಗದಲ್ಲಿ ಕೀವು ತುಂಬಿ, ಕಪ್ಪಾಗಿ ಗಾಯಗಳಾಗಿವೆಯಂತೆ.

Bengaluru Young woman suffering from side effects of fat surgery
ಬೆಂಗಳೂರಿನಲ್ಲಿ ಮತ್ತೊಂದು ಫ್ಯಾಟ್​ ಸರ್ಜರಿ ಸೈಡ್ ಎಫೆಕ್ಟ್ ಕೇಸ್
author img

By

Published : May 31, 2022, 8:15 PM IST

ಬೆಂಗಳೂರು: ಇತ್ತೀಚೆಗೆ ಫ್ಯಾಟ್ ಸರ್ಜರಿ ಮಾಡಿಸಲು ಹೋಗಿ ನಟಿ ಚೇತನ ರಾಜ್ ಸಾವನ್ನಪ್ಪಿರುವ ಪ್ರಕರಣ ಮಾಸುವ ಮುನ್ನವೇ ಇನ್ನೊಂದು ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ಫ್ಯಾಟ್ ಕರಗಿಸುವ ಸರ್ಜರಿಗೆ ಒಳಗಾದ ಯುವತಿಯು ಸೈಡ್​ ಎಫೆಕ್ಟ್​​ನಿಂದಾಗಿ ಕಣ್ಣೀರು ಸುರಿಸುವಂತಾಗಿದೆ. ಖಾಸಗಿ ಕಂಪನಿಯಲ್ಲಿ ಹೆಚ್​.ಆರ್ ಆಗಿ ಕೆಲಸ ಮಾಡುತ್ತಿರುವ ಯುವತಿ ಇಂತಹ ಫ್ಯಾಟ್ ಕರಗಿಸುವ ಸರ್ಜರಿ ನಂತರ ಸಮಸ್ಯೆಯಿಂದ ನರಳುವಂತೆ ಆಗಿದೆ. ದೆಹಲಿ ಮೂಲದ ಈ ಯುವತಿ ಎಂ.ಎಸ್.ಪಾಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಸರ್ಜರಿಗೆ ಒಳಗಾಗಿದ್ದರು.

ಬೆಂಗಳೂರಿನಲ್ಲಿ ಮತ್ತೊಂದು ಫ್ಯಾಟ್​ ಸರ್ಜರಿ ಸೈಡ್ ಎಫೆಕ್ಟ್ ಕೇಸ್

ಆದರೆ, ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಹತ್ತೇ ದಿನಕ್ಕೆ ಅಡ್ಡ ಪರಿಣಾಮ ಕಾಣಿಸಿಕೊಂಡಿದೆ. ಇದರಿಂದ ಸೊಂಟದ ಭಾಗದಲ್ಲಿ ಕೀವು ತುಂಬಿ, ಕಪ್ಪಾಗಿ ಗಾಯಗಳಾಗಿವೆ. ಅತಿಯಾದ ನೋವಿನಿಂದ ಬಳಲುತ್ತಿರುವುದಾಗಿ ಯುವತಿ ವಿಡಿಯೋ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದಾಳೆ.

ಮೆಡಿಕಲ್ ಕೌನ್ಸಿಲ್​ಗೆ ದೂರು ನೀಡುವ ಬಗ್ಗೆ ವೈದ್ಯರಿಗೆ ವ್ಯಾಟ್ಸಪ್​ ಸಂದೇಶ

ಇದನ್ನೂ ಓದಿ: ಫ್ಯಾಟ್ ಸರ್ಜರಿಗಾಗಿ ಚಿನ್ನಾಭರಣ ಅಡವಿಟ್ಟು ಪ್ರಾಣ ಕಳೆದುಕೊಂಡ ಚೇತನಾ ರಾಜ್

ಅಲ್ಲದೇ, ಎಡವಟ್ಟಿನ ಸರ್ಜರಿ ಬಗ್ಗೆ ಆಸ್ಪತ್ರೆಯವರು ಯಾರು ಸ್ಪಂದಿಸಿಲ್ಲ. ಹೀಗಾಗಿ ಮತ್ತೊಬ್ಬ ವೈದ್ಯರ ಸಂಪರ್ಕ ಮಾಡಿದಾಗ ಸದ್ಯ ಕೀವು ತುಂಬಿಕೊಂಡಿರುವ ಮತ್ತೊಂದು ಸರ್ಜರಿಯ ಸಲಹೆ ನೀಡಿದ್ದಾರೆ. ಹೀಗಾಗಿ ಆತಂಕಕ್ಕೆ ಒಳಗಾಗಿರುವ ಯುವತಿ, ತನ್ನ ಈ ಸ್ಥಿತಿಗೆ ಕಾರಣವಾದ ವೈದ್ಯರ ವಿರುದ್ಧ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾಗೆ ದೂರು ನೀಡುವುದಾಗಿ ಹೇಳಿದ್ದಾಳೆ.

ಇದನ್ನೂ ಓದಿ: ಕಿರುತೆರೆ ನಟಿ ಚೇತನಾಗೆ ಫ್ಯಾಟ್ ಸರ್ಜರಿ ನಡೆಸಿ ಸಾವಿಗೆ ಕಾರಣವಾಗಿದ್ದ ಆಸ್ಪತ್ರೆ ಬಂದ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.