ETV Bharat / state

ಕೊರೊನಾ ಹಾಟ್​ಸ್ಪಾಟ್​​ ಬೆಂಗಳೂರಲ್ಲಿ 3,000 ಸೋಂಕಿತರು ನಾಪತ್ತೆ, ಮೊಬೈಲ್​ ಫೋನ್​ ಸ್ವಿಚ್ಡ್​ಆಫ್​ - ಬೆಂಗಳೂರಿನಲ್ಲಿ ಕೋವಿಡ್​-19 ಪ್ರಕರಣಗಳು

ಪರೀಕ್ಷೆ ಮಾಡಿಸಿಕೊಂಡು ವರದಿಯಲ್ಲಿ ಪಾಸಿಟಿವ್ ಬಂದ ಸುಮಾರು 3000 ಕೋವಿಡ್ ಸೋಂಕಿತರು ಕಾಣೆಯಾಗಿದ್ದಾರೆ. ಅವರೆಲ್ಲ ಎಲ್ಲಿದ್ದಾರೆ ಎಂಬುದು ಸರ್ಕಾರಕ್ಕೆ ತಿಳಿದಿಲ್ಲ. ತಮ್ಮ ಮೊಬೈಲ್ ಫೋನ್​ಗಳನ್ನು ಸ್ವಿಚ್ಡ್​ ಆಫ್ ಮಾಡಿಕೊಂಡದ್ದಾರೆ. ಅವರ ಅಸಹಾಕಾರದ ಕಾರಣದಿಂದಾಗಿ ರಾಜ್ಯದಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಸಚಿವ ಆರ್ ಅಶೋಕ್​ ಆತಂಕ ಹೊರಹಾಕಿದ್ದಾರೆ.

Covid
Covid
author img

By

Published : Apr 28, 2021, 7:42 PM IST

ಬೆಂಗಳೂರು: ಕೊರೊನಾ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಸಮಯದಲ್ಲಿ ಬೆಂಗಳೂರಿನಲ್ಲಿ 3,000 ಕೋವಿಡ್ ಸೋಂಕಿತರು ನಾಪತ್ತೆ ಆಗಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್​ ಕಳವಳ ವ್ಯಕ್ತಪಡಿಸಿದ್ದಾರೆ.

ಪರೀಕ್ಷೆ ಮಾಡಿಸಿಕೊಂಡು ವರದಿಯಲ್ಲಿ ಪಾಸಿಟಿವ್ ಬಂದ ಸುಮಾರು 3000 ಕೋವಿಡ್ ಸೋಂಕಿತರು ಕಾಣೆಯಾಗಿದ್ದಾರೆ. ಅವರೆಲ್ಲ ಎಲ್ಲಿದ್ದಾರೆ ಎಂಬುದು ಸರ್ಕಾರಕ್ಕೆ ತಿಳಿದಿಲ್ಲ. ತಮ್ಮ ಮೊಬೈಲ್ ಫೋನ್​ಗಳನ್ನು ಸ್ವಿಚ್ಡ್​​ ಆಫ್ ಮಾಡಿಕೊಂಡದ್ದಾರೆ. ಅವರ ಅಸಹಕಾರದ ಕಾರಣದಿಂದಾಗಿ ರಾಜ್ಯದಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಸಚಿವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅವರೆಲ್ಲರನ್ನೂ ಪತ್ತೆಹಚ್ಚಲು ಪೊಲೀಸರಿಗೆ ಈಗಾಗಲೇ ಆದೇಶಿಸಲಾಗಿದೆ. ಸೋಂಕಿಗೆ ಒಳಗಾದ ಅನೇಕ ಜನರು ತಮ್ಮ ಫೋನ್‌ಗಳನ್ನು ಆಫ್ ಮಾಡುತ್ತಿದ್ದಾರೆ. 2,000 ರಿಂದ 3,000 ಕೋವಿಡ್ ಬಲಿಪಶುಗಳನ್ನು ಅವರ ಮನೆಗಳಿಂದ ಸ್ಥಳಾಂತರಿಸಲಾಗಿದೆ. ಅವರು ಎಲ್ಲಿಗೆ ಹೋದರೂ ಎಂಬುದು ಸಹ ತಿಳಿದಿಲ್ಲ. ಇದರಿಂದಾಗಿ ಅವರ ನಿಖರ ಸ್ಥಳ ನಮಗೆ ತಿಳಿಯಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ವೈರಸ್ ಸೋಂಕಿಗೆ ಒಳಗಾದವರಿಗೆ ಉಚಿತ ಔಷಧಗಳನ್ನು ಒದಗಿಸುತ್ತೇವೆ. ಸೋಂಕು ಪೀಡಿತರ ಪೈಕಿ ಸುಮಾರು 90 ಪ್ರತಿಶತ ಜನರು ಮನೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಾರೆ. ಆದರೆ, ಕೆಲವರು ತಮ್ಮ ಸೆಲ್‌ಫೋನ್‌ಗಳನ್ನು ಈ ರೀತಿ ಸ್ವಿಚ್ಡ್​​ ಆಫ್ ಮಾಡಿ ಆಸ್ಪತ್ರೆಗಳಿಗೆ ಬಂದು ಕೊನೆಯ ಕ್ಷಣದಲ್ಲಿ ತಮ್ಮ ಆರೋಗ್ಯದ ಬಗ್ಗೆ ಚಿಂತೆ ಮಾಡಿ ಐಸಿಯು ಹಾಸಿಗೆಗಳನ್ನು ಕೇಳುತ್ತಾರೆ. ಇದು ಈಗಿನ ಪ್ರಸ್ತುತ ಪರಿಸ್ಥಿತಿ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕೋವಿಡ್​-19 ಸೋಂಕು 14 ಲಕ್ಷ ಮೀರಿದೆ. ಸಕ್ರಿಯ ಪ್ರಕರಣಗಳು ಮೂರು ಲಕ್ಷ ದಾಟಿದೆ. ಕಳೆದ 24 ಗಂಟೆಯಲ್ಲಿ 39,047 ಸೋಂಕು ಕಂಡು ಬಂದಿದ್ದು, ಬೆಂಗಳೂರಿನಲ್ಲಿ 22,596 ಕೇಸ್​ಗಳು ದಾಖಲಾಗಿವೆ. ಇದೇ ಸಮಯದಲ್ಲಿ 229 ಜನ ಬಲಿಯಾಗಿದ್ದಾರೆ. ಬರೋಬ್ಬರಿ 2,192 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.