ಬೆಂಗಳೂರು : ಶನಿವಾರ ಹಾಗೂ ಭಾನುವಾರ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಘೋಷಿಸಲಾಗಿದ್ದು, ದಿನಸಿ, ತರಕಾರಿ, ಹಾಲಿನ ಅಂಗಡಿಗಳು ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ತೆರೆದಿರುವ ಕಾರಣ ನಗರದಲ್ಲಿ ಜನ ಖರೀದಿಗೆ ಮುಗಿಬಿದ್ದಿರುವ ದೃಶ್ಯ ಕಂಡು ಬಂತು.
ಸೀಮಿತ ಅವಧಿ ಮಾತ್ರ ಅಂಗಡಿಗಳು ತೆರೆದಿರುವ ಹಿನ್ನೆಲೆ, ಸಾಮಾಜಿಕ ಅಂತರವನ್ನೂ ಕಾಪಾಡದೆ, ಮಾಸ್ಕ್ ಕೂಡಾ ಸರಿಯಾಗಿ ಹಾಕಿಕೊಳ್ಳದೆ ಜನ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಬೇಕರಿ, ದಿನಸಿ, ಹಾಲು, ತರಕಾರಿ ಹಲವೆಡೆ ಬೆಳಗ್ಗೆಯೇ ಸ್ಟಾಕ್ ಖಾಲಿಯಾಗಿದೆ. ಇನ್ನೂ ಹಲವು ಜನ ಹೋಟೆಲ್ ಪಾರ್ಸೆಲ್ ಅವಲಂಬಿಸಿದ್ದಾರೆ.
ಓದಿ : ವೀಕೆಂಡ್ ನೈಟ್ ಕರ್ಫ್ಯೂ : ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ
ಈ ನಡುವೆ ತಳ್ಳುವ ಗಾಡಿಯಲ್ಲಿರುವ ವ್ಯಾಪಾರಿಗಳು, ತರಕಾರಿ ಮಾರಾಟವಾಗದಿದ್ದರೆ ಎಲ್ಲವೂ ಹಾಳಾಗಲಿದೆ ಎಂಬ ಬೇಸರದಲ್ಲಿದ್ದಾರೆ. ಮತ್ತೆ ನಾಳೆ ಬೆಳಗ್ಗೆಯೇ ಮಾರಲು ಅವಕಾಶ ಇರುವುದರಿಂದ ತಳ್ಳುಗಾಡಿಯ ವ್ಯಾಪಾರಿಗಳು ಚಿಂತೆಗೀಡಾಗಿದ್ದಾರೆ.