ETV Bharat / state

ಮನವಿ ಮಾಡಿದರೂ ಕೇಳದೆ ಪೊಲೀಸ್​ ಠಾಣೆ, ವಾಹನಗಳಿಗೆ ಬೆಂಕಿ ಇಟ್ಟರು: ಮೌಲ್ವಿ ಬೇಸರ - ಬೆಂಗಳೂರು ಮೌಲ್ವಿ

ನನಗಿರುವ ಮಾಹಿತಿ ಪ್ರಕಾರ ಗಲಭೆಕೋರರು ಡಿ.ಜೆ. ಹಳ್ಳಿಯವರಲ್ಲ.‌ ಒಂದು ವೇಳೆ ಇಲ್ಲಿಯವರೇ ಆಗಿದ್ದರೆ ನನ್ನ ಮಾತನ್ನು ಕೇಳುತ್ತಿದ್ದರು. ಪೊಲೀಸ್​ ಠಾಣೆ ನಮಗೆ ಮಸೀದಿ, ಮಂದಿರವಿದ್ದಂತೆ. ಏನೇ ತೊಂದರೆಯಾದರೂ ನಾವು ಇಲ್ಲಿಗೆ ಬರುತ್ತೇವೆ. ಇಂತಹ ದುಷ್ಕೃತ ಎಸಗಿರುವುದು ನಿಜಕ್ಕೂ ದುರಂತ ಎಂದು ಮೌಲ್ವಿ ಮೌಲಾನ ಬೇಸರ ವ್ಯಕ್ತಪಡಿಸಿದ್ದಾರೆ.

Bengalruru Riot update
ಮೌಲಾನ ಫಿರ್ದೋಸ್​ ಪಾಷಾ
author img

By

Published : Aug 17, 2020, 5:28 PM IST

ಬೆಂಗಳೂರು: ಡಿ.ಜೆ ಹಳ್ಳಿ ಮತ್ತು ಕೆ.ಜಿ. ಹಳ್ಳಿಯಲ್ಲಿ ಗಲಭೆಗೆ ಕಾರಣವಾಗಿದ್ದ ಅವಹೇಳನಕಾರಿ ಪೋಸ್ಟ್ ಹಾಕಿದ್ದ ನವೀನ್ ವಿರುದ್ಧ ದೂರು ನೀಡಲು ಬಂದ ಮೌಲ್ವಿಯ ಬೈಕ್​ಗೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು.

ಘಟನೆ ಕುರಿತು ಮೌಲ್ವಿ ಮೌಲಾನ ಫಿರ್ದೋಸ್​ ಪಾಷಾ ಬೇಸರ

ಈ ಕುರಿತು ಪ್ರತಿಕ್ರಿಯಿಸಿದ ಮೌಲ್ವಿ ಮೌಲಾನ ಫಿರ್ದೋಸ್​ ಪಾಷಾ, ಅವಹೇಳನಕಾರಿ ಪೋಸ್ಟ್ ಹಾಕಿದವನ ವಿರುದ್ಧ ದೂರು ನೀಡಲು ನಾವು ಡಿ.ಜೆ. ಹಳ್ಳಿ ಠಾಣೆಗೆ ಬಂದಿದ್ದೆವು. ಈ ವೇಳೆ ಠಾಣಾಧಿಕಾರಿಗಳು ಒಂದೆರಡು ಗಂಟೆ ಕಾಲ ಕಾಯಿರಿ ಎಂದು ಹೇಳಿದ್ದರು‌‌‌. ಅದರಂತೆ ನಾವು ಠಾಣೆ ಮುಂದೆ ನಿಂತಿದ್ದಾಗ ಹೊರಗಡೆಯಿಂದ ಬಂದ ಗುಂಪೊಂದು ಗಲಭೆ ಎಬ್ಬಿಸಲು ಮುಂದಾಗಿತ್ತು. ಈ ವೇಳೆ ಗಲಾಟೆ ಎಬ್ಬಿಸದಂತೆ ನಾವು ಅವರಿಗೆ ಮನವಿ ಮಾಡಿದ್ದೆವು. ನಮ್ಮ ಮಾತು ಕೇಳದೆ ಠಾಣೆಗೆ ನುಗ್ಗಲು ಯತ್ನಿಸಿದ್ದರು.‌ ಠಾಣೆಯೊಳಗೆ ಹೋಗಲು ವಿಫಲಯತ್ನ ನಡೆಸಿ, ಬಳಿಕ ಪಾರ್ಕಿಂಗ್ ಲಾಟ್​ನಲ್ಲಿದ್ದ ನನ್ನ ಬೈಕ್​ ಸೇರಿದಂತೆ ಇತರ ವಾಹನಗಳನ್ನು ಸುಟ್ಟಿದ್ದಾರೆ ಎಂದು ತಿಳಿಸಿದರು.

ನನಗಿರುವ ಮಾಹಿತಿ ಪ್ರಕಾರ ಗಲಭೆಕೋರರು ಡಿ.ಜೆ. ಹಳ್ಳಿಯವರಲ್ಲ.‌ ಒಂದು ವೇಳೆ ಇಲ್ಲಿಯವರೇ ಆಗಿದ್ದರೆ ನನ್ನ ಮಾತನ್ನು ಕೇಳುತ್ತಿದ್ದರು. ಪೊಲೀಸ್​ ಠಾಣೆ ನಮಗೆ ಮಸೀದಿ, ಮಂದಿರವಿದ್ದಂತೆ,‌ ಏನೇ ತೊಂದರೆಯಾದರೂ ನಾವು ಇಲ್ಲಿಗೆ ಬರುತ್ತೇವೆ. ಇಂತಹ ದುಷ್ಕೃತ ಎಸಗಿರುವುದು ನಿಜಕ್ಕೂ ದುರಂತ ಎಂದು ಮೌಲಾನ ಬೇಸರ ವ್ಯಕ್ತಪಡಿಸಿದರು.​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.