ಬೆಂಗಳೂರು: ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನೈಸ್ ರೋಡ್ ಜಂಕ್ಷನ್ ನಿಂದ ರೈತರ ಹಿಂಡು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಕಡೆ ಹೊರಟಿದೆ.
ತುಮಕೂರು ರಸ್ತೆ ನೈಸ್ ರೋಡ್ ಬಳಿಯ ಮಾದಾವರ ಕ್ರಾಸ್ನಲ್ಲಿ ಸಾವಿರಾರು ರೈತರು ಜಮಾವಣೆಗೊಂಡಿದ್ದು, ರಾತ್ರಿಯಿಂದಲೇ ಹಾವೇರಿ, ಕೊಪ್ಪಳ, ಗದಗ, ರಾಯಚೂರು, ಚಿಕ್ಕಮಗಳೂರು ಜಿಲ್ಲೆಯ ರೈತರು ಆಗಮಿಸಿದ್ದಾರೆ.
ಟ್ರಾಕ್ಟರ್ ಮೂಲಕ ಪರೇಡ್ ನಡೆಸಬೇಕೆಂದಿದ್ದೆವು, ಆದರೆ, ಹಳ್ಳಿ ಹಳ್ಳಿಗಳಲ್ಲೇ ಟ್ರಾಕ್ಟರ್ಗಳನ್ನು ತಡೆದಿದ್ದಾರೆ. ಆದರೂ ಖಾಸಗಿ ವಾಹನಗಳಲ್ಲಿ, ಬಾಡಿಗೆ ವಾಹನಗಳಲ್ಲಿ ಬಂದಿದ್ದೇವೆ ಹಾಗೂ ನಗರದ ಕಡೆ ಹೊರಡಲಿದ್ದೇವೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಪೊಲೀಸರು ತಡೆದರೂ ಬೆಂಗಳೂರು ಪ್ರವೇಶ ಮಾಡ್ತೇವೆ ಎಂದು ರೈತರು ತಯಾರಾಗಿದ್ದಾರೆ. ಬೆಳಗ್ಗಿನ ಉಪಾಹಾರಕ್ಕೆ ರೈತರ ಅಡುಗೆ ತಯಾರಿಸ್ತಿದ್ದಾರೆ. ರಾಷ್ಟ್ರಧ್ವಜ, ಹಸಿರು ಬಾವುಟ ಹಿಡಿದು ಪ್ರತಿಭಟನೆ ಗೆ ಸಜ್ಜಾಗಿದ್ದಾರೆ. ಸುಮಾರು ಹನ್ನೆರಡು ಗಂಟೆ ವೇಳೆಗೆ ಬೆಂಗಳೂರು ಪ್ರವೇಶಕ್ಕೆ ತಯಾರಿ ನಡೆಸಿದ್ದಾರೆ.
ಯಡಿಯೂರಪ್ಪ ಅವರೇ ಇದೇನಾ ನಿಮ್ಮ ರೈತರ ಪರ ಸರ್ಕಾರ - ಟ್ರ್ಯಾಕ್ಟರ್ ತರುವ ರೈತರನ್ನು ಭಯೋತ್ಪಾದಕರ ತರ ಕಾಣ್ಣುತ್ತಿರ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.