ಬೆಂಗಳೂರು: ಬೆಳಗಾವಿಯಲ್ಲಿ 70 ವರ್ಷದ ವೃದ್ಧನ ಶವವನ್ನು ಆ್ಯಂಬುಲೆನ್ಸ್ ಸಿಗದೆ ಸೈಕಲ್ನಲ್ಲಿ ಸಾಗಿಸಿರುವ ಘಟನೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಸರ್ಕಾರದ ನಿರ್ಲಕ್ಷ್ಯ ಸ್ಪಷ್ಟವಾಗಿದೆ ಎಂದು ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ‘ಬೆಳಗಾವಿಯ ಕಿತ್ತೂರಿನ 70 ವರ್ಷದ ವೃದ್ಧನ ಶವವನ್ನು ಕುಟುಂಬ ಸದಸ್ಯರು ಮಳೆಯಲ್ಲಿ ನೆನೆಯುತ್ತಾ ಸೈಕಲ್ನಲ್ಲಿ ಸಾಗಿಸಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರೇ ಎಲ್ಲಿದೆ ನಿಮ್ಮ ಸರ್ಕಾರ? ಅವರಿಗೆ ಏಕೆ ಆ್ಯಂಬುಲೆನ್ಸ್ ಒದಗಿಸಲಿಲ್ಲ? ಈ ಅಸಮರ್ಥ ಸರ್ಕಾರಕ್ಕೆ ಮಾನವೀಯತೆ ಇಲ್ಲವಾಗಿದ್ದು, ಪರಿಸ್ಥಿತಿ ನಿಭಾಯಿಸಲು ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ದೂರಿದ್ದಾರೆ.
-
ಬೆಳಗಾವಿಯ ಕಿತ್ತೂರಿನ 70 ವರ್ಷದ ವೃದ್ಧನ ಶವವನ್ನು ಕುಟುಂಬ ಸದಸ್ಯರು ಮಳೆಯಲ್ಲಿ ನೆನೆಯುತ್ತಾ ಸೈಕಲ್ ನಲ್ಲಿ ಸಾಗಿಸಿದ್ದಾರೆ
— DK Shivakumar (@DKShivakumar) August 17, 2020 " class="align-text-top noRightClick twitterSection" data="
ಸಿಎಂ @BSYBJP ಅವರೇ ಎಲ್ಲಿದೆ ನಿಮ್ಮ ಸರ್ಕಾರ? ಅವರಿಗೆ ಏಕೆ ಆಂಬ್ಯುಲೆನ್ಸ್ ಒದಗಿಸಲಿಲ್ಲ?
ಈ ಅಸಮರ್ಥ ಸರ್ಕಾರಕ್ಕೆ ಮಾನವೀಯತೆ ಇಲ್ಲವಾಗಿದ್ದು, ಪಿಡುಗು ಪರಿಸ್ಥಿತಿಯನ್ನು ನಿಭಾಯಿಸಲು ಸಂಪೂರ್ಣವಾಗಿ ವಿಫಲವಾಗಿದೆ pic.twitter.com/dZxCj9sO9P
">ಬೆಳಗಾವಿಯ ಕಿತ್ತೂರಿನ 70 ವರ್ಷದ ವೃದ್ಧನ ಶವವನ್ನು ಕುಟುಂಬ ಸದಸ್ಯರು ಮಳೆಯಲ್ಲಿ ನೆನೆಯುತ್ತಾ ಸೈಕಲ್ ನಲ್ಲಿ ಸಾಗಿಸಿದ್ದಾರೆ
— DK Shivakumar (@DKShivakumar) August 17, 2020
ಸಿಎಂ @BSYBJP ಅವರೇ ಎಲ್ಲಿದೆ ನಿಮ್ಮ ಸರ್ಕಾರ? ಅವರಿಗೆ ಏಕೆ ಆಂಬ್ಯುಲೆನ್ಸ್ ಒದಗಿಸಲಿಲ್ಲ?
ಈ ಅಸಮರ್ಥ ಸರ್ಕಾರಕ್ಕೆ ಮಾನವೀಯತೆ ಇಲ್ಲವಾಗಿದ್ದು, ಪಿಡುಗು ಪರಿಸ್ಥಿತಿಯನ್ನು ನಿಭಾಯಿಸಲು ಸಂಪೂರ್ಣವಾಗಿ ವಿಫಲವಾಗಿದೆ pic.twitter.com/dZxCj9sO9Pಬೆಳಗಾವಿಯ ಕಿತ್ತೂರಿನ 70 ವರ್ಷದ ವೃದ್ಧನ ಶವವನ್ನು ಕುಟುಂಬ ಸದಸ್ಯರು ಮಳೆಯಲ್ಲಿ ನೆನೆಯುತ್ತಾ ಸೈಕಲ್ ನಲ್ಲಿ ಸಾಗಿಸಿದ್ದಾರೆ
— DK Shivakumar (@DKShivakumar) August 17, 2020
ಸಿಎಂ @BSYBJP ಅವರೇ ಎಲ್ಲಿದೆ ನಿಮ್ಮ ಸರ್ಕಾರ? ಅವರಿಗೆ ಏಕೆ ಆಂಬ್ಯುಲೆನ್ಸ್ ಒದಗಿಸಲಿಲ್ಲ?
ಈ ಅಸಮರ್ಥ ಸರ್ಕಾರಕ್ಕೆ ಮಾನವೀಯತೆ ಇಲ್ಲವಾಗಿದ್ದು, ಪಿಡುಗು ಪರಿಸ್ಥಿತಿಯನ್ನು ನಿಭಾಯಿಸಲು ಸಂಪೂರ್ಣವಾಗಿ ವಿಫಲವಾಗಿದೆ pic.twitter.com/dZxCj9sO9P
ನಿರಂತರವಾಗಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕರು, ಕೊರೊನಾ ನಿಯಂತ್ರಣದಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರ ಕೋವಿಡೇತರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕೂಡ ವಿಫಲವಾಗಿದೆ ಎಂದು ಆರೋಪಿಸುತ್ತಿದ್ದಾರೆ.