ಬೆಂಗಳೂರು : ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧ ಅಂದ್ರೆ ಪ್ರಜಾಪ್ರಭುತ್ವದ ದೇಗುಲ. ಅದಕ್ಕೆ ಅದರದ್ದೇ ಆದ ಗೌರವ, ಪಾವಿತ್ರತೆ ಇದೆ. ಆದರೆ, ಇಂಥ ಕೇಂದ್ರದಲ್ಲಿ ಬಿಯರ್ ಬಾಟಲ್ಗಳು ಪತ್ತೆಯಾಗಿದೆ.
ವಿಧಾನಮಂಡಲ ಅಧಿವೇಶನ ಇಂದಿನಿಂದ ಆರಂಭಗೊಂಡಿದೆ. ಇದೇ ಸಂದರ್ಭ ವಿಧಾನಸೌಧದ ಎರಡನೇ ಮಹಡಿಯಲ್ಲಿ ಬಿಯರ್ ಬಾಟಲ್ಗಳು ಪತ್ತೆಯಾಗಿದೆ. ಆದರೆ, ಯಾರು ಇದನ್ನು ಇಲ್ಲಿ ತಂದು ಇಟ್ಟರು? ಎಂಬುವುದು ಗೊತ್ತಾಗಿಲ್ಲ. ಬಿಗಿ ಭದ್ರತೆ, ತಪಾಸಣೆ ನಡುವೆಯೂ ಬಿಯರ್ ಬಾಟಲ್ಗಳು ಶಕ್ತಿ ಕೇಂದ್ರ ಸೇರಿದ್ದು ಹೇಗೆ? ಎಂಬ ಅನುಮಾನ ಮೂಡಿದೆ. ಕಿಡಿಗೇಡಿಗಳು ಶಕ್ತಿ ಕೇಂದ್ರದಲ್ಲೇ ಎಣ್ಣೆ ಪಾರ್ಟಿ ನಡೆಸಿದ್ದಾರಾ? ಎಂಬ ಅನುಮಾನವೂ ಮೂಡಿದೆ.
ವಿಧಾನಸೌಧದ ಎಲ್ಲ ಕಡೆಗೂ ಸಿಸಿ ಕ್ಯಾಮೆರಾ ಇವೆ. ಅಷ್ಟಿದ್ದರೂ ಕಿಡಿಗೇಡಿಗಳು ಬಿಯರ್ ಬಾಟಲ್ಗಳನ್ನು ತಂದಿರುವುದು ಅಚ್ಚರಿಗೆ ಕಾರಣವಾಗಿದೆ. ವಿಧಾನಸೌಧದ ಪಾವಿತ್ರತೆ ಕಾಪಾಡುವ ನಿಟ್ಟಿನಲ್ಲಿ ಈ ಬಗ್ಗೆ ತನಿಖೆ ನಡೆಯಬೇಕಾಗಿದೆ.
ಓದಿ: ಅವರು ನನ್ನನ್ನು ವಾಟ್ ಹೀರೋ ಅಂತಾ ಕರೀತಿದ್ದರು, ನಾನು ಅವರನ್ನು ಎವರ್ ಗ್ರೀನ್ ಹೀರೋಯಿನ್ ಅಂತಿದ್ದೆ: ಸಿದ್ದರಾಮಯ್ಯ