ಬೆಂಗಳೂರು: ಬೆಡ್ ಬುಕ್ಕಿಂಗ್ ದಂಧೆ ಬಯಲು ಮಾಡಿದ್ದ ಸಂಸದ ತೇಜಸ್ವಿ ಸೂರ್ಯ ಮೇ 4 ರಂದು ಒಂದೇ ಕೋಮಿನ 17 ಜನ ಸಿಬ್ಬಂದಿಯ ಹೆಸರನ್ನು ಬಹಿರಂಗಪಡಿಸಿದ್ದರು. ಬಳಿಕ ಆ 17 ಜನರನ್ನು ಬಿಬಿಎಂಪಿ ಕೆಲಸದಿಂದ ವಜಾಗೊಳಿಸಿತ್ತು. ಈಗ ಆ 17 ಸಿಬ್ಬಂದಿಯರನ್ನು ಬಿಬಿಎಂಪಿ ಮತ್ತೆ ಮರು ನೇಮಕ ಮಾಡಿಕೊಂಡಿದೆ.
ಗದ್ದಲ ಉಂಟಾದ ಹಿನ್ನಲೆ ಖಾಸಗಿ ಏಜೆನ್ಸಿಯವರು ಆ 17 ಜರನ್ನು ಪೂರ್ವ ಹಾಗೂ ಆರ್ಆರ್ ನಗರ ವಲಯದ ವಾರ್ ರೂಂಗಳಿಗೆ ಸ್ಥಳಾಂತರಿಸಿದ್ದರು. ಸದ್ಯ ಗೊಂದಲಗಳು ನಿವಾರಣೆಯಾಗಿದ್ದು, ಪೊಲೀಸ್ ವಿಚಾರಣೆ ನಡೆಯುತ್ತಿರುವುದರಿಂದ ಈ ಹದಿನೇಳು ಜನ ಸಿಬ್ಬಂದಿಯರನ್ನು ಮತ್ತೆ ದಕ್ಷಿಣ ವಲಯದ 6 ವಿಧಾನಸಭಾ ಕ್ಷೇತ್ರವಾರು ಇರುವ ವಾರ್ ರೂಂಗಳಿಗೆ ನಿಯೋಜನೆ ಮಾಡಲಾಗಿದೆ.
ಓದಿ: ಖಾಸಗಿ ಆ್ಯಂಬುಲೆನ್ಸ್ಗಳ ದುಪ್ಪಟ್ಟು ಹಣ ವಸೂಲಿಗೆ ಕಡಿವಾಣ ಸಂಬಂಧ ಸುಧಾಕರ್, ಸವದಿ ಚರ್ಚೆ
ಬೆಡ್ ಬುಕ್ಕಿಂಗ್, ಖಾಸಗಿ ಬೆಡ್ ಗಳ ಮಾಹಿತಿ, ಭರ್ತಿ ವಿಚಾರಗಳ ಕೆಲಸದ ಬದಲು ಅವರಿಗೆ ಸೋಂಕಿತರ ಕಾಂಟ್ಯಾಕ್ಟ್ ಟ್ರೇಸಿಂಗ್ ಮಾಡುವ ಕೆಲಸಗಳಿಗೆ ಮರುನಿಯೋಜನೆ ಮಾಡಲಾಗಿದೆ.
ಈವರೆಗೆ ದಕ್ಷಿಣ ವಲಯದ ಸೆಂಟ್ರಲ್ ರೂಂನಲ್ಲಿ ಕೆಲಸ ಮಾಡುತ್ತಿದ್ದವರನ್ನು ಅನಗತ್ಯ ಗೊಂದಲ ಅಥವಾ ಗಲಾಟೆ ಬೇಡ ಎಂದು ಕಾಂಟ್ಯಾಕ್ಟ್ ಟ್ರೇಸಿಂಗ್ ಕೆಲಸಕ್ಕೆ ನಿಯೋಜಿಸಲಾಗಿದೆ.
ಓದಿ: ಇಂದು ಅಸ್ಸೋಂನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಹಿಮಂತ ಬಿಸ್ವಾ
ವಲಯದ ಸೆಂಟ್ರಲ್ ವಾರ್ ರೂಂನಲ್ಲಿ 200 ಜನ ಕೆಲಸ ಮಾಡುತ್ತಿದ್ದಾರೆ. ಆದರೂ ಸಿಬ್ಬಂದಿ ಅಗತ್ಯವಿದ್ದಾರೆ. ಹೀಗಾಗಿ ವಲಯ ವ್ಯಾಪ್ತಿಗೆ ಬರುವ 6 ವಿಧಾನಸಭಾ ಕ್ಷೇತ್ರಗಳಿಗೆ ನಿಯೋಜಿಸಲಾಗಿದೆ. ಪ್ರತೀ ಸೋಂಕಿತರ 20 ಜನ ಪ್ರಾಥಮಿಕ ಸಂಪರ್ಕಿತರು, ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚುವ ಕೆಲಸಕ್ಕೆ ನಿಯೋಜಿಸಲಾಗಿದೆ ಎಂದು ದಕ್ಷಿಣ ವಲಯದ ಅಧಿಕಾರಿಯೊಬ್ಬರು ತಿಳಿಸಿದರು.
ಹಿನ್ನೆಲೆ...
ಬೆಡ್ ಬ್ಲಾಕಿಂಗ್ ಹಗರಣ ಬಯಲಾದ ಹಿನ್ನೆಲೆ ದಕ್ಷಿಣ ವಲಯದ ವಾರ್ ರೂಂನ 17 ಮಂದಿ ಗುತ್ತಿಗೆ ಸಿಬ್ಬಂದಿಯನ್ನು ಮೇ 5ರಂದು ಕೆಲಸದಿಂದ ತೆಗೆದು ಹಾಕಲಾಗಿತ್ತು. ಸಂಸದ ತೇಜಸ್ವಿ ಸೂರ್ಯ ಹೆಸರು ಬಯಲು ಮಾಡಿದ ಎಲ್ಲಾ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಅಂದು ಮಾಹಿತಿ ನೀಡಿದ್ದರು.
ಓದಿ: ಬಿಬಿಎಂಪಿ ಬೆಡ್ ಬ್ಲಾಕಿಂಗ್ ಹಗರಣ: 17 ಮಂದಿ ಗುತ್ತಿಗೆ ಸಿಬ್ಬಂದಿ ಅಮಾನತು