ಬೆಂಗಳೂರು: ಕೊರೊನಾ ವಿಶ್ವಾದ್ಯಂತ ಆತಂಕ ಸೃಷ್ಟಿ ಮಾಡಿರುವ ಬೆನ್ನಲ್ಲೇ ಸಿಲಿಕಾನ್ ಸಿಟಿಯ ಮಂದಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸೈಬರ್ ಖದೀಮರ ಹಾವಳಿ ಬಗ್ಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ನಿಮ್ಮ ಮನೆಯ ಹೆಣ್ಣು ಮಕ್ಕಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವ ಮುನ್ನ ಎಚ್ಚರಿಕೆ ವಹಿಸಿ. ಯಾವುದೇ ಕಾರಣಕ್ಕೂ ಡಿಪಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣು ಮಕ್ಕಳ ಫೋಟೋ ಹಾಗೂ ಮಕ್ಕಳ ಫೋಟೋಗಳನ್ನು ಅತಿಯಾಗಿ ಹಾಕಬೇಡಿ. ಅನಗತ್ಯವಾಗಿ ಫೋಟೋ ಹಾಕಿದ್ರೆ ಅದನ್ನು ಸೈಬರ್ ಖದೀಮರು ಉಪಯೋಗ ಮಾಡಿ, ನಿಮ್ಮ ಮುಖವನ್ನು ಮಾತ್ರ ಉಳಿಸಿ ಅದಕ್ಕೆ ಅಶ್ಲೀಲ ದೇಹ ಅಂಟಿಸಿ ಕೆಟ್ಟದಾಗಿ ಬಿಂಬಿಸ್ತಾರೆ.
ಹೀಗಾಗಿ ನಿಮ್ಮ ಜೀವನವನ್ನು ಖಾಸಗಿಯಾಗಿ ಇಟ್ಟುಕೊಂಡಷ್ಟು ಒಳ್ಳೆಯದು. ಸದ್ಯ ಸೈಬರ್ ಖದೀಮರು ಕೆಲಸ ಇಲ್ಲದೇ ಇದ್ದು, ಯಾವ ರೀತಿ ಲಾಭ ಮಾಡೋದು ಅನ್ನೋ ನಿಟ್ಟಿನಲ್ಲಿ ಇಂತಹ ಕೃತ್ಯಗಳಿಗೆ ಮುಂದಾಗಿದ್ದಾರೆ ಎಂದು ಭಾಸ್ಕರ್ ರಾವ್ ಎಚ್ಚರಿಕೆ ಸಂದೇಶ ನೀಡಿದ್ದಾರೆ.