ETV Bharat / state

ಯುಗಾದಿ ಹಬ್ಬ ಅಂತ ಬೆಂಗಳೂರು ಬಿಟ್ಟು ಊರಿಗೆ ಹೋಗುವ ಮುನ್ನ ಎಚ್ಚರ!

ಈಗಾಗಲೇ ಬೆಂಗಳೂರಿನಲ್ಲಿ ಕೊರೊನಾ ಸ್ಫೋಟಗೊಂಡಿದ್ದು ರಾಜ್ಯದ ಒಟ್ಟಾರೆ ಸೋಂಕಿನ ಪ್ರಕರಣಗಳ ಪೈಕಿ ಶೇ.60 ರಷ್ಟು ಬೆಂಗಳೂರಿನಲ್ಲಿ ದಾಖಲಾಗಿದೆ. ಹೀಗಾಗಿ, ಹಬ್ಬ, ಜಾತ್ರೆ ಅಂತ ಬೆಂಗಳೂರಿನಿಂದ ತಮ್ಮ ತಮ್ಮ ಗ್ರಾಮೀಣ ಪ್ರದೇಶಗಳಿಗೆ ಹೋಗದಿರಿ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕರು ಹಾಗೂ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಆಗಿರುವ ಡಾ.ಮಂಜುನಾಥ್ ಸಲಹೆ ನೀಡಿದ್ದಾರೆ.

ಯುಗಾದಿ ಹಬ್ಬ ಅಂತ ಬೆಂಗಳೂರು ಬಿಟ್ಟು ಊರಿಗೆ ಹೋಗುವ ಮುನ್ನ ಎಚ್ಚರ..!!

author img

By

Published : Apr 4, 2021, 6:45 PM IST

ಬೆಂಗಳೂರು: ಯುಗಾದಿ ಹಬ್ಬಕ್ಕೆ ಊರಿಗೆ ಹೋಗಬೇಕು. ಮನೆ ಮಂದಿ ಜೊತೆಗೆ ಹಬ್ಬವನ್ನ ಅದ್ಧೂರಿಯಾಗಿ ಆಚರಣೆ ಮಾಡಿ ಬರಬೇಕು ಅಂತ ಬೆಂಗಳೂರಿಗರು ಯೋಚನೆ ಮಾಡುತ್ತಿದ್ದರೆ, ಕೂಡಲೇ ಇದರಿಂದ ಹೊರಬನ್ನಿ. ಯಾಕೆಂದರೆ ಬೆಂಗಳೂರಿನಿಂದ ಊರಿನತ್ತ ಹೋಗೋದು ತುಂಬಾ ಡೇಂಜರ್ ಅಂತಿದ್ದಾರೆ ತಜ್ಞ ವೈದ್ಯರು.

ಯುಗಾದಿ ಹಬ್ಬ ಅಂತ ಬೆಂಗಳೂರು ಬಿಟ್ಟು ಊರಿಗೆ ಹೋಗುವ ಮುನ್ನ ಎಚ್ಚರ!

ಈಗಾಗಲೇ ಬೆಂಗಳೂರಿನಲ್ಲಿ ಕೊರೊನಾ ಸ್ಫೋಟಗೊಂಡಿದ್ದು ರಾಜ್ಯದ ಒಟ್ಟಾರೆ ಸೋಂಕಿನ ಪ್ರಕರಣಗಳ ಪೈಕಿ ಶೇ.60 ರಷ್ಟು ಬೆಂಗಳೂರಿನಲ್ಲಿ ದಾಖಲಾಗಿದೆ.‌ ಹೀಗಾಗಿ, ಹಬ್ಬ, ಜಾತ್ರೆ ಅಂತ ಬೆಂಗಳೂರಿನಿಂದ ಊರಿಗೆ ಹೋಗದಿರಿ ಅಂತ ಜಯದೇವ ಆಸ್ಪತ್ರೆಯ ನಿರ್ದೇಶಕರು ಹಾಗೂ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಆಗಿರುವ ಡಾ.ಮಂಜುನಾಥ್ ತಿಳಿಸಿದ್ದಾರೆ.

ಬೆಂಗಳೂರಿನ ಸೋಂಕು ಹಳ್ಳಿ ಹಳ್ಳಿಗೆ ಹಬ್ಬುವ ಆತಂಕವಿದ್ದು, ಈ ಹಿಂದೆ ಹೀಗೆ ನಗರದಿಂದ ಹಳ್ಳಿಗಳಿಗೆ ಸೋಂಕು ಹರಡಿತ್ತು. ಈಗ ಮತ್ತೆ ಯುಗಾದಿ ಹಬ್ಬ ಬರುತ್ತಿದೆ. ಈ ವರ್ಷ ನೀವೂ ಎಲ್ಲಿ ಇದ್ದೀರಾ ಅಲ್ಲೇ ಹಬ್ಬವನ್ನ ಆಚರಿಸಿ ಅಂತ ಸಲಹೆ ನೀಡಿದ್ದಾರೆ.‌

ಕೋವಿಡ್ ಕಂಟ್ರೋಲ್​ಗೆ ಸರ್ಕಾರ ಮಾತ್ರವಲ್ಲ, ಜನರು ಜವಾಬ್ದಾರಿ ತೆಗೆದುಕೊಳ್ಳಬೇಕು: ರಾಜ್ಯದಲ್ಲಿ ನಿರಂತರವಾಗಿ ಸೋಂಕು ಹೆಚ್ಚುತ್ತಿದ್ದು, ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲೇ ಶೇ.60 ರಷ್ಟು ಪ್ರಕರಣಗಳು ಕಾಣಿಸಿಕೊಳ್ಳುತ್ತಿದೆ. ಉಳಿದ ಶೇ 30-40 ಪ್ರಕರಣಗಳು ಬೇರೆ ಬೇರೆ ಜಿಲ್ಲೆಗಳಲ್ಲಿ ಕಂಡುಬಂದಿದೆ.‌ ಸೋಂಕು ನಿಯಂತ್ರಣಕ್ಕೆ ಈಗಾಗಲೇ ಮಾರ್ಗಸೂಚಿ ಜಾರಿಯಾಗಿದೆ. ಆದರೆ ಇದನ್ನ ಸರ್ಕಾರ ಮಾತ್ರವಲ್ಲ, ಜನರು ಕೂಡ ಜವಾಬ್ದಾರಿ ತೆಗೆದುಕೊಳ್ಳಬೇಕು ಅಂತ ಡಾ.ಮಂಜುನಾಥ್ ತಿಳಿಸಿದರು.

ಸರ್ಕಾರಕ್ಕೆ ಸಾರ್ವಜನಿಕರು ಸಹಕಾರ ನೀಡಿ, ಕೋವಿಡ್ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಹಲವು ಬಾರಿ ಮನವಿ ಮಾಡಲಾಗಿದ್ದು, ಇದನ್ನ ನಿರ್ಲಕ್ಷ್ಯ ಮಾಡದೇ ಜನರು ಸರಿಯಾದ ರೀತಿಯಲ್ಲಿ ಮಾಸ್ಕ್ ಅನ್ನ ಧರಿಸಬೇಕು. ಹಲವರು ಮಾಸ್ಕ್ ಹಾಕಿರುತ್ತಾರೆ. ಆದರೆ ಅದು ಸರಿಯಾದ ಕ್ರಮದಲ್ಲಿ ಇರುವುದಿಲ್ಲ. ಮೂಗು-ಬಾಯಿ ಎರಡು ಮುಚ್ಚಿರಬೇಕು ಎಂದು ಹೇಳಿದರು.

ಜನರು ಸಿನಿಮಾ, ಜಾತ್ರೆ, ಮದುವೆ ಕಾರ್ಯ, ದೇವಸ್ಥಾನ ಕಾರ್ಯದಲ್ಲಿ ಹೆಚ್ಚು ಸೇರಿದಂತೆ ಗುಂಪು ಸೇರುವ ಜಾಗವನ್ನ ಆದಷ್ಟು ಕಡಿಮೆ ಮಾಡುವಂತೆ ಮನವಿ ಮಾಡಿದ್ದಾರೆ. ಮುಂದಿನ ಎರಡು ತಿಂಗಳು ಬಹಳ ನಿರ್ಣಾಯಕ ಸಮಯವಾಗಿದ್ದು ಜನರು ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಅಪಾಯ ತಪ್ಪಿದ್ದಲ್ಲ ಅಂತ ಎಚ್ಚರಿಕೆ ನೀಡಿದ್ದಾರೆ.‌

ಈಗಾಗಲೇ ಮಹಾರಾಷ್ಟ್ರದಲ್ಲಿ ವಿಪರೀತ ಸೋಂಕು ಏರಿಕೆ ಆಗಿದ್ದು, ಜೀವಂತ ಉದಾಹರಣೆ ಇದೆ. ಒಂದು ಕಡೆ ಸೋಂಕು ತಡಿಬೇಕು, ಸುರಕ್ಷಿತವಾಗಿ ಇರಬೇಕು ಇದು ಜನರ ಕೈನಲ್ಲಿ ಇದೆ ಅಂತ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.