ಬೆಂಗಳೂರು: ಸೋಮು ಎಂಬ ವ್ಯಕ್ತಿಯೊಬ್ಬರು ತಕ್ಷಣಕ್ಕೆ ಹಣ ಬೇಕಾಗಿದ್ದರಿಂದ ರೂಪೀಸ್ ಪೇಸ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು, ಐದು ಸಾವಿರ ರೂ. ಹಣ ಪಡೆದುಕೊಂಡಿದ್ದಾರೆ. ಆದ್ರೆ ಈ ಹಣ ಕಟ್ಟಲು ಒಂದು ವಾರ ಗಡುವು ನೀಡಲಾಗಿತ್ತು. ಈ ವೇಳೆ, ಹಣ ಪಾವತಿಸದ ಕಾರಣ 17 ಸಾವಿರ ರೂ. ಕಟ್ಟಬೇಕು ಎಂದು ಆ್ಯಪ್ನವರು ಹೇಳಿದ್ದಾರೆ.
ಸೋಮು ಅವರು ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡ ನಂತರ 5 ಸಾವಿರ ರೂ.ಗೆ ಮನವಿ ಮಾಡಿದ್ದಾರೆ. ಬಳಿಕ ಆಧಾರ್ ಕಾರ್ಡ್, ಪಾನ್ ಕಾರ್ಡ್ ನೀಡಲು ಸೂಚಿಸಿದ್ದಾರೆ. ಎರಡನ್ನೂ ಸ್ಕ್ಯಾನ್ ಮಾಡಿ ಆ್ಯಪ್ನಲ್ಲಿ ಅಟ್ಯಾಚ್ ಮಾಡಿದ್ದು, ನಂತರ ಕಾಂಟ್ಯಾಕ್ಟ್ ಆ್ಯಕ್ಸಿಸ್ ಮಾಡಲು ತಿಳಿಸಿದ್ದಾರೆ. ಕಾಂಟ್ಯಾಕ್ಟ್ ಆ್ಯಕ್ಸಿಸ್ ಮಾಡಿದ ಬಳಿಕ ಸೋಮು ಅವರ ಅಕೌಂಟ್ಗೆ ರೂಪೀಸ್ ಪೇಸ್ ಆ್ಯಪ್ನವರು 15 ನಿಮಿಷದಲ್ಲಿ ಹಣವನ್ನು ಹಾಕಿದ್ದಾರೆ.
ಈ ಹಣ ನೀಡಲು ಒಂದು ವಾರಗಳ ಗಡುವು ನೀಡಲಾಗಿತ್ತು. ಒಂದು ವಾರದೊಳಗೆ ಹಣ ನೀಡದ ಕಾರಣ, ಆ್ಯಪ್ನವರು ಬಡ್ಡಿ ಹಾಕಿ 17 ಸಾವಿರ ರೂ. ಕಟ್ಟಬೇಕು ಎಂದಿದ್ದಾರೆ. ಇದರಿಂದ ಶಾಕ್ಗೆ ಒಳಗಾದ ಸೋಮು, ಕೊಟ್ಟಿದ್ದು 5 ಸಾವಿರ ನಾನೇಕೆ 17 ಸಾವಿರ ಕೊಡಬೇಕು ಎಂದಿದ್ದಾರೆ. ಬಳಿಕ ಆ್ಯಪ್ನವರು ನೀವು ಕೊಟ್ಟಿಲ್ಲ ಅಂದ್ರೆ ಲೀಗಲ್ ಆ್ಯಕ್ಷನ್ ತೆಗೆದುಕೊಳ್ಳುತೇವೆ ಎಂದಿದ್ದಾರೆ. ಈ ವೇಳೆ, ಸೋಮು ನಿಮ್ಮ ವಿಳಾಸ ಕೊಡಿ ನಾನು ಬಂದು ಮಾತಾಡುತ್ತೇನೆ ಎಂದಿದ್ದಾರೆ.
ಆವಾಗ ನಮಗೆ ಕಚೇರಿಯಿಲ್ಲ, ನೀವು ಹಣ ಪಾವತಿಸಿ ಎಂದು ಎಚ್ಚರಿಕೆ ನೀಡಿದ್ದಾರೆ. ಆಗ ಸೋಮು ಕೊಡಲ್ಲ ಎಂದಾಗ ನಿಮ್ಮ ಅಕೌಂಟ್ ಹಾಗೂ ಕಾಂಟ್ಯಾಕ್ಟ್ ಆಕ್ಸಿಸ್ ಆಗಿದೆ. ನಾವು ಏನು ಬೇಕಾದರೂ ಮಾಡಬಹುದು ಎಂದು ಆ್ಯಪ್ನ ಸಿಬ್ಬಂದಿ ತಿಳಿಸಿದ್ದಾರೆ. ಇದಕ್ಕೆ ಸೋಮು ತಲೆ ಕೆಡಿಸಿಕೊಳ್ಳದೇ ಸುಮ್ಮನಾಗಿದ್ದಾಗ ಅವರ ಫೋಟೋ ಎಡಿಟ್ ಮಾಡಿ ಈತ ಫ್ರಾಡ್ ಎಂದು ಪೋಸ್ಟ್ ಮಾಡಿದ್ದಾರೆ.
ಹಾಗೆ ಸೋಮುನ ಎಲ್ಲ ಕಾಂಟ್ಯಾಕ್ಟ್ಗೂ ಕಳುಹಿಸಿದ್ದಾರೆ. ಫ್ರೆಂಡ್ಸ್ ಕಾಲ್ ಮಾಡಿ ಹೇಳಿದಾಗ ವಿಷಯ ಬೆಳಕಿಗೆ ಬಂದಿದ್ದು, ಸದ್ಯ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಾಥಮಿಕ ತನಿಖೆಗೆ ಇಳಿದಾಗ, ಇದೇ ರೀತಿ ಕ್ಯಾಶ್ ಬೀ ಆ್ಯಪ್ನಲ್ಲಿ ಮೂರು ಜನರಿಗೆ ವಂಚನೆ ಮಾಡಿರುವ ವಿಚಾರ ಬಯಲಾಗಿದ್ದು ತನಿಖೆ ಮುಂದುವರೆದಿದೆ.