ಬೆಂಗಳೂರು: ರಾಜ್ಯ ಫುಟ್ಬಾಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಬಿಡಿಎಫ್‌ಎ ಸೂಪರ್ ಡಿವಿಜನ್ ಲೀಗ್ ಪಂದ್ಯದಲ್ಲಿ ಎಂಇಜಿ ಸೆಂಟರ್ ವಿರುದ್ಧ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ತವಕದಲ್ಲಿರುವ ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡಗಳ ನಡುವಿನ ಪಂದ್ಯ ಗೋಲಿಲ್ಲದೇ ಡ್ರಾದಲ್ಲಿ ಅಂತ್ಯಕಂಡಿದೆ.
ಮೊದಲ ಹಂತದಲ್ಲಿ ಇತ್ತಂಡಗಳು ಗೋಲು ಗಳಿಸಲು ಉತ್ತಮ ಪೈಪೋಟಿ ನೀಡಿದ ಕಾರಣ ಪಂದ್ಯ ಕುತೂಹಲದಿಂದ ಕೂಡಿತ್ತು. ಎಫ್‌ಸಿ ಬೆಂಗಳೂರು ಮೂರನೇ ಕ್ವಾರ್ಟರ್‌ನಲ್ಲಿ ಗೋಲು ಗಳಿಸಲು ಕಠಿಣ ಶ್ರಮವಹಿಸಿದರೂ ಯಾವುದೇ ಫಲ ದೊರೆಯಲಿಲ್ಲ. ಆರನೇ ನಿಮಿಷದಲ್ಲಿ ರಾಕೇಶ್ ಶರ್ಮಾ ಒದ್ದ ಚೆಂಡು ಗೋಲ್ ಬಾಕ್ಸ್‌ನ ಅಂಚಿಗೆ ತಗಲಿ ಹೊರನಡೆಯಿತು.
ಇದಾದ ಬಳಿಕ ಎಫ್‌ಸಿ ಬೆಂಗಳೂರು ಗೆ ಗೋಲು ಗಳಿಸಲು ಮತ್ತೊಂದು ಉತ್ತಮ ಅವಕಾಶ ಸಿಕ್ಕಿದ್ರು ಪ್ರಯೋಜನವಾಗಲಿಲ್ಲ. ಆದರೆ ಇರ್ಫಾನ್ ಒದ್ದ ಚೆಂಡನ್ನು ಎಂಇಜಿ ಗೋಲ್‌ಕೀಪರ್ ಉತ್ತಮ ರೀತಿಯಲ್ಲಿ ತಡೆದರು. ಪರಿಣಾಮ ಎಫ್‌ಸಿಬೆಂಗಳೂರು ಗೆ ಮತ್ತೊಂದು ಅವಕಾಶ ಕೈ ಜಾರಿತು.
ದ್ವಿತಿಯಾರ್ಧದಲ್ಲಿ ಇತ್ತಂಡಗಳಿಗೆ ಗೋಲು ಗಳಿಸಲು ಸಾಕಷ್ಟು ಅವಕಾಶ ಸಿಕ್ಕರೂ ಯಶಸ್ಸು ಕಾಣಲಿಲ್ಲ. ಪರಿಣಾಮ ಅಂತಿಮವಾಗಿ ಸ್ಕೋರ್‌ಲೈನ್‌ನಲ್ಲಿ 0-0 ದಾಖಲಾಗಿ ಪಂದ್ಯ ಗೋಲಿಲ್ಲದೇ ಡ್ರಾದಲ್ಲಿ ಮುಕ್ತಾಯಗೊಂಡಿತು.
ಓದಿ: Asia Cup 2022: ಪಾಕ್ ವಿರುದ್ಧ ಅಬ್ಬರಿಸಿದ ಪಾಂಡ್ಯ.. ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡ ಭಾರತ