ETV Bharat / state

ಬಿಡಿಎಯಿಂದ ಮೊದಲ ಬಾರಿಗೆ 'ಮಣ್ಣು ಸ್ಥಿರೀಕರಣ ತಂತ್ರಜ್ಞಾನ' ಬಳಸಿ ರಸ್ತೆ ನಿರ್ಮಾಣ

author img

By

Published : Dec 13, 2022, 10:17 PM IST

ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಅವರು ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್​ನಿಂದ ಕಾಚೋಹಳ್ಳಿವರೆಗಿನ ರಸ್ತೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು.

ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್
ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್
ಮಣ್ಣು ಸ್ಥಿರೀಕರಣ ತಂತ್ರಜ್ಞಾನ ಬಗ್ಗೆ ಬಿಡಿಎ ಅಧ್ಯಕ್ಷರಿಂದ ಮಾಹಿತಿ.

ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸಾಯಿಲ್ ಸ್ಟೆಬಿಲೈಸೇಶನ್ ಟೆಕ್ನಾಲಜಿ (ಮಣ್ಣು ಸ್ಥಿರೀಕರಣ ತಂತ್ರಜ್ಞಾನ)ಯನ್ನು ಬಳಸಿ ಬಿಡಿಎ 15 ಕಿಲೋಮೀಟರ್ ಉದ್ದದ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದೆ. ಮಂಗಳವಾರ ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್​ನಿಂದ ಕಾಚೋಹಳ್ಳಿವರೆಗಿನ ರಸ್ತೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವನಾಥ್, ಏಕಕಾಲಕ್ಕೆ ಜರ್ಮನ್ ಮೂಲದ 5 ಯಂತ್ರಗಳನ್ನು ಬಳಸಿ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತದೆ. ಈ ಯಂತ್ರಗಳ ಸಹಾಯದಿಂದ ದಿನಕ್ಕೆ ಸುಮಾರು ಅರ್ಧ ಕಿಲೋಮೀಟರ್ ಉದ್ದದ ರಸ್ತೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

40 ಕೋಟಿ ರೂಪಾಯಿ ವೆಚ್ಚ: ಈ ರಸ್ತೆ ನಿರ್ಮಾಣಕ್ಕೆ ಬಿಡಿಎ 40 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಸಾಮಾನ್ಯ ಡಾಂಬರ್ ರಸ್ತೆಗಿಂತ ಈ ರಸ್ತೆ ಗಟ್ಟಿಮುಟ್ಟಾಗಿರಲಿದ್ದು, ಇದಕ್ಕೆ ಕಾಂಕ್ರೀಟ್ ರಸ್ತೆಯ ವೆಚ್ಚಕ್ಕಿಂತ ಕಡಿಮೆ ವೆಚ್ಚ ತಗುಲಲಿದೆ. ಪ್ರಾಯೋಗಿಕವಾಗಿ ನಿರ್ಮಾಣವಾಗಲಿರುವ ಈ ರಸ್ತೆಯನ್ನು ಪರಿಶೀಲಿಸಿದ ನಂತರ ಹಂತಹಂತವಾಗಿ ಬಿಡಿಎ ನಿರ್ಮಾಣ ಮಾಡಲಿರುವ ಎಲ್ಲ ರಸ್ತೆಗಳನ್ನು ಈ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಲಾಗುತ್ತದೆ. 15 ಕಿಲೋಮೀಟರ್ ಉದ್ದದ ರಸ್ತೆಯು 10 ಮೀಟರ್ ಅಗಲವಿರಲಿದ್ದು, ಇದಕ್ಕೆ ಸುಮಾರು 40 ಕೋಟಿ ರೂಪಾಯಿ ವೆಚ್ಚವಾಗಲಿದೆ. ಕಾಮಗಾರಿ ಜನವರಿ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಈ ರಸ್ತೆ ನಿರ್ಮಾಣದಿಂದ ಸುತ್ತಮುತ್ತಲಿನ ಗ್ರಾಮಗಳ ಜನತೆ ಬೆಂಗಳೂರು ನಗರ ಮತ್ತು ವಿವಿಧ ನಗರಗಳಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಲಿದ್ದು ಆರ್ಥಿಕ, ಸಾಮಾಜಿಕವಾಗಿ ಅನುಕೂಲವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬಿಡಿಎ ಅಭಿಯಂತರ ಸದಸ್ಯ ಶಾಂತರಾಜಣ್ಣ, ಅಭಿಯಂತರರಾದ ಸುಷ್ಮಾ, ಸುರೇಶ್, ಪ್ರಕಾಶ್ ಸೇರಿದಂತೆ ಮತ್ತಿತರ ಅಧಿಕಾರಿಗಳು, ಸ್ಥಳೀಯ ಬಿಜೆಪಿ ಮುಖಂಡರು ಇದ್ದರು.

ಏನಿದು ಸಾಯಿಲ್ ಸ್ಟಬಿಲೈಸೇಶನ್ ಟೆಕ್ನಾಲಜಿ?: ರಸ್ತೆಯಲ್ಲಿನ ಮಣ್ಣು, ಡಾಂಬರ್, ಜಲ್ಲಿಯನ್ನು ಬಳಸಿಕೊಂಡು ರಸ್ತೆ ನಿರ್ಮಾಣ ಮಾಡುವ ತಂತ್ರಜ್ಞಾನವಿದು. 1 ಅಡಿ ಆಳದವರೆಗೆ ಇರುವ ಡಾಂಬರ್, ಜಲ್ಲಿ ಮತ್ತು ಮಣ್ಣನ್ನು ಜರ್ಮನ್​ನಿಂದ ತರಿಸಿರುವ ಯಂತ್ರಗಳಿಂದ ಪುಡಿ ಮಾಡಿ ಪೇಸ್ಟ್ ರೀತಿಯಲ್ಲಿ ಮಾರ್ಪಡಿಸಿ ಅದಕ್ಕೆ ಸಿಮೆಂಟ್, ರಾಸಾಯನಿಕ ಮತ್ತು ನೀರನ್ನು ಸೇರಿಸಿ ಮಣ್ಣನ್ನು ಸ್ಥಿರೀಕರಿಸಲಾಗುತ್ತದೆ. ಇದನ್ನು ರಸ್ತೆಗೆ ಹಾಕಿ 3 ದಿನಗಳವರೆಗೆ ಕ್ಯೂರಿಂಗ್ ಮಾಡಲಾಗುತ್ತದೆ. ನಂತರ ಅದರ ಮೇಲೆ ಜಿಯೋ ಟೆಕ್ಸ್​ಟೈಲ್ಸ್​ ಲೇಯರ್​ನ ಅತ್ಯಂತ ತೆಳುವಾದ ಪ್ಲಾಸ್ಟಿಕ್ ಶೀಟ್ ಅನ್ನು ಹಾಕಲಾಗುತ್ತದೆ. ಇದರ ಮೇಲೆ ಡಾಂಬರ್ ಹಾಕಲಾಗುತ್ತದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.

ಏಕಕಾಲಕ್ಕೆ ಐದು ಯಂತ್ರಗಳ ಬಳಕೆ: ಈ ರಸ್ತೆ ನಿರ್ಮಾಣಕ್ಕೆ ಏಕ ಕಾಲಕ್ಕೆ ಜರ್ಮನಿಯಿಂದ ತರಿಸಲಾಗಿರುವ ಐದು ಯಂತ್ರಗಳನ್ನು ಬಳಸಲಾಗುತ್ತದೆ.

1) ಸಾಯಿಲ್ ರೀಸೈಕ್ಲಿಂಗ್ ಮಶಿನ್
2) ಸಿಮೆಂಟ್ ಮಿಕ್ಸಿಂಗ್ ಮಶಿನ್
3) ಕೆಮಿಕಲ್ ಮಿಕ್ಸಿಂಗ್ ಮಶಿನ್
4) ಗ್ರೇಡರ್
5) ಕಾಂಪ್ಯಾಕ್ಟ್ ಮಶಿನ್

ಸಾಯಿಲ್ ರೀಸೈಕ್ಲಿಂಗ್ ಮಶಿನ್ ಹಾಲಿ ರಸ್ತೆಯಲ್ಲಿರುವ ಡಾಂಬರ್, ಜಲ್ಲಿಯನ್ನು ಪುಡಿ ಮಾಡುತ್ತದೆ. ಇದರ ನಂತರದ ಸಿಮೆಂಟ್ ಮಿಕ್ಸಿಂಗ್ ಯಂತ್ರವು ಡಾಂಬರ್ ಮತ್ತು ಜಲ್ಲಿಯ ಪುಡಿಗೆ ಸಿಮೆಂಟ್ ಅನ್ನು ಮಿಶ್ರಣ ಮಾಡುತ್ತದೆ. ನಂತರ ರಾಸಾಯನಿಕ ಮಿಶ್ರಣ ಯಂತ್ರದ ವಾಹನವು ಡಾಂಬರ್ ಮತ್ತು ಜಲ್ಲಿಯ ಮಿಶ್ರಣಕ್ಕೆ ರಾಸಾಯನಿಕವನ್ನು ಮಿಶ್ರಣ ಮಾಡಿ ಹದಗೊಳಿಸುತ್ತದೆ.

ನಂತರದಲ್ಲಿರುವ ಎರಡು ವಾಹನಗಳಲ್ಲಿ ಕ್ರಮವಾಗಿ ಗ್ರೇಡರ್ ಮತ್ತು ಕಾಂಪ್ಯಾಕ್ಟ್ ಯಂತ್ರವಿದ್ದು, ಗ್ರೇಡರ್ ಗುಣಮಟ್ಟವನ್ನು ಕಾಯ್ದುಕೊಳ್ಳಲಿದೆ. ಕಾಂಪ್ಯಾಕ್ಟ್ ಎಲ್ಲಾ ಮಿಶ್ರಣವನ್ನು ಒಟ್ಟುಗೂಡಿಸಿ ರಸ್ತೆಗೆ ಬಿಡುಗಡೆ ಮಾಡಿದ ನಂತರ ರೋಲರ್​ನಲ್ಲಿ ಬಿಗಿಗೊಳಿಸಲಾಗುತ್ತದೆ.

ಇದನ್ನೂ ಓದಿ: ವಂದೇಮಾತರಂ ಹಾಡಲು ಒಪ್ಪದ ಸಿದ್ದರಾಮಯ್ಯ ನಮ್ಮ ದೇಶದವರಲ್ಲ: ಬಿಡಿಎ ಅಧ್ಯಕ್ಷ ವಿಶ್ವನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.