ETV Bharat / state

ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್​ಗೆ ಪ್ರತಿಷ್ಠಿತ 'ಗೋಲ್ಡನ್ ಪೀಸ್ ಮೇಕರ್ ಸ್ಟಾರ್' ಪ್ರಶಸ್ತಿ

ಸಮಾಜಸೇವೆಯಲ್ಲಿ ಮತ್ತು ಸಮಾಜದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಕೋವಿಡ್-19 ಬಿಕ್ಕಟ್ಟು ಶಮನವಾದ ನಂತರ ವಿಶ್ವನಾಥ್ ಅವರನ್ನು ರಷ್ಯಾಗೆ ಆಮಂತ್ರಿಸಿ ಅಲ್ಲಿನ ಸಂಸತ್ತಿನಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ..

author img

By

Published : Jun 1, 2021, 8:55 PM IST

ಎಸ್.ಆರ್.ವಿಶ್ವನಾಥ್
ಎಸ್.ಆರ್.ವಿಶ್ವನಾಥ್

ಬೆಂಗಳೂರು : ಯಲಹಂಕ ಶಾಸಕ ಮತ್ತು ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್​ರನ್ನು ರಷ್ಯಾ ಸರ್ಕಾರದ ಪ್ರತಿಷ್ಠಿತ 'ಗೋಲ್ಡನ್ ಪೀಸ್ ಮೇಕರ್ ಸ್ಟಾರ್’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವಿಶ್ವನಾಥ್​ರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾರಿಷಸ್​ನ ಮಿನಿಸ್ಟರ್ ಕೌನ್ಸಲರ್ ಜೆ.ಬಿಸ್ಸೊಂಡೊಯಾಲ್ ಪ್ರಶಸ್ತಿ ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ಏಷ್ಯನ್ ಅಕಾಡೆಮಿ ಆಫ್ ಫಿಲ್ಮ್ ಅಂಡ್ ಟೆಲಿವಿಷನ್​ನ ಅಧ್ಯಕ್ಷ ಸಂದೀಪ್ ಮಾರ್ವ ಹಾಗೂ ರಷ್ಯಾ ಸರ್ಕಾರದ ಸಚಿವ ಗಾಡ್ಝಿಮುರಾಡ್ ಒಮರೊವ್ ಹಾಜರಿದ್ದು, ವಿಶ್ವನಾಥ್​ರಿಗೆ ಅಭಿನಂದನೆ ಸಲ್ಲಿಸಿದರು.

bda-sr-vishwanath-got-prestigious-golden-peace-maker-star-award
ವಿಡಿಯೋ ಕಾನ್ಫರೆನ್ಸ್ ಮೂಲಕ ಮಾರಿಷಸ್​ನ ಮಿನಿಸ್ಟರ್ ಕೌನ್ಸಲರ್ ಜೆ.ಬಿಸ್ಸೊಂಡೊಯಾಲ್ ಪ್ರಶಸ್ತಿ ಘೋಷಣೆ

ಸಮಾಜಸೇವೆಯಲ್ಲಿ ಮತ್ತು ಸಮಾಜದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಕೋವಿಡ್-19 ಬಿಕ್ಕಟ್ಟು ಶಮನವಾದ ನಂತರ ವಿಶ್ವನಾಥ್ ಅವರನ್ನು ರಷ್ಯಾಗೆ ಆಮಂತ್ರಿಸಿ ಅಲ್ಲಿನ ಸಂಸತ್ತಿನಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಪ್ರತಿಷ್ಠಿತ 'ಗೋಲ್ಡನ್ ಪೀಸ್ ಮೇಕರ್ ಸ್ಟಾರ್' ಪ್ರಶಸ್ತಿ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವನಾಥ್, ರಷ್ಯಾ ದೇಶದ ಪ್ರತಿನಿಧಿಗಳು ನನ್ನ ಜನಸೇವೆ ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಇದರಿಂದಾಗಿ ನನ್ನ ಜವಾಬ್ದಾರಿ ಹೆಚ್ಚಿದೆ ಮತ್ತು ನಾನು ಕಳೆದ ಮೂರು ದಶಕಗಳಿಂದ ಮಾಡಿರುವ ಜನಸೇವೆಯನ್ನು ಮತ್ತಷ್ಟು ವಿಸ್ತಾರಗೊಳಿಸಲು ಶಕ್ತಿ ಮತ್ತು ಸ್ಫೂರ್ತಿಯನ್ನು ತುಂಬಿದಂತಾಗಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.