ETV Bharat / state

ಬೆಳೆಯಬಾರದು ಎಂಬ ಕುತಂತ್ರಕ್ಕೆ ತಕ್ಕ ಉತ್ತರ ಎಲ್ಲಿ ಕೊಡಬೇಕು ಅಂತ ಗೊತ್ತಿದೆ: ವಿಜಯೇಂದ್ರ ಎದಿರೇಟು - ಈಟಿವಿ ಭಾರತ್​ ಕರ್ನಾಟಕ

ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ಮಾಡಿದ್ದರು. ಆದರೂ ಅವರು ರಾಜ್ಯದ ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಪ್ಪಿಸೋಕೆ ಆಗಿರಲಿಲ್ಲ. 30 ಕೇಸ್ ಈಗಾಗಲೇ ಎದುರಿಸಿದ್ದೇವೆ, ಇದು 31 ನೇ ಕೇಸ್. ಯಾವನಿಗೂ ಹೆದರಿ ಓಡಿ ಹೋಗುವ ಪ್ರಶ್ನೆ ಉದ್ಭವ ಆಗಲ್ಲ ಎಂದು ಬಿ ವೈ ವಿಜಯೇಂದ್ರ ಹೇಳಿದ್ದಾರೆ.

BDA Housing Scheme Illegal Allegation b  y  Vijayendra reaction
ಬಿ ವೈ ವಿಜಯೇಂದ್ರ
author img

By

Published : Sep 24, 2022, 4:30 PM IST

ಬೆಂಗಳೂರು: ವಿಜಯೇಂದ್ರ ರಾಜಕೀಯವಾಗಿ ಬೆಳೆಯಬಾರದು ಅಂತ ಕುತಂತ್ರ ಹೂಡಲಾಗಿದೆ. ಇದಕ್ಕೆ ತಕ್ಕ ಉತ್ತರವನ್ನು ಎಲ್ಲಿ ಕೊಡಬೇಕು, ಯಾರಿಗೆ ಕೊಡಬೇಕು ಅಂತ ಗೊತ್ತಿದೆ. ನನಗೂ ಕೂಡಾ ರಾಜಕೀಯವಾಗಿ ಬೆಳೆಯುತ್ತಿರುವ ಸಂದರ್ಭ ಇದು. ಈ ತರಹದ ಸವಾಲುಗಳು ಬಂದಾಗ ನಮಗೂ ಬೆಳೆಯೋಕೆ ಸುಲಭ. ಈ ಸವಾಲುಗಳನ್ನು ಬಹಳ ಸಂತೋಷದಿಂದ ಎದುರಿಸುತ್ತೇನೆ. ಎಷ್ಟೇ ಕೇಸ್ ಹಾಕಿದರೂ ಎದುರಿಸುತ್ತೇವೆ, ತಲೆ ಕೆಡಿಸಿಕೊಳ್ಳಲ್ಲ ಎಂದು ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಡಿಎ ವಸತಿ ಯೋಜನೆ ಅಕ್ರಮ ಆರೋಪದ ಬಗ್ಗೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಪೊಲೀಸ್ ಠಾಣೆಯಲ್ಲಿ ತನಿಖೆ ಆಗಿದೆ. ಎಸಿಬಿಯಲ್ಲಿ ಇದೇ ಅಬ್ರಹಾಂ ದೂರು ಕೊಟ್ಟಿದ್ದರು. ರಾಜ್ಯಪಾಲರಿಗೆ ಸ್ಯಾಂಕ್ಷನ್ ಕೇಳಿದಾಗ ರಿಜೆಕ್ಟ್ ಆಗಿತ್ತು. ಯಡಿಯೂರಪ್ಪ ಮೇಲಿನ ಆರೋಪದಲ್ಲಿ ಶೇ 0.1 ಸತ್ಯವೂ ಇಲ್ಲ. ನಾವು ಹೆದರಿ ಓಡಿ ಹೋಗಲ್ಲ. 30 ಕೇಸ್ ಈಗಾಗಲೇ ಎದುರಿಸಿದ್ದೇವೆ, ಇದು 31 ನೇ ಕೇಸ್. ಯಾವನಿಗೂ ಹೆದರಿ ಓಡಿ ಹೋಗುವ ಪ್ರಶ್ನೆ ಉದ್ಭವ ಆಗಲ್ಲ ಎಂದು ತಿಳಿಸಿದರು.

ವಿಜಯೇಂದ್ರ ಬೆಳೆಯಬಾರದು ಎಂಬ ಕುತಂತ್ರಕ್ಕೆ ತಕ್ಕ ಉತ್ತರ ಎಲ್ಲಿ ಕೊಡಬೇಕು ಅಂತ ಗೊತ್ತಿದೆ

ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ಮಾಡಿದ್ದರು. ಆದರೂ ಅವರು ರಾಜ್ಯದ ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಪ್ಪಿಸೋಕೆ ಆಗಿರಲಿಲ್ಲ. ರಾಜಕೀಯ ವಿರೋಧಿಗಳು ಏನೇ ಷಡ್ಯಂತರ ಮಾಡಿದರೂ ಯಶಸ್ವಿ ಆಗಿಲ್ಲ. ಮುಂದೆಯೂ ಕೂಡಾ ವಿರೋಧಿಗಳು ಯಶಸ್ವಿಯಾಗಲ್ಲ. ರಾಜಕೀಯ ವಿರೋಧಿಗಳ ಷಡ್ಯಂತರ ಮೆಟ್ಟಿನಿಲ್ಲುವ ತಾಕತ್ತು ನನಗೆ ಇದೆ ಎಂದರು.

ರಾಜಕೀಯ ಕೈವಾಡ : ರಾಜಕೀಯ ವಿರೋಧಿಗಳೆಲ್ಲರ ಕೈವಾಡ ಇದರಲ್ಲಿದೆ. ಬಿಜೆಪಿಯವರ ಕೈವಾಡ ಇದೆ ಅಂತ ನಾನು ಹೇಳುತ್ತಿಲ್ಲ. ನಮ್ಮ ವಿರುದ್ಧ ರಾಜಕೀಯ ವಿರೋಧಿಗಳು ಷಡ್ಯಂತ್ರ ಮಾಡಿದ್ದಾರೆ. ಆ ರಾಜಕೀಯ ವಿರೋಧಿಗಳು ಪಕ್ಷದವರಾ? ಹೊರಗಿನವರಾ? ಅಂತ ಹೇಳಲ್ಲ. ಅವರು ರಾಜಕೀಯ ವಿರೋಧಿಗಳು ಅಂತ ಮಾತ್ರ ಹೇಳುತ್ತೇನೆ. ನೀವೇ ಅರ್ಥ ಮಾಡಿಕೊಳ್ಳಿ ಎಂದು ಸೂಚ್ಯವಾಗಿ ತಿಳಿಸಿದರು.

ಯತ್ನಾಳ್ ಪಕ್ಷಕ್ಕೂ ಡ್ಯಾಮೇಜ್ ಮಾಡುತ್ತಿದ್ದಾರೆ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಲು ವಿಜಯೇಂದ್ರ ಅಡ್ಡಿ ಎಂಬ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಂಚಮಸಾಲಿ ಸಮುದಾಯದ ದಿಕ್ಕು ತಪ್ಪಿಸುವ ಯತ್ನ ನಡೀತಿದೆ. ಸಮಾಜ ಒಡೆಯುವ ಕೆಲಸವನ್ನು ರಾಜಕೀಯ ವಿರೋಧಿಗಳು ಮಾಡುತ್ತಿದ್ದಾರೆ. ಪದೇ ಪದೆ ಆ ತರದ ಹೇಳಿಕೆಗಳನ್ನು ನೀಡುವ ಮೂಲಕ ಯತ್ನಾಳ್ ಪಕ್ಷಕ್ಕೂ ಡ್ಯಾಮೇಜ್ ಮಾಡುತ್ತಿದ್ದಾರೆ ಎಂದರು.

ಯಡಿಯೂರಪ್ಪ ಅಧಿಕಾರದಲ್ಲಿ ಇದ್ದಾಗ ಎಲ್ಲ ಮಠ, ಜಾತಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅಂಥವರು ಇವತ್ತು ವಿರೋಧ ಮಾಡುತ್ತಾರೆ ಅಂತ ಪದೇ ಪದೆ ಆರೋಪ ಮಾಡಲಾಗುತ್ತಿದೆ. ಯಡಿಯೂರಪ್ಪ ಮೇಲೆ ಆರೋಪ ಮಾಡುವ ಮೂಲಕ ರಾಜಕೀಯ ಸಂಚು ಮಾಡಲಾಗಿದೆ. ಮೀಸಲಾತಿಗೆ ಯಾವುದೇ ಕಾರಣಕ್ಕೂ ವಿರೋಧ ಇಲ್ಲ ಅಂತ ಯಡಿಯೂರಪ್ಪ ಅವರು ಸದನದಲ್ಲೂ ಹೇಳಿದ್ದಾರೆ ಎಂದರು.

ಇತಿಹಾಸದಲ್ಲಿ ಉದಾಹರಣೆನೇ ಇಲ್ಲ: ರಾಜ್ಯದ ಇತಿಹಾಸದಲ್ಲಿ ಒಬ್ಬ ಮಾಜಿ ಮುಖ್ಯಮಂತ್ರಿ ವಿರುದ್ಧ 28, 30 ಕ್ರಿಮಿನಲ್ ಕೇಸ್ ಹಾಕಿದ ಉದಾಹರಣೆಯೇ ಇಲ್ಲ. ನಾವು ಬಹುತೇಕ ಎಲ್ಲ‌ ಕೇಸ್​ಗಳಲ್ಲೂ ಜಯಶಾಲಿ ಆಗಿದ್ದೇವೆ. ಈಗ ಮೊನ್ನೆ ಹೊಸ ಪ್ರಕರಣ ಉದ್ಭವ ಆಗಿದೆ. ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರ ಎಸ್‌ಎಲ್‌ಪಿಗೆ ಸುಪ್ರೀಂಕೋರ್ಟ್ ಸ್ಟೇ ಕೊಟ್ಟಿದೆ. ನಾವ್ಯಾರೂ ಅರ್ಜಿ ಹಾಕಿಲ್ಲದಿದ್ರೂ ಉಳಿದವರ ವಿರುದ್ಧ ತನಿಖೆ ನಡೆಸಿ ಅಂತ ಕೋರ್ಟ್ ಹೇಳಿಲ್ಲ ಎಂದರು.

ಆರೋಪ ಬಗ್ಗೆ ಮಾನನಷ್ಟ ಮೊಕದ್ದಮೆ : ಯಡಿಯೂರಪ್ಪ ಅವರು ಬಿಡಿಎಯಲ್ಲಿ ಯಾವ ಕಂಪನಿಗೂ ಗುತ್ತಿಗೆ ಕೊಟ್ಟಿಲ್ಲ. ಆ ಕಂಪನಿಯಿಂದ ಕೋಲ್ಕತ್ತಾ ಮೂಲದ ಐದು ಕಂಪೆನಿಗಳಿಗೆ 7.5 ಕೋಟಿ ಹಣ ಸಂದಾಯವಾಗಿದೆ ಎಂಬ ಆರೋಪವನ್ನು ಮಾಡಿದ್ದಾರೆ. ಒಂದು ರೂಪಾಯಿ ಕೂಡಾ ಹಣ ಸಂದಾಯ ಆಗಿಲ್ಲ. ಇದೆಲ್ಲದರ ಬಗ್ಗೆ ನಾವು ಮಾನನಷ್ಟ ಕೇಸ್​ನಲ್ಲಿ ಪ್ರಶ್ನಿಸಿದ್ದೇವೆ. ಮುಂದಿನ ದಿನಗಳಲ್ಲಿ ಕೋರ್ಟ್​ನಲ್ಲೂ ಸಹ ಪ್ರಶ್ನಿಸುತ್ತೇವೆ. ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಬೇಕು ಅಂತ ಕುತಂತ್ರ ಇದು ಎಂದು ಆರೋಪಿಸಿದರು.

ಕಾಂಗ್ರೆಸ್ ಅಭಿಯಾನವನ್ನು ಎದುರಿಸುತ್ತೇವೆ: ಯಾರೋ ಒಬ್ಬ ಗುತ್ತಿಗೆದಾರ ಆರೋಪ ಮಾಡಿದ ಅಂತ ಅದನ್ನೇ ಕಾಂಗ್ರೆಸ್ ನವರು ರಾಜ್ಯಾದ್ಯಂತ ಬೊಮ್ಡಾ ಹೊಡೆದುಕೊಂಡು ಓಡಾಡ್ತಿದ್ದಾರೆ. ದಾಖಲೆ ಇಲ್ಲದೇ ಆರೋಪ ಮಾಡ್ತಿದ್ದಾರೆ. ಕಾಂಗ್ರೆಸ್ ಅಭಿಯಾನವನ್ನು ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ಎದುರಿಸ್ತೇವೆ ಎಂದರು.

ಇದನ್ನೂ ಓದಿ : 2006ರಿಂದ ಇಲ್ಲಿಯವರೆಗೆ ನಡೆದ ಎಲ್ಲ ಹಗರಣಗಳ ನ್ಯಾಯಾಂಗ ತನಿಖೆ ನಡೆಸಿ: ಸಿದ್ದರಾಮಯ್ಯ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.