ಬೆಂಗಳೂರು: ಬಿಡಿಎ ಐದನೇ ಹಂತದ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, 451 ನಿವೇಶನಗಳ ಪೈಕಿ 317 ನಿವೇಶನಗಳು ಮಾರಾಟಗೊಂಡಿದ್ದು ಶೇ. 50.93 ರಷ್ಟು ಹೆಚ್ಚಿನ ಗಳಿಕೆಯಾಗಿದೆ.
ಇದನ್ನೂ ಓದಿ : ಬಿಡಿಎ ಆವರಣದಲ್ಲೇ ವಂಚಕರ ಜಾಲ: ಭೂಮಿಗೆ ಕಡಿಮೆ ಬೆಲೆ ಅಂತ ನಂಬಿದ್ರೆ ಬೀಳುತ್ತೆ ಪಂಗನಾಮ!
ನಾಲ್ಕು ಲಕ್ಷ ರೂ.ಗಳ ಇ.ಎಂ.ಡಿ ಪಾವತಿಸಿ ಒಟ್ಟು 1496 ಬಿಡ್ಡುದಾರರು ಬಿಡ್ಡಿಂಗ್ನಲ್ಲಿ ಭಾಗವಹಿಸಿದ್ದರು. ಹರಾಜಿಗಿಟ್ಟದ್ದ ಮೌಲ್ಯದಲ್ಲಿ ಶೇ. 50.93 ರಷ್ಟು ಹೆಚ್ಚಿನ ಗಳಿಕೆಯಾಗಿದೆ. ಯಶಸ್ವಿಯಾಗದ ಬಿಡ್ದಾರರಿಗೆ ಪ್ರಾರಂಭಿಕ ಠೇವಣಿಯಾದ ರೂ. 4 ಲಕ್ಷ ಹಣವನ್ನು ಹಿಂದಿರುಗಿಸುವ ಪ್ರಕ್ರಿಯೆ ಜಾರಿಯಲ್ಲಿದೆ.
ಒಟ್ಟು ವಿವರ:
- ಅಧಿಸೂಚನೆಗೊಂಡ ಒಟ್ಟು ನಿವೇಶನ 451
- ಪ್ರತಿಕ್ರಿಯೆ ಬಾರದಿರುವುದು 109
- ನಿರೀಕ್ಷಿತ ದರದ ಗುರಿ ತಲುಪದೇ ರದ್ದಾದ ನಿವೇಶನ 25
- ಮಾರಾಟವಾದ ಒಟ್ಟು ನಿವೇಶನ 317
- ಒಟ್ಟು ಬಿಡ್ಡುದಾರರು 1496
- ಒಟ್ಟು ಮೂಲ ಬೆಲೆ 184.57
- ಒಟ್ಟು ಹರಾಜು ಮೌಲ್ಯ 278.58
- ಗಳಿಕೆ 94.01
- ಶೇಕಡಾವಾರು ಗಳಿಕೆ ಶೇ 50.93
ಸದ್ಯದಲ್ಲೇ ಆರನೇ ಹಂತದ ಅಧಿಸೂಚನೆ ಹೊರಡಿಸಲಾಗುವುದು ಎಂದು ಬಿಡಿಎ ಪ್ರಕಟಿಸಿದೆ.