ಬೆಂಗಳೂರು : ಸಾರ್ವಜನಿಕ ಸ್ಥಳಗಳು, ರಸ್ತೆ, ಪಾರ್ಕ್‌ನಂತಹ ಜಾಗಗಳಲ್ಲಿರುವ ಅನಧಿಕೃತ ದೇವಾಲಯಗಳು, ಚರ್ಚ್, ಮಸೀದಿಗಳ ಸರ್ವೇಯನ್ನು ಬಿಬಿಎಂಪಿ ಮಾಡಿ ಮುಗಿಸಿದೆ. ಹೈಕೋರ್ಟ್ ಆದೇಶ ನೀಡದ ಬೆನ್ನಲ್ಲೆ ಅನಧಿಕೃತ ಕಟ್ಟಡಗಳ ಪಟ್ಟಿಯನ್ನು ಬಿಬಿಎಂಪಿ ಸಿದ್ಧಪಡಿಸಿದೆ.
![bbmp-which-conducted-a-survey-of-unauthorized-religious-buildings](https://etvbharatimages.akamaized.net/etvbharat/prod-images/kn-bng-01-illegal-temple-7202707_29012021135145_2901f_1611908505_841.jpg)
ನಗರದಲ್ಲಿ ಒಟ್ಟು 1,509 ಅನಧಿಕೃತ ದೇವಾಲಯಗಳು, ಚರ್ಚ್, ಮಸೀದಿಗಳಿವೆ ಎಂದು ಪಟ್ಟಿ ಮಾಡಿದೆ. ಪ್ರತಿ ವಲಯವಾರು ಅನಧಿಕೃತ ದೇವಾಲಯ, ಚರ್ಚ್, ಮಸೀದಿಗಳ ವಿವರಗಳಿವೆ. ಸೆಪ್ಟೆಂಬರ್ 29, 2009ಕ್ಕೂ ಮೊದಲಿದ್ದ ಕಟ್ಟಡಗಳು ಹಾಗೂ ನಂತರದ ಕಟ್ಟಡಗಳ ವಿವರವನ್ನು ಹೈಕೋರ್ಟ್ಗೆ ಸಲ್ಲಿಸಿದೆ.
![-unauthorized-religious-buildings](https://etvbharatimages.akamaized.net/etvbharat/prod-images/kn-bng-01-illegal-temple-7202707_29012021135145_2901f_1611908505_132.jpg)
2009ರ ಸಪ್ಟೆಂಬರ್ ನಂತರ ನಿರ್ಮಾಣವಾದ ಧಾರ್ಮಿಕ ಕಟ್ಟಡಗಳಿಗೆ ನೋಟಿಸ್ ಕೊಟ್ಟು ತೆರವು ಮಾಡಲು ಕ್ರಮಕೈಗೊಳ್ಳುವಂತೆ ಕೋರ್ಟ್ ಈ ಹಿಂದೆ ಸೂಚನೆ ಕೊಟ್ಟಿದ್ದರೂ ಪಾಲಿಕೆ ನಿರ್ಲಕ್ಷ್ಯವಹಿಸಿತ್ತು. ಇದೀಗ ಕೋರ್ಟ್ ವರದಿ ಕೇಳಿದ ಹಿನ್ನೆಲೆ ಸರ್ವೇ ನಡೆಸಿ ವಿವರ ನೀಡಿದೆ.
ಇದನ್ನೂ ಓದಿ: ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮನನ್ನ ಬಂಧಿಸಿದ ಪೊಲೀಸರು